ಫಾಸಿಲ್ ನ ಹತ್ಯೆಗೆ ಬಳಸಲಾಗಿದ್ದ ಕಾರಿನೊಳಗೆ ಸಿಮ್ ಕಾರ್ಡ್, ರಕ್ತದ ಕಲೆಗಳು: ಹೆಚ್ಚಿನ ತನಿಖೆಗಾಗಿ ಆಗಮಿಸಲಿರುವ ವಿಧಿವಿಜ್ಞಾನ ತಂಡ

ಪಡುಬಿದ್ರೆ: ಸುರತ್ಕಲ್ ನ ಯುವಕ ಫಾಸಿಲ್ ನ ಹತ್ಯೆಗೆ ಬಳಸಲಾಗಿದ್ದ ಇಯಾನ್ ಕಾರು ಪಡುಬಿದ್ರೆ ಠಾಣಾ ವ್ಯಾಪ್ತಿಯ ಇನ್ನಾ ಗ್ರಾಮದ ಕಾಜರಕಟ್ಟೆ ಅಶ್ವಥ ಕಟ್ಟೆಯ ನಿರ್ಜನ ಪ್ರದೇಶದಲ್ಲಿ ಪತ್ತೆಯಾಗಿದ್ದು, ಕಾರೊಳಗೆ ಮೈಕ್ರೋ ಸಿಮ್, ಹಿಂಬದಿಯ ಸೀಟಿನಲ್ಲಿ ರಕ್ತದ ಕಲೆಗಳು, ನೀರಿನ ಬಾಟಲಿ ಮತ್ತು ಸ್ವಲ್ಪ ಹಣ ಪತ್ತೆಯಾಗಿದೆ ಎಂದು ಹೊಸದಿಗಂತ ವರದಿ ಮಾಡಿದೆ. ಪಡುಬಿದ್ರೆ ಪೋಲಿಸರು ಕಾರಿಗೆ ಹೊದಿಕೆ ಮುಚ್ಚಿದ್ದು, ಹೆಚ್ಚಿನ ತನಿಖೆಗಾಗಿ ಮಂಗಳೂರಿನ ವಿಧಿ ವಿಜ್ಞಾನ ಪ್ರಯೋಗಾಲಯ ತಂಡವನ್ನು ಕಾಯಲಾಗುತ್ತಿದೆ.

ವೇಟ್‌ಲಿಫ್ಟಿಂಗ್ ಫೈನಲ್‌ನಲ್ಲಿ ಚಿನ್ನ ಗೆದ್ದ ಜೆರೆಮಿ ಲಾಲ್ರಿನ್ನುಂಗಾ: ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಇದು ಭಾರತದ ಐದನೇ ಪದಕ

ಬರ್ಮಿಂಗ್ ಹ್ಯಾಮ್: ಜೆರೆಮಿ ಲಾಲ್ರಿನ್ನುಂಗಾ ಪುರುಷರ 67 ಕೆಜಿ ವೇಟ್‌ಲಿಫ್ಟಿಂಗ್ ಫೈನಲ್‌ನಲ್ಲಿ ದಾಖಲೆಯನ್ನು ಸ್ಥಾಪಿಸುವ ಮೂಲಕ ಕಾಮನ್‌ವೆಲ್ತ್ ಗೇಮ್ಸ್ 2022 ರಲ್ಲಿ ಭಾರತಕ್ಕೆ ಎರಡನೇ ಚಿನ್ನದ ಪದಕವನ್ನು ಗೆದ್ದರು. 19 ವರ್ಷದ ಜೆರೆಮಿ ಅವರು ತಮ್ಮ ಮೊದಲ ಸ್ನ್ಯಾಚ್ ಪ್ರಯತ್ನದಲ್ಲಿ 136 ಕೆಜಿ ಮತ್ತು ಮುಂದಿನ ಪ್ರಯತ್ನದಲ್ಲಿ 140 ಕೆಜಿಗಳನ್ನು ಯಶಸ್ವಿಯಾಗಿ ಎತ್ತಿದರು. ನಂತರ ಅವರು ಕ್ಲೀನ್ ಮತ್ತು ಜರ್ಕ್ ವಿಭಾಗದಲ್ಲಿ 160 ಕೆಜಿಯ ಬಾಂಕರ್ಸ್ ಲಿಫ್ಟ್ನೊಂದಿಗೆ 300 ಕೆಜಿಯೊಂದಿಗೆ ಮುಗಿಸಿದರು – ಕಾಮನ್ ವೆಲ್ತ್ ಗೇಮ್ಸ್ […]

ಜೋಳಿಗೆಯಲ್ಲಿ ದುಶ್ಚಟಗಳ ಭಿಕ್ಷೆ ಸಂಗ್ರಹಿಸಿದ ಡಾ. ಮಹಾಂತ ಶಿವಯೋಗಿಗಳ ಸ್ಮರಣಾರ್ಥ ಆಗಸ್ಟ್ 1 ಅನ್ನು ವ್ಯಸನ ಮುಕ್ತ ದಿನವನ್ನಾಗಿ ಆಚರಿಸಲು ಸರ್ಕಾರದ ನಿರ್ಧಾರ

ಮಠಗಳ ಸ್ವಾಮೀಜಿಗಳು ತಮ್ಮ ಜೋಳಿಗೆಯಲ್ಲಿ ಭಕ್ತರ ಮನೆಗಳಿಗೆ ಭೇಟಿ ನೀಡಿ, ಭಿಕ್ಷೆ ಬೇಡಿ ಸಂಗ್ರಹಿಸಿ ದೊರೆತ ಧವಸ ಧಾನ್ಯಗಳಿಂದ ಮಠಗಳಲ್ಲಿ ಓದುವ ಬಡ ಮಕ್ಕಳಿಗೆ ಪ್ರಸಾದ ನೀಡುವ ಕಾರ್ಯವನ್ನು ಎಲ್ಲಡೆ ನಡೆದಿದೆ. ಆದರೆ ಸಮಾಜ ಹಾಗೂ ದೇಶವನ್ನು ಹಾಳು ಮಾಡುವ ದುರ್ವ್ಯಸನಗಳು, ದುಶ್ಚಟಗಳು ಹಾಗೂ ದುರಾಚಾರಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಿ, ಮನಪರಿವರ್ತಿಸಿ, ಜನರಲ್ಲಿನ ದುಶ್ಚಟಗಳನ್ನೇ ತಮ್ಮ ಜೋಳಿಗೆಯಲ್ಲಿ ಭಿಕ್ಷೆಯ ರೂಪದಲ್ಲಿ ಸಂಗ್ರಹಿಸಿ ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಶ್ರಮಿಸಿದವರು ಡಾ. ಮಹಾಂತ ಶಿವಯೋಗಿಗಳು. ಬಾಗಲಕೋಟೆಯ ಜಮಖಂಡಿ ತಾಲೂಕಿನ […]

ಫಾಜಿಲ್ ಹತ್ಯೆಗೆ ಬಳಸಿದ ಕಾರು ಪಡುಬಿದ್ರೆಯ ಇನ್ನಾ ಗ್ರಾಮದ ನಿರ್ಜನ ಪ್ರದೇಶದಲ್ಲಿ ಪತ್ತೆ

ಪಡುಬಿದ್ರೆ: ಮಂಗಳೂರಿನ ಸುರತ್ಕಲ್ ನಲ್ಲಿ ನಡೆದ ಫಾಜಿಲ್ ಹತ್ಯೆಗೆ ಬಳಸಿದ ಬಿಳಿ ಬಣ್ಣದ ಇಯಾನ್ ಕಾರು ಪಡುಬಿದ್ರೆಯ ಇನ್ನಾ ಗ್ರಾಮದ ನಿರ್ಜನ ಪ್ರದೇಶದಲ್ಲಿ ಭಾನುವಾರ ಪತ್ತೆಯಾಗಿದೆ. ಭಾನುವಾರ ಬೆಳಿಗ್ಗೆ ಸ್ಥಳೀಯರು ಉಡುಪಿ ಜಿಲ್ಲಾ ಪೋಲಿಸರಿಗೆ ಅಪರಿಚಿತ ಕಾರು ಇರುವ ಬಗ್ಗೆ ಮಾಹಿತಿ ನೀಡಿದ್ದು, ಪೋಲಿಸರು ಸ್ಥಳಕ್ಕೆ ತೆರಳಿ ಕಾರನ್ನು ಗಮನಿಸಿದಾಗ ಫಾಜಿಲ್ ಹತ್ಯೆಗೆ ಬಳಸಿದ ಕಾರು ಎಂದು ತಿಳಿದು ಬಂದಿದೆ. ಆರೋಪಿಗಳು ಕಾರನ್ನು ಸುರತ್ಕಲ್ ನಿಂದ ಪಡುಬಿದ್ರೆಯ ಇನ್ನಾಕ್ಕೆ ಚಲಾಯಿಸಿಕೊಂಡು ಬಂದು ಕಾರನ್ನು ಬಿಟ್ಟು ಪರಾರಿಯಾಗಿದ್ದಾರೆ ಎಂದು […]

ದೇಶ ವಿರೋಧಿ ಚಟುವಟಿಕೆಗಳಲ್ಲಿ ತೊಡಗುವ ಸಂಘಟನೆಗಳ ಮೇಲೆ ನಿಷೇಧ: ಎನ್ಎಸ್ಎ ಅಜಿತ್ ದೋವಲ್ ಉಪಸ್ಥಿತಿಯ ಅಂತರ್ಧರ್ಮೀಯ ಸಂವಾದದಲ್ಲಿ ನಿರ್ಣಯ

ನವದೆಹಲಿ: ಅಖಿಲ ಭಾರತ ಸೂಫಿ ಸಜ್ಜದನಾಶಿನ್ ಕೌನ್ಸಿಲ್ (ಎಐಎಸ್‌ಎಸ್‌ಸಿ) ಶನಿವಾರ ಆಯೋಜಿಸಿದ್ದ ಸರ್ವಧರ್ಮ ಸಮ್ಮೇಳನದಲ್ಲಿ ಪಾಲ್ಗೊಂಡು ಮಾತನಾಡಿದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್, “ಕೆಲವು ಅಂಶಗಳು” ಧರ್ಮ ಮತ್ತು ಸಿದ್ಧಾಂತದ ಹೆಸರಿನಲ್ಲಿ ದ್ವೇಷವನ್ನು ಸೃಷ್ಟಿಸಲು ಪ್ರಯತ್ನಿಸುತ್ತಿವೆ. ಇದು ಇಡೀ ರಾಷ್ಟ್ರದ ಮೇಲೆ ಪರಿಣಾಮ ಬೀರುತ್ತಿದ್ದು, ಇದನ್ನು ಎದುರಿಸಲು ಧಾರ್ಮಿಕ ಮುಖಂಡರು ಒಟ್ಟಾಗಿ ಕೆಲಸ ಮಾಡಬೇಕಿದೆ ಎಂದರು. ಕೆಲವರು ಧರ್ಮದ ಹೆಸರಿನಲ್ಲಿ ಹಗೆತನ ಸೃಷ್ಟಿಸಿ ಇಡೀ ದೇಶದ ಮೇಲೆ ದುಷ್ಪರಿಣಾಮ ಬೀರುತ್ತಾರೆ. ಇದಕ್ಕೆ ನಾವು ಮೂಕಪ್ರೇಕ್ಷಕರಾಗಲು ಸಾಧ್ಯವಿಲ್ಲ. […]