ಕಳೆದ ಎಂಟು ವರ್ಷಗಳಿಂದ ಟ್ರಿನಿಟಿ ಸೆಂಟ್ರಲ್ ಶಾಲೆಯಲ್ಲಿ ಶೇ. 100 ಫಲಿತಾಂಶ ಸಾಧನೆ

ಪೆರಂಪಳ್ಳಿ: ಟ್ರಿನಿಟಿ ಸೆಂಟ್ರಲ್ ಶಾಲೆಯು ಐ.ಸಿ.ಎಸ್.ಸಿ ಸ್ಟ್ರೀಮ್ ನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಸತತ 8 ವರ್ಷಗಳಿಂದ ಶೇ. 100 ಫಲಿತಾಂಶವನ್ನು ದಾಖಲಿಸಿಕೊಂಡು ಬಂದಿದೆ. 2021-22 ನೇ ಸಾಲಿನಲ್ಲಿ 50 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 24 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ, 26 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದು, ಕುಮಾರಿ ರಾನಿಯಾ ಡಿ’ಸೋಜಾ 98.5 ಅಂಕಗಳಿಸಿ ಪ್ರಥಮ ಸ್ಥಾನವನ್ನು, ಕುಮಾರಿ ಡ್ಯಾಗ್ನಿ ಕ್ಯಾರಲ್ ನೊರೋನ್ಹಾ ಎರಡನೇ ಸ್ಥಾನವನ್ನು, ಹರ್ಷ ಯು ಪೂಜಾರಿ ಹಾಗೂ ಕನ್ನಿಕ ಮೂರನೇ ಸ್ಥಾನವನ್ನು ಹಂಚಿಕೊಂಡಿರುತ್ತಾರೆ. 11ವಿದ್ಯಾರ್ಥಿಗಳು […]
ಖಾದ್ಯ ತೈಲ ಬೆಲೆ ಮತ್ತಷ್ಟು ಇಳಿಕೆ ಸಾಧ್ಯತೆ: ನಾಲ್ಕು ತಿಂಗಳಲ್ಲಿ 15-25ರೂ ಪ್ರತಿ ಲೀಟರ್ ಇಳಿಕೆ

ನವದೆಹಲಿ: ದಿನನಿತ್ಯದ ಅಡುಗೆ ಬಳಕೆಯ ವಸ್ತುಗಳ ಬೆಲೆ ಗಗನಕ್ಕೇರುತ್ತಿರುವ ಈ ಸಂದರ್ಭದಲ್ಲಿ ಖಾದ್ಯ ತೈಲಗಳ ಬೆಲೆ ಇಳಿಕೆಯಾಗುತ್ತಿರುವುದು ಗ್ರಾಹಕರಿಗೆ ನಿರುಮ್ಮಳತೆಯನ್ನು ತಂದುಕೊಟ್ಟಿದೆ. ಸರಕಾರದ ಡೇಟಾಗಳ ಪ್ರಕಾರ ಕಳೆದ ನಾಲ್ಕು ತಿಂಗಳಿನಲ್ಲಿ ಖಾದ್ಯ ತೈಲ ಬೆಲೆಯು ಪ್ರತಿ ಲೀಟರಿಗೆ 15-25ರೂ ಗಳಷ್ಟು ಇಳಿಕೆಯಾಗಿದ್ದು, ಮುಂದಿನ ದಿನಗಳಲ್ಲಿ ಇದು ಮತ್ತಷ್ಟು ಇಳಿಕೆಯಾಗುವ ನಿರೀಕ್ಷೆ ಇದೆ ಎನ್ನಲಾಗಿದೆ. ಇಂಡೋನೇಷ್ಯಾವು ಆಗಸ್ಟ್ 31 ರವರೆಗೆ ಎಲ್ಲಾ ತಾಳೆ ಎಣ್ಣೆ ಉತ್ಪನ್ನಗಳ ಮೇಲಿನ ರಫ್ತು ಸುಂಕವನ್ನು ತೆಗೆದುಹಾಕುವುದರೊಂದಿಗೆ, ಭಾರತದ ಖಾದ್ಯ ತೈಲ ತಯಾರಕರು ಇಳಿಕೆಯಾದ […]
ಈಸಿ ಲೈಫ್ ಆಷಾಢ ಆಫರ್: ಮಾಕಿತಾ ಹೈ ಪ್ರೆಷರ್ ವಾಷರ್ ಮೇಲೆ 10% ಡಿಸ್ಕೌಂಟ್

ಕಾರ್ ವಾಷ್ ಮಾಡಲು, ಕೊಟ್ಟಿಗೆ ತೊಳೆಯಲು, ಪಾಚಿ ತೊಳೆಯಲು, ವಾಹನ ತೊಳೆಯಲು, ಇನ್ನೂ ಹಲವಾರು ಬಗೆಯಾಗಿ ಉಪಯೋಗಿಸಬಹುದಾದ ಹೈ ಪ್ರೆಷರ್ ವಾಷರ್ ಈಸಿ ಲೈಫ್ ನಲ್ಲಿ ಲಭ್ಯವಿದೆ. ಇದೀಗ ಆಷಾಢ ಆಫರ್ ನಲ್ಲಿ 10% ಡಿಸ್ಕೌಂಟ್ ಲಭ್ಯವಿದೆ. ಈ ಕೊಡುಗೆ ಸೀಮಿತ ಅವಧಿಯವರೆಗೆ ಮಾತ್ರ….. ಹೆಚ್ಚಿನ ಮಾಹಿತಿಗೆ ನಿಮ್ಮ ಹತ್ತಿರದ ಈಸೀ ಲೈಫ್ ಶಾಖೆಯನ್ನು ಸಂಪರ್ಕಿಸಿ: ಹೊಸ್ಮಾರು -8971682121 ಬಜಗೋಳಿ -8971062121 ಕಾರ್ಕಳ – 9945713202 ಅಜೆಕಾರು – 8971262121 ಹೆಬ್ರಿ – 9483760791 ಉಡುಪಿ – […]
ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಸನ್ಮಾನ

ಉಡುಪಿ: ಕೌಂಡಿಣ್ಯ ಗೋತ್ರ ನಾಯಕ ಕುಲಪುರಷ ಕಮಿಟಿ ರಮಾನಾಥ್ ಗೋವಾ ಹಾಗೂ ದಿವಂಗತ. ಬಿ.ಜಯರಾಮ್ ನಾಯಕ್ ಮೆಮೋರಿಯಲ್ ಸ್ಮರಣಾರ್ಥವಾಗಿ ಹತ್ತನೇ ಮತ್ತು ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ವಿಶೇಷ ಸಾಧನೆಗೈದ 9 ವಿದ್ಯಾರ್ಥಿಗಳ ಸನ್ಮಾನ ಕಾರ್ಯಕ್ರಮ ಭಾನುವಾರದಂದು ಉಡುಪಿ ಒಳಕಾಡಿನ ಅನಂತ ವೈದಿಕ ಕೇಂದ್ರದಲ್ಲಿ ಜರುಗಿತು. ಟ್ರಸ್ಟ್ ನ ಅಧ್ಯಕ್ಷ ಮೋಹನ್ ನಾಯಕ್ ಬೆಳಗಾಂ, ಪ್ರತಿ ವಿದ್ಯಾರ್ಥಿಗೂ 5000ರೂ ನಗದು ಸಹಿತ ಶಾಲು ಹೊದಿಸಿ ಸ್ಮರಣಿಕೆ ನೀಡಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಅಜೆಕಾರ್ ಪ್ರೇಮಾನಂದ್ ನಾಯಕ್, ರಾಧಾಕೃಷ್ಣ […]
ಕೇಂದ್ರ ಲಲಿತ ಕಲಾ ಅಕಾಡೆಮಿ ಚಿತ್ರಕಲಾ ಪ್ರದರ್ಶನ: ಆಸ್ಟ್ರೋ ಮೋಹನ್ ಅವರ ‘ಶುಭೋದಯ’ ಕಲಾಕೃತಿ ಆಯ್ಕೆ

ಉಡುಪಿ: ಕೇಂದ್ರ ಲಲಿತ ಕಲಾ ಅಕಾಡೆಮಿ ಆಯೋಜಿಸಿದ್ದ 62 ನೇ ವಾರ್ಷಿಕ ಚಿತ್ರಕಲಾ ಪ್ರದರ್ಶನದಲ್ಲಿ ಉದಯವಾಣಿ ಮಣಿಪಾಲ ಆವೃತ್ತಿಯ ಹಿರಿಯ ಪತ್ರಿಕಾ ಛಾಯಾಗ್ರಾಹಕ ಆಸ್ಟ್ರೋ ಮೋಹನ್ ಅವರ ಚಿತ್ರ ಕಲಾಕೃತಿ ಶುಭೋದಯ ಪ್ರದರ್ಶನಗೊಂಡಿದೆ. ಉಡುಪಿ ಶ್ರೀ ಕೃಷ್ಣ ಮಠದಲ್ಲಿ ನಿರ್ಮಿಸಲಾದ ಈ ಚಿತ್ರ ಕೃತಿ ಕಲಾಚಿತ್ರ ವಿಭಾಗದಲ್ಲಿ ಆಯ್ಕೆಗೊಂಡಿರುವುದು ಬಹು ಪ್ರಶಂಸೆಗೆ ಪಾತ್ರವಾಗಿದೆ. ದೇಶದ 2351 ಕಲಾವಿದರಿಂದ 5450 ಕಲಾಕೃತಿಗಳು ಆಯ್ಕೆಗೆ ಆಗಮಿಸಿದ್ದವು. ಅದರಲ್ಲಿ ಕೇವಲ 300 ಕಲಾಕೃತಿಗಳನ್ನು ಮಾತ್ರ ಪ್ರದರ್ಶನಕ್ಕೆ ಆಯ್ಕೆ ಮಾಡಲಾಗಿತ್ತು.