ಮಣಿಪಾಲ: ಶ್ರೀ ಶಾರದಾ ಟೀಚರ್ ಟೈನಿಂಗ್ ಇನ್ಸ್ಟಿಟ್ಯೂಟ್ ನಲ್ಲಿ ವಿಶೇಷ ಕಲಾ ತರಬೇತಿ ಕಾರ್ಯಕ್ರಮ

ಮಣಿಪಾಲ: ಶ್ರೀ ಶಾರದಾ ಟೀಚರ್ ಟೈನಿಂಗ್ ಇನ್ಸ್ಟಿಟ್ಯೂಟ್ ನ ಶಿಕ್ಷಕಿಯರಿಗೆ ಮಕ್ಕಳಲ್ಲಿನ ಕಲ್ಪನಾಲೋಕವನ್ನು ವ್ಯಕ್ತಪಡಿಸುವ ಪರಿ ಮತ್ತು ಕಲಾ ಮಹತ್ವತೆಯ ಬಗ್ಗೆ ವಿಶೇಷ ಕಲಾ ತರಬೇತಿಯನ್ನು ನೀಡಲಾಯಿತು.

ಮಣಿಪಾಲದ ತ್ರಿವರ್ಣ ಕಲಾಕೇಂದ್ರದ ಮುಖ್ಯಸ್ಥ, ಕಲಾವಿದ ಹರೀಶ್ ಸಾಗರ್ ರೇಖೆ, ಆಕಾರ, ಬಣ್ಣ, ಸಮತೋಲನ, ಸಂಯೋಜನೆಗಳಿಂದ ಕಲ್ಪನೆಯ ಚಿತ್ರವು ಸಾಕಾರಗೊಳಿಸುವಲ್ಲಿ ಕಲಾ ಶಿಕ್ಷಣ ಮುಖ್ಯವಾಹಿನಿಯಾಗಿದ್ದು, ಪೂರ್ವ ಪ್ರಾಥಮಿಕ ಮಕ್ಕಳಲ್ಲಿನ ಕಲಾ ಪ್ರಜ್ಞೆಯನ್ನು ಹೇಗೆ ಅವಲೋಕಿಸಬೇಕೆಂದು ತಿಳಿಯ ಪಡಿಸಿದರು. ಸಂಸ್ಥೆಯ ಸಂಯೋಜಕಿ ಸುನೀತಾ ಅವಕಾಶ ಕಲ್ಪಿಸಿಕೊಟ್ಟರು.