ಪರಿಶಿಷ್ಟ ಜಾತಿಯ ಯುವಕ-ಯುವತಿಯರಿಗೆ ಪತ್ರಿಕೋದ್ಯಮ ವಿಷಯದಲ್ಲಿ ತರಬೇತಿ: ಅರ್ಜಿ ಆಹ್ವಾನ

ಉಡುಪಿ: ಕರ್ನಾಟಕ ಆದಿಜಾಂಬವ ಅಭಿವೃದ್ದಿ ನಿಗಮದ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಟೆಲಿವಿಷನ್ ಜರ್ನಲಿಸಂ, ವಿಡಿಯೋ ಜರ್ನಲಿಸಂ, ಕ್ಯಾಮರಮನ್, ನಿರೂಪಣೆ, ವರದಿಗಾರಿಕೆ, ಕಾಪಿ ಎಡಿಟರ್ ಹಾಗೂ ಬುಲೆಟಿಂಗ್ ಪ್ರೊಡ್ಯೂಸರ್ ಕುರಿತು ಬೆಂಗಳೂರಿನಲ್ಲಿ ನಡೆಯಲಿರುವ ತರಬೇತಿಗೆ ಪರಿಶಿಷ್ಟ ಜಾತಿಯ ಅರುಂಧತಿಯಾರ್, ಭಂಗಿ, ಮೆಹತರ್, ಓಲ್ಗಾನ, ರೂಖಿ, ಮಲ್ಕಾನ, ಹಲಾಲ್‌ಕೋರ್, ಲಾಲ್‌ಬೇಗಿ, ಬಾಲ್ಮಿಕಿ, ಕೊರರ್, ಜಾಡ್‌ಮಾಲಿ ಬಾಂಬಿ, ಭಾಂಭಿ, ಅಸಾದರು, ಅಸೋಡಿ, ಚಮ್ಮಡಿಯ, ಚಮ್ಮಾರ್, ಚಂಭಾರ್, ಚಮಗಾರ್, ಹರಳಯ್ಯ, ಹರಲಿ, ಖಲ್ಪ, ಮಚ್‌ಗಾರ್, ಮೋಚಿಗಾರ್, ಮಾದರ್, ಮಾದಿಗ್, ಮೋಚಿ, ಮೂಚಿ, ತೆಲುಗುಮೋಚಿ, […]

ಆಗಸ್ಟ್1-15 ರ ವರೆಗೆ ತೀವ್ರತರ ಅತಿಸಾರ ಭೇದಿ ನಿಯಂತ್ರಣ ಪಾಕ್ಷಿಕ ಕಾರ್ಯಕ್ರಮ

ಉಡುಪಿ: 5 ವರ್ಷದೊಳಗಿನ ಮಕ್ಕಳಲ್ಲಿ ಅತಿಸಾರ ಭೇದಿಯಿಂದ ಸಂಭವಿಸುವ ಮರಣ ಪ್ರಮಾಣವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಆಗಸ್ಟ್ 1 ರಿಂದ 15 ರ ವರೆಗೆ ರಾಷ್ಟ್ರೀಯ ತೀವ್ರತರ ಅತಿಸಾರ ಭೇದಿ ನಿಯಂತ್ರಣ ಪಾಕ್ಷಿಕ ಕಾರ್ಯಕ್ರಮವನ್ನು ಆರೋಗ್ಯ ಇಲಾಖೆಯ ವತಿಯಿಂದ ಹಮ್ಮಿಕೊಳ್ಳಲಾಗಿದೆ. ಜಿಲ್ಲೆಯಲ್ಲಿ 5 ವರ್ಷದೊಳಗಿನ ಒಟ್ಟು 69,881 ಮಕ್ಕಳಿದ್ದು, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಇವರ ಮನೆಗಳಿಗೆ ತೆರಳಿ ಓ.ಆರ್.ಎಸ್ ಪ್ಯಾಕೆಟ್ ವಿತರಣೆ ಮಾಡುವ ಮೂಲಕ ಇವುಗಳ ಬಳಕೆಯ ಕುರಿತು ಮಾಹಿತಿ ನೀಡಲಿದ್ದಾರೆ. ಆರೋಗ್ಯ ಸಂಸ್ಥೆಗಳಲ್ಲಿ ಮತ್ತು ಉಪಕೇಂದ್ರಗಳಲ್ಲಿ ಓ.ಆರ್.ಎಸ್ […]

ಸಿಇಟಿ: ಮೊದಲ 50 ರಲ್ಲಿ 20 ರ‍್ಯಾಂಕ್ ಪಡೆದ ಮಂಗಳೂರಿನ ಎಕ್ಸ್ಪರ್ಟ್ ಪ.ಪೂ ಕಾಲೇಜು ವಿದ್ಯಾರ್ಥಿಗಳು

ಮಂಗಳೂರು: 2022ನೇ ಸಾಲಿನ ಸಿಇಟಿ ಪರೀಕ್ಷೆಯ ಐದು ವಿಭಾಗದ ಮೊದಲ 10 ರ‍್ಯಾಂಕ್‌ಗಳಲ್ಲಿ 2 ರ‍್ಯಾಂಕ್‌ಗಳನ್ನು ಮಂಗಳೂರಿನ ಎಕ್ಸ್ಪರ್ಟ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಪಡೆದುಕೊಂಡಿದ್ದಾರೆ. ಮೊದಲ 50 ರ‍್ಯಾಂಕ್‌ನಲ್ಲಿ 20 ರ‍್ಯಾಂಕ್ ಹಾಗೂ ಮೊದಲ 100 ರ‍್ಯಾಂಕ್‌ನಲ್ಲಿ 49 ರ‍್ಯಾಂಕ್‌ಗಳನ್ನು ಎಕ್ಸ್ಪರ್ಟ್ ವಿದ್ಯಾರ್ಥಿಗಳು ಪಡೆದುಕೊಂಡಿದ್ದಾರೆ. ಮೊದಲ 150 ರಲ್ಲಿ 78 ರ‍್ಯಾಂಕ್, ಮೊದಲ 200 ರ‍್ಯಾಂಕ್‌ಗಳಲ್ಲಿ 105, ಮೊದಲ 300 ರ‍್ಯಾಂಕ್‌ಗಳಲ್ಲಿ 153 ರ‍್ಯಾಂಕ್‌ಗಳನ್ನು ಸಂಸ್ಥೆಯ ವಿದ್ಯಾರ್ಥಿಗಳು ಪಡೆದುಕೊಂಡಿದ್ದಾರೆ. ಕಾಲೇಜಿನ ಆದಿತ್ಯಾ ಕಾಮತ್ ಅಮ್ಮೆಂಬಳ ಬಿಎನ್‌ವೈಎಸ್‌ನಲ್ಲಿ […]

‘ಭಾರ’ ಎತ್ತುವ ಸ್ಪರ್ಧೆಯಲ್ಲಿ ದೇಶದ ಹಿರಿಮೆಯನ್ನು ಹೆಚ್ಚಿಸುತ್ತಿರುವ ಕ್ರೀಡಾಪಟುಗಳು:ಬಿಂದ್ಯಾರಾಣಿ ದೇವಿಗೆ ಬೆಳ್ಳಿ ಪದಕ; ಎರಡು ದಿನದಲ್ಲಿ ನಾಲ್ಕು ಪದಕ ಗೆದ್ದ ‘ಭಾರ’ತ

ಬರ್ಮಿಂಗ್ ಹ್ಯಾಂಮ್: ಇಲ್ಲಿ ನಡೆಯುತ್ತಿರುವ ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಭಾರ ಎತ್ತುವ ಸ್ಪರ್ಧೆಯಲ್ಲಿ ಭಾರತದ ಗರಿಮೆಯನ್ನು ಸತತವಾಗಿ ಎತ್ತುತ್ತಿರುವ ಸ್ಪರ್ಧಿಗಳಲ್ಲಿ ಬಿಂದ್ಯಾರಾಣಿ ದೇವಿಯವರು ಕೂಡಾ ಸೇರಿದ್ದಾರೆ. ಕೇವಲ ಎರಡೇ ದಿನಗಳಲ್ಲಿ ಭಾರತವು ತನ್ನ ನಾಲ್ಕನೇ ಪದಕವನ್ನು ಬಗಲಿಗೆ ಹಾಕಿಕೊಂಡಿದೆ. ಭಾರತದ ವೈಟ್ ಲಿಫ್ಟರ್ ಬಿಂದಿಯಾರಾಣಿ ದೇವಿಯವರು ಕ್ಲೀನ್ ಮತ್ತು ಜರ್ಕ್‌ನಲ್ಲಿ 110 ಕೆಜಿ ಎತ್ತುವ ಮೂಲಕ ಬೆಳ್ಳಿ ಪದಕವನ್ನು ಗೆದ್ದಿದ್ದಾರೆ. ಪದಕ ಗೆದ್ದ ಆಟಗಾರ್ತಿಗೆ ದೇಶದೆಲ್ಲೆಡೆಯಿಂದ ಅಭಿನಂದನೆಗಳು ಹರಿದು ಬರುತ್ತಿವೆ.

ಚೈಲ್ಡ್ ಲೈನ್-1098 ವತಿಯಿಂದ ವಿಶ್ವ ಮಾನವ ಕಳ್ಳ ಸಾಗಣಿಕೆ ತಡೆ ದಿನಾಚರಣೆ ಅರಿವು ಕಾರ್ಯಕ್ರಮ

ಉಡುಪಿ: ಚೈಲ್ಡ್ ಲೈನ್-1098 ವತಿಯಿಂದ ವಿಶ್ವ ಮಾನವ ಕಳ್ಳ ಸಾಗಣಿಕೆ ತಡೆ ದಿನಾಚರಣೆಯ ಪ್ರಯುಕ್ತ ಇಂದಿರಾ ನಗರದ ಸರಕಾರಿ ಪ್ರೌಢಶಾಲೆ ಯ ವಿದ್ಯಾರ್ಥಿಗಳಿಗೆ ಮಕ್ಕಳ ಕಳ್ಳ ಸಾಗಾಣಿಕೆಯ ಕುರಿತು ಅರಿವು ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಉಡುಪಿ ಚೈಲ್ಡ್ ಲೈನ್-1098 ನ ನಿರ್ದೇಶಕ ರಾಮಚಂದ್ರ ಉಪಾಧ್ಯಾಯ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ರೈಲ್ವೆ ರಕ್ಷಣಾ ಪಡೆ ಇನ್ಸಪೆಕ್ಟರ್ ಪಿ.ವಿ ಮಧುಸೂದನ್ ಮಾತನಾಡಿ, ವಿದ್ಯಾರ್ಥಿಗಳಿಗೆ ಮಕ್ಕಳ ಕಳ್ಳ ಸಾಗಾಣಿಕೆಯಿಂದಾಗುವ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಿದರು. ಮಕ್ಕಳು ಕಡ್ಡಾಯವಾಗಿ […]