ಶಿರಾಡಿ ಘಾಟ್ ನಲ್ಲಿ ಏಕಮುಖ ಸಂಚಾರ: ಬೆಂಗಳೂರು ಕಡೆಗೆ ತೆರಳುವ ವಾಹನಗಳಿಗೆ ತಾತ್ಕಾಲಿಕ ಪರ್ಯಾಯ ಮಾರ್ಗದ ವ್ಯವಸ್ಥೆ
ಮಂಗಳೂರು: ಬೆಂಗಳೂರಿನಿಂದ ಮಂಗಳೂರಿಗೆ ಬರುವ ವಾಹನಗಳಿಗೆ ಶಿರಾಡಿ ಘಾಟ್ ಅನ್ನು ಏಕಮುಖ ಮಾರ್ಗವನ್ನಾಗಿ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಬೆಂಗಳೂರಿನಿಂದ ಮಂಗಳೂರಿಗೆ ಸಂಚರಿಸುವ ಮಾರ್ಗವು ಶಿರಾಡಿ ಘಾಟ್ ಮೂಲಕ ಯಥಾವತ್ ಮುಂದುವರಿದರೆ, ಮಂಗಳೂರಿನಿಂದ ಬೆಂಗಳೂರು ಕಡೆಗೆ ಹೋಗುವ ವಾಹನಗಳು ದೋಣಿಗಲ್ ಬಳಿಯ ಕಪ್ಪಳ್ಳಿ-ಕೆಸಗಾನಹಳ್ಳಿ ಗ್ರಾಮದ ರಸ್ತೆಯಲ್ಲಿ ಸಂಚರಿಸಬೇಕು. ಇದು 2-ಕಿಮೀ ಉದ್ದದ ಮಾರ್ಗವಾಗಿದ್ದು ತಾತ್ಕಾಲಿಕ ಕ್ರಮದ ಭಾಗವಾಗಿ ಪರ್ಯಾಯ ಮಾರ್ಗವಾಗಿ ಅಭಿವೃದ್ಧಿಪಡಿಸಲಾಗುತ್ತಿದೆ. ಇನ್ನು 5 ರಿಂದ 6 ದಿನಗಳಲ್ಲಿ ರಸ್ತೆ ಸಿದ್ಧವಾಗಲಿದೆ ಎಂದು ಲೋಕೋಪಯೋಗಿ ಸಚಿವ ಸಿ […]
ಈ ಬಾರಿ ಹೊಸ ಆಯಾಮಗಳೊಂದಿಗೆ ಅದ್ದೂರಿ ನಾಡಹಬ್ಬ ದಸರಾ ಆಚರಣೆ: ಮುಖ್ಯಮಂತ್ರಿ ಬೊಮ್ಮಾಯಿ
ಬೆಂಗಳೂರು: ಈ ಬಾರಿ ಅದ್ದೂರಿ ದಸರಾ ಆಚರಣೆಗಳನ್ನು ಮಾಡಲು ರಾಜ್ಯ ಸರಕಾರವು ಉತ್ಸುಕವಾಗಿದ್ದು, ಹಳೆಯದರ ಜೊತೆ ಹೊಸ ಆಯಾಮಗಳನ್ನೂ ಸೇರಿಸಿಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಅವರು ಇಂದು ನಾಡ ದೇವತೆ ತಾಯಿ ಶ್ರೀ ಚಾಮುಂಡೇಶ್ವರಿ ವರ್ಧಂತಿ ಮಹೋತ್ಸವದಲ್ಲಿ ಭಾಗವಹಿಸಿ ಆ ಬಳಿಕ ಮಾಧ್ಯಮದೊವರೊಂದಿಗೆ ಮಾತನಾಡಿ “ಇವತ್ತು ನಾಡ ದೇವತೆ ತಾಯಿ ಶ್ರೀ ಚಾಮುಂಡೇಶ್ವರಿ ವರ್ಧಂತಿ ಮಹೋತ್ಸವದಲ್ಲಿ ಸಾರ್ವಜನಿಕರೂ ಸೇರಿ ನಾವೆಲ್ಲರೂ ಕೂಡಾ ಅತ್ಯಂತ ಭಕ್ತಿಭಾವದಿಂದ ಪಾಲ್ಗೊಂಡಿದ್ದೇವೆ. ತಾಯಿ ಶ್ರೀ ಚಾಮುಂಡೇಶ್ವರಿ ಇಡೀ ನಾಡಿಗೆ ಸುಭಿಕ್ಷೆ […]
ರಾಳದೊಳಗಿರುವ ಈ ಮಿಡತೆಯ ಆಯಸ್ಸು 30 ಮಿಲಿಯನ್ ವರ್ಷ! ಪ್ರೇಯಿಂಗ್ ಮ್ಯಾಂಟಿಸ್ ನ ಪಳೆಯುಳಿಕೆ ರಾಳದೊಳಗೆ ಬಂಧಿ
ಜುರಾಸಿಕ್ ಪಾರ್ಕ್ ಚಲನಚಿತ್ರ ನೋಡಿದವರಿಗೆ ಈ ವಿಷಯದ ಬಗ್ಗೆ ತಿಳಿದಿರುತ್ತದೆ. ಮರದ ರಾಳದೊಳಗೆ ಬಂಧಿಯಾಗಿದ್ದ ಸೊಳ್ಳೆಯ ಪಳೆಯುಳಿಕೆಯ ರಕ್ತದಿಂದ ಡೈನೋಸಾರ್ ಗಳ ಡಿ.ಎನ್.ಎ ಅನ್ನ್ನು ಹೊರತೆಗೆದು ದೈತ್ಯಾಕಾರದ ಜೀವಿಗಳನ್ನು ಮರು ಸೃಷ್ಟಿಸುವ ಜುರಾಸಿಕ್ ಪಾರ್ಕ್ ಚಿತ್ರ ನೋಡದೆ ಇರುವವರಿಲ್ಲ. ಈ ಕಥೆ ಕಾಲ್ಪನಿಕವಾದರೂ ಈ ರೀತಿ ಮರದ ರಾಳ, ಮಂಜುಗಡ್ಡೆಯೊಳಗೆ ಮಿಲಿಯಾಂತರ ವರ್ಷಗಳಿಂದ ಬಂಧಿಯಾಗಿರುವ ಕ್ರಿಮಿ-ಕೀಟಗಳು ನಿಜವಾಗಿಯೂ ಇರುತ್ತವೆ ಮತ್ತು ಅವು ಭೂಮಿಯ ಜೀವವಿಕಾಸದ ಇತಿಹಾಸದ ಬಗ್ಗೆ ಬೆಳಕು ಚೆಲ್ಲುತ್ತವೆ. ಅಂಬರ್ ಎಂದರೆ ಪಳೆಯುಳಿಕೆಗೊಂಡ ಮರದ ರಾಳವಾಗಿದ್ದು, […]
ಸಿಟಿ ಬಸ್ ನಿಲ್ದಾಣ ವೃತ್ತಕ್ಕೆ ಸಂಗೊಳ್ಳಿ ರಾಯಣ್ಣ ಹೆಸರು ನಾಮಕರಣ: ಆಕ್ಷೇಪಣೆ ಆಹ್ವಾನ
ಉಡುಪಿ: ಉಡುಪಿ ನಗರಸಭಾ ವ್ಯಾಪ್ತಿಯ ಸಿಟಿ ಬಸ್ ನಿಲ್ದಾಣದಿಂದ ನರ್ಮ್ ಬಸ್ ಸ್ಟ್ಯಾಂಡ್ ಬಳಿಯಿಂದ ಸರ್ವೀಸ್ ಬಸ್ ನಿಲ್ದಾಣಕ್ಕೆ ಬರುವ ಮಾರ್ಗದಲ್ಲಿರುವ ವೃತ್ತಕ್ಕೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೃತ್ತ ಎಂದು ನಾಮಕರಣ ಮಾಡುವ ಕುರಿತು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗ ಇವರು ಮನವಿ ಸಲ್ಲಿಸಿದ್ದು, ಈ ಕುರಿತು ಆಕ್ಷೇಪಣೆ ಹಾಗೂ ಸಲಹೆಗಳಿದ್ದಲ್ಲಿ ಸಾರ್ವಜನಿಕರು 30 ದಿನಗಳ ಒಳಗೆ ನಗರಸಭೆ ಕಚೇರಿಗೆ ಸಲ್ಲಿಸುವಂತೆ ನಗರಸಭೆ ಪೌರಾಯುಕ್ತರ ಕಚೇರಿ ಪ್ರಕಟಣೆ ತಿಳಿಸಿದೆ.
ವೆಬ್ ಸೀರೀಸ್ ಸಾಕು, ಸಿನಿಮಾ ಬೇಡ, ಮಿಸ್ ವರ್ಲ್ಡ್ ಕಿರೀಟ ಬೇಕು: ಮಿಸ್ ಇಂಡಿಯಾ ಸಿನಿ ಶೆಟ್ಟಿ
ಉಡುಪಿ: ಮಿಸ್ ಇಂಡಿಯಾ ಆಗಿ ಆಯ್ಕೆಯಾದ ನಂತರ ಸೋಮವಾರ ಪ್ರಥಮ ಬಾರಿಗೆ ಉಡುಪಿಗೆ ಆಗಮಿಸಿದ ಸಿನಿ ಶೆಟ್ಟಿ ಅವರನ್ನು ಬಂಟರ ಸಂಘದ ವತಿಯಿಂದ ಅಲಂಕೃತಗೊಂಡ ತೆರೆದ ವಾಹನದಲ್ಲಿ ಚೆಂಡೆ, ಕೊಂಬು, ವಾದ್ಯಘೋಷಗಳೊಂದಿಗೆ ಮೆರವಣಿಗೆಯೊಂದಿಗೆ ಸ್ವಾಗತಿಸಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಸಿನಿ ಶೆಟ್ಟಿ, ವೆಬ್ ಸೀರೀಸ್‌ಗಳಲ್ಲಿ ನಟಿಸಿರುವುದರಿಂದ ನಟನೆಯ ಅನುಭವ ಇದೆ. ಸದ್ಯ ಸಿನಿಮಾದಲ್ಲಿ ನಟಿಸುವ ಗುರಿ ಇಲ್ಲ. ನನ್ನ ಮುಂದಿನ ಕನಸು ಮಿಸ್ ವರ್ಲ್ಡ್ ಕಿರೀಟವನ್ನು ಮುಡಿಗೇರಿಸಿಕೊಳ್ಳುವುದು ಎಂದಿದ್ದಾರೆ. ತುಳು ನನ್ನ ಮಾತೃ ಭಾಷೆ, ತುಳುವಿನಲ್ಲಿ […]