ಉಡುಪಿ ಧರ್ಮಪ್ರಾಂತ್ಯದ ಅಧಿಕೃತ ಪುಣ್ಯಕ್ಷೇತ್ರವಾಗಿ ಘೋಷಣೆಯಾಗಲಿದೆ ಕಲ್ಮಾಡಿ ವೆಲಂಕಣಿ ಮಾತೆಯ ಕೇಂದ್ರ

ಉಡುಪಿ: ಆಗಸ್ಟ್ 15 ರಂದು ಕಲ್ಮಾಡಿಯಲ್ಲಿರುವ ವೆಲಂಕಣಿ ಮಾತೆಯ ಕೇಂದ್ರವನ್ನು ಉಡುಪಿ ಧರ್ಮಪ್ರಾಂತ್ಯದ ಅಧಿಕೃತ ಪುಣ್ಯಕ್ಷೇತ್ರವೆಂದು ಘೋಷಣೆ ಮಾಡಲಾಗುವುದು ಮತ್ತು ಚರ್ಚಿನ ಸುವರ್ಣಮಹೋತ್ಸವವನ್ನು ಆಚರಿಸಲಾಗುವುದು ಎಂದು ಚರ್ಚಿನ ಧರ್ಮಗುರುಗಳಾದ ವಂ. ಬ್ಯಾಪ್ಟಿಸ್ಟ್ ಮಿನೇಜಸ್ ಹೇಳಿದರು. ಉಡುಪಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾಹಿತಿ ನೀಡಿದ ಅವರು, ಕಲ್ಮಾಡಿಯಲ್ಲಿರುವ ವೆಲಂಕಣಿ ಮಾತೆಯ ಕೇಂದ್ರವು ಪ್ರಪಂಚಾದಾದ್ಯಂತ ಬಹಳ ಪ್ರಸಿದ್ದವಾಗಿದ್ದು ವೆಲಂಕಣಿ ಮಾತೆಯ ಪ್ರತಿಮೆಯನ್ನು 1988 ಅಗಸ್ಟ್ 15 ರಂದು ಉಡುಪಿ ಚರ್ಚ್ ನಿಂದ ಮೆರವಣಿಗೆಯಲ್ಲಿ ತರಲಾಯಿತು. ಈ ಪ್ರತಿಮೆಯನ್ನು ವಂ ವಿಲ್ಸನ್ ಡಿಸೋಜಾ […]

ಆಗಸ್ಟ್ 14 ರವರೆಗೆ ಜಿಲ್ಲೆಯಾದ್ಯಂತ ಕಲಬೆರಕೆ ಅಡುಗೆ ಎಣ್ಣೆ ಮಾರಾಟಗಾರರ ಪತ್ತೆ ಹಚ್ಚುವಿಕೆ ಕಾರ್ಯ

ಉಡುಪಿ: ರಾಜ್ಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಮೂಲಕ ದೇಶದಾದ್ಯಂತ ಆಗಸ್ಟ್ 14 ರ ವರೆಗೆ ಅಡುಗೆ ಎಣ್ಣೆಯಲ್ಲಿ ಕಲಬೆರೆಕೆ, ಎಣ್ಣೆಯಲ್ಲಿ ಟ್ರಾನ್ಸ್ ಫ್ಯಾಟಿ ಆಸಿಡ್ ಅಂಶ, ಸರಿಯಾದ ಲೇಬಲ್ ಮಾಡದೇ ಇರುವುದು, ಅಗ್‌ಮಾರ್ಕ್ ಲೈಸೆನ್ಸ್ ಇಲ್ಲದೇ ಇರುವ ಮಲ್ಟಿಸೋರ್ಸ್ ಅಡುಗೆ ಎಣ್ಣೆ ಮತ್ತು ಪ್ಯಾಕೇಟ್ ಮಾಡದೇ(ಲೂಸ್) ಎಣ್ಣೆ ಮಾರಾಟ ಮಾಡುವವರನ್ನು ಪತ್ತೆ ಹಚ್ಚಲಾಗುತ್ತಿದೆ. ಇದಕ್ಕಾಗಿ ಉಡುಪಿ ಜಿಲ್ಲೆಯಲ್ಲಿ ಈಗಾಗಲೇ ತಂಡವನ್ನು ರಚಿಸಲಾಗಿದ್ದು, ಉಡುಪಿ ಜಿಲ್ಲೆಯಾದ್ಯಂತ ಅಂಗಡಿಗಳಿಗೆ ಭೇಟಿ ನೀಡಿ , ಅಡುಗೆ ಎಣ್ಣೆ ಆಹಾರ […]

ಹರ್ ಘರ್ ತಿರಂಗಾ ಯಶಸ್ಸಿಗೆ ಹಗಲು ರಾತ್ರಿ ಶ್ರಮಿಸುತ್ತಿರುವ ಧಾರವಾಡದ ಸಂಜೀವಿನಿ ಮಹಿಳಾ ಸಂಸ್ಥೆ: ವೀಡಿಯೋ ಹಂಚಿಕೊಂಡ ಬೊಮ್ಮಾಯಿ

ಧಾರವಾಡ: ಸ್ವಾತಂತ್ರ್ಯದ ಅಮೃತ ಮಹೋತ್ಸವದ ಪ್ರಯುಕ್ತ ಆಗಸ್ಟ್ 13 ರಿಂದ 15 ರವರೆಗೆ ರಾಜ್ಯದ ಮನೆ ಮನೆಯ ಮೇಲೆ ತ್ರಿವರ್ಣ ಧ್ವಜ ಅಭಿಯಾನದ ಯಶಸ್ಸಿಗೆ ಪೂರಕವಾಗಿ ಧಾರವಾಡದ ಸಂಜೀವಿನಿ ಮಹಿಳಾ ಸಂಸ್ಥೆ ಅವಿರತವಾಗಿ ಶ್ರಮಿಸುತ್ತಿರುವ ದೃಶ್ಯ. ಅವರ ಚೈತನ್ಯ, ಉತ್ಸಾಹ ಮತ್ತು ದೇಶಭಕ್ತಿ ಬಣ್ಣಿಸಲಾಗದು. ಜೈ ಹಿಂದ್ ಎಂದು ರಾಜ್ಯದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರು ಟ್ವಿಟರ್ ನಲ್ಲಿ ವೀಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. Happy to share that @KarnatakaKsrlps, Dharwad, SHG members are making flags […]

ಕಬ್ಬು ಬೆಳೆಗಾರರಿಗೆ ಬಂಪರ್ ಕೊಡುಗೆ: ಕೇಂದ್ರದಿಂದ ಕ್ವಿಂಟಲ್‌ಗೆ 305 ರೂಗಳ ನ್ಯಾಯೋಚಿತ ಮತ್ತು ಲಾಭದಾಯಕ ಬೆಲೆ ನೀಡಲು ಅನುಮೋದನೆ

ನವದೆಹಲಿ: ಆರ್ಥಿಕ ವ್ಯವಹಾರಗಳ ಕ್ಯಾಬಿನೆಟ್ ಸಮಿತಿಯು 2022-23 (ಅಕ್ಟೋಬರ್-ಸೆಪ್ಟೆಂಬರ್)ನೇ ಸಾಲಿನ ಸಕ್ಕರೆ ಋತುವಿಗೆ ಕಬ್ಬಿನ ನ್ಯಾಯಯುತ ಮತ್ತು ಲಾಭದಾಯಕ ಬೆಲೆಯನ್ನು ಅನುಮೋದಿಸಿದೆ. ಕಬ್ಬು ಬೆಳೆಗಾರರಿಗೆ ಕ್ವಿಂಟಲ್‌ಗೆ 305 ರೂಪಾಯಿಗಳ ಅತ್ಯಧಿಕ ನ್ಯಾಯಯುತ ಮತ್ತು ಲಾಭದಾಯಕ ಬೆಲೆ (ಎಫ್‌ಆರ್‌ಪಿ) ಇದಾಗಿದೆ. 2022-23 ರ ಸಕ್ಕರೆ ಋತುವಿನ ಎಫ್‌ಆರ್‌ಪಿಯು ಪ್ರಸ್ತುತ ಸಕ್ಕರೆ ಋತು 2021-22 ಕ್ಕಿಂತ 2.6 ಶೇಕಡಾ ಹೆಚ್ಚಾಗಿದೆ. ಕಬ್ಬು ಬೆಳೆಗಾರರಿಗೆ ಖಾತರಿ ಬೆಲೆಯನ್ನು ಖಚಿತಪಡಿಸಿಕೊಳ್ಳಲು ಕಬ್ಬಿನ ಎಫ್‌ಆರ್‌ಪಿ ನಿಗದಿಪಡಿಸಲಾಗಿದೆ.ಈ ನಿರ್ಧಾರವು ಐದು ಕೋಟಿ ಕಬ್ಬು ಬೆಳೆಗಾರರು ಮತ್ತು […]

ಆಗಸ್ಟ್ 5 ರಿಂದ 15 ರವರೆಗೆ ದೇಶದ ಸಂರಕ್ಷಿತ ಸ್ಮಾರಕ ಹಾಗೂ ತಾಣಗಳಿಗೆ ಉಚಿತ ಪ್ರವೇಶ

ನವದೆಹಲಿ: ಆಗಸ್ಟ್ 5 ರಿಂದ 15 ರವರೆಗೆ ದೇಶಾದ್ಯಂತ ತನ್ನ ಎಲ್ಲಾ ಸಂರಕ್ಷಿತ ಸ್ಮಾರಕಗಳು ಮತ್ತು ತಾಣಗಳಿಗೆ ಸಂದರ್ಶಕರು ಮತ್ತು ಪ್ರವಾಸಿಗರಿಗೆ ಸರ್ಕಾರವು ಉಚಿತ ಪ್ರವೇಶವನ್ನು ನೀಡಿದೆ. ಆಜಾದಿ ಕಾ ಅಮೃತ್ ಮಹೋತ್ಸವ ಮತ್ತು 75ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಪ್ರವಾಸೋದ್ಯಮ ಸಚಿವ ಜಿ.ಕಿಶನ್ ರೆಡ್ಡಿ ಟ್ವೀಟ್ ನಲ್ಲಿ ತಿಳಿಸಿದ್ದಾರೆ. ಈ ವರ್ಷದ ಆಗಸ್ಟ್ 5 ರಿಂದ 15 ರವರೆಗೆ ಎಲ್ಲಾ ಟಿಕೆಟ್ ಹೊಂದಿರುವ ಕೇಂದ್ರ ಸಂರಕ್ಷಿತ ಸ್ಮಾರಕಗಳು ಮತ್ತು ಪುರಾತತ್ವ […]