ಸ್ವಯಂ ಪ್ರೇರಣೆಯಿಂದ ಎಪಿಕ್ ಕಾರ್ಡಿಗೆ ಆಧಾರ್ ಜೋಡಣೆ ಮಾಡಿಸುವಂತೆ ಜಿಲ್ಲಾಧಿಕಾರಿ ಕರೆ

ಉಡುಪಿ: ಜಿಲ್ಲೆಯ ಪ್ರತಿಯೊಬ್ಬ ಅರ್ಹ ಮತದಾರರು ತಮ್ಮ ಆಧಾರ್ ಸಂಖ್ಯೆಯನ್ನು ಮತದಾರರ ಎಪಿಕ್ ಕಾರ್ಡಿಗೆ ಸ್ವಯಂ ಪ್ರೇರಿತರಾಗಿ ಜೋಡಣೆಗೆ ಮುಂದಾಗಬೇಕು ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಕರೆ ನೀಡಿದರು. ಅವರು ಸೋಮವಾರ ನಗರದ ಜಿಲ್ಲಾಧಿಕಾರಿ ಕಚೇರಿಯ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ನಡೆದ ಮತದಾರರ ಎಪಿಕ್ ಕಾರ್ಡಿಗೆ ಸ್ವಯಂ ಪ್ರೇರಿತರಾಗಿ ಆಧಾರ್ ಸಂಖ್ಯೆ ಜೋಡಣೆ ಮಾಡುವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆ ಪ್ರಮುಖ ಪಾತ್ರ ವಹಿಸಲಿದ್ದು, ಚುನಾವಣೆಯನ್ನು ಪಾರದರ್ಶಕ, ಮುಕ್ತ, ನ್ಯಾಯ ಸಮ್ಮತವಾಗಿ ನಡೆಸಲು […]

ಕಿದಿಯೂರು ನಾಗ ಸನ್ನಿಧಿಯಲ್ಲಿ ನಾಗರಪಂಚಮಿ ಆಚರಣೆ

ಉಡುಪಿ: ಕಿದಿಯೂರು ಹೋಟೆಲಿನ ಕಾರ್ಣಿಕ ಕೇತ್ರ ನಾಗ ಸನ್ನಿಧಿಯಲ್ಲಿ ನಾಗರಪಂಚಮಿ ಪೂಜೆಯನ್ನು ಮಾಡಲಾಯಿತು. ಕಬಿಯಾಡಿ ಜಯರಾಂ ಆಚಾರ್ಯ ಮಾರ್ಗದರ್ಶನದಲ್ಲಿ ಧಾರ್ಮಿಕ ಪೂಜಾ ವಿಧಾನಗಳಾದ ಕ್ಷೀರಾಭಿಷೇಕ ಹಾಗೂ ಗೆಂದಾಳಿ ಬೊಂಡಾಭಿಷೇಕ ನಡೆಸಲಾಯಿತು. ವಿಶೇಷ ಹೂವಿನ ಅಲಂಕಾರ, ಮಹಾ ಪೂಜೆ ನೆರವೇರಿಸಲಾಯಿತು. ಹೋಟೆಲ್ ಮಾಲೀಕ ಭುವನೇಂದ್ರ ಕಿದಿಯೂರು, ಶ್ರೀಮತಿ ಹೀರಾ ಬಿ ಕಿದಿಯೂರು, ಜಿತೇಶ್ ಕಿದಿಯೂರು, ಭವ್ಯಶ್ರೀ ಕಿದಿಯೂರು, ವಿಲಾಸ ಕುಮಾರ್, ಹಾಗೂ ಕ್ಷೇತ್ರದ ಭಕ್ತರು ಉಪಸ್ಥಿತರಿದ್ದರು.

ಶ್ರೀಕೃಷ್ಣಮಠದಲ್ಲಿ ನಾಗರಪಂಚಮಿ ವಿಶೇಷ ಪೂಜೆ

ಉಡುಪಿ: ಶ್ರೀಕೃಷ್ಣಮಠದಲ್ಲಿ ನಾಗರಪಂಚಮಿ ಪ್ರಯುಕ್ತ, ಪರ್ಯಾಯ ಕೃಷ್ಣಾಪುರ ಮಠಾಧೀಶರಾದ ಶ್ರೀವಿದ್ಯಾಸಾಗರ ತೀರ್ಥ ಶ್ರೀಪಾದರು ಶ್ರೀವಾದಿರಾಜತೀರ್ಥರು ಪ್ರತಿಷ್ಠೆ ಮಾಡಿದ ತಕ್ಷಕ ಸನ್ನಿಧಾನದಲ್ಲಿ ಹಾಗೂ ಅಶ್ವತ್ಥಮರದ ನಾಗ ಸನ್ನಿಧಾನದಲ್ಲಿ ವಿಶೇಷ ಪೂಜೆ ನೆರವೇರಿಸಿದರು.  

ಶ್ರೀ ದುರ್ಗಾ ಆದಿಶಕ್ತಿ ದೇವಸ್ಥಾನ ದೊಡ್ಡಣ್ಣ ಗುಡ್ಡೆಯಲ್ಲಿ ನಾಗರಪಂಚಮಿ ಆಚರಣೆ

ಉಡುಪಿ ಶ್ರೀ ದುರ್ಗಾ ಆದಿಶಕ್ತಿ ದೇವಸ್ಥಾನ ದೊಡ್ಡಣ್ಣ ಗುಡ್ಡೆಯಲ್ಲಿ ನಾಗರ ಪಂಚಮಿಯ ಪರ್ವಕಾಲದಲ್ಲಿ ನಡೆದ ನಾಗತನು ತಂಬಿಲ ಸೇವೆಯ ಛಾಯಾ ಚಿತ್ರಗಳು

ಫಾಸಿಲ್ ಹಂತಕರು ಪೊಲೀಸ್ ಬಲೆಗೆ- ಆರು ಆರೋಪಿಗಳು ಅರೆಸ್ಟ್

ಮಂಗಳೂರು ಫಾಸಿಲ್ ಕೊಲೆ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ ನಡೆದಿದ್ದು, ಘಟನೆಗೆ ಸಂಬಂಧಸಿದಂತೆ ಆರು ಜನರನ್ನು ಬಂಧಿಸಲಾಗಿದೆ. ಸುಹಾಸ್ ಶೆಟ್ಟಿ, ಮೋಹನ್ ಅಲಿಯಾಸ್ ನೇಪಾಳಿ ಮೋಹನ್, ಶ್ರೀನಿವಾಸ್, ಗಿರಿಧರ್ ಡ್ರೈವರ್, ಅಭಿಷೇಕ್, ದೀಕ್ಷಿತ್ ಬಂಧನಕ್ಕೆ ಒಳಗಾದವರು. ಉದ್ಯಾವರದಲ್ಲಿ ಇವರನ್ನು ಬಂಧಿಸಲಾಗಿದ್ದು, ಕೊಲೆಗೆ ಕಾರಣ ತಿಳಿದು ಬಂದಿಲ್ಲ. ಹೆಚ್ಚಿನ ವಿಚಾರಣೆ ನಡೆಸಲಿದ್ದೇವೆ ಎಂದು ಮಂಗಳೂರು ಕಮಿಷನರ್ ಎನ್ ಶಶಿಕುಮಾರ್ ಹೇಳಿದ್ದಾರೆ.