ಆಗಸ್ಟ್ 14 ರವರೆಗೆ ಜಿಲ್ಲೆಯಾದ್ಯಂತ ಕಲಬೆರಕೆ ಅಡುಗೆ ಎಣ್ಣೆ ಮಾರಾಟಗಾರರ ಪತ್ತೆ ಹಚ್ಚುವಿಕೆ ಕಾರ್ಯ

ಉಡುಪಿ: ರಾಜ್ಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಮೂಲಕ ದೇಶದಾದ್ಯಂತ ಆಗಸ್ಟ್ 14 ರ ವರೆಗೆ ಅಡುಗೆ ಎಣ್ಣೆಯಲ್ಲಿ ಕಲಬೆರೆಕೆ, ಎಣ್ಣೆಯಲ್ಲಿ ಟ್ರಾನ್ಸ್ ಫ್ಯಾಟಿ ಆಸಿಡ್ ಅಂಶ, ಸರಿಯಾದ ಲೇಬಲ್ ಮಾಡದೇ ಇರುವುದು, ಅಗ್‌ಮಾರ್ಕ್ ಲೈಸೆನ್ಸ್ ಇಲ್ಲದೇ ಇರುವ ಮಲ್ಟಿಸೋರ್ಸ್ ಅಡುಗೆ ಎಣ್ಣೆ ಮತ್ತು ಪ್ಯಾಕೇಟ್ ಮಾಡದೇ(ಲೂಸ್) ಎಣ್ಣೆ ಮಾರಾಟ ಮಾಡುವವರನ್ನು ಪತ್ತೆ ಹಚ್ಚಲಾಗುತ್ತಿದೆ.

ಇದಕ್ಕಾಗಿ ಉಡುಪಿ ಜಿಲ್ಲೆಯಲ್ಲಿ ಈಗಾಗಲೇ ತಂಡವನ್ನು ರಚಿಸಲಾಗಿದ್ದು, ಉಡುಪಿ ಜಿಲ್ಲೆಯಾದ್ಯಂತ ಅಂಗಡಿಗಳಿಗೆ ಭೇಟಿ ನೀಡಿ , ಅಡುಗೆ ಎಣ್ಣೆ ಆಹಾರ ಮಾದರಿಯನ್ನು ತೆಗೆದು ವಿಶ್ಲೇಷಣೆಗೆ ಕಳುಹಿಸಲಾಗುವುದು ಹಾಗೂ ಈಗಾಗಲೇ ನಿಷೇಧವಾಗಿರುವ ಪ್ಯಾಕೇಟ್ ಇಲ್ಲದೆ ಮಾರಾಟ ಮಾಡುವವರ ವಿರುದ್ದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆಯನ್ವಯ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಅಂಕಿತ ಅಧಿಕಾರಿ,ಆಹಾರ ಮತ್ತು ಗುಣಮಟ್ಟ ಕಾಯ್ದೆ ಅವರ ಪ್ರಕಟಣೆ ತಿಳಿಸಿದೆ.