ಉದ್ಯೋಗ ಇಲಾಖೆ ವತಿಯಿಂದ ಉಚಿತ ಕಂಪ್ಯೂಟರ್ ತರಬೇತಿ

ಉಡುಪಿ: ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಯ ವತಿಯಿಂದ ನಗರದ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದಲ್ಲಿ ಸಾಫ್ಟ್ ಸ್ಕಿಲ್ಸ್, ಬೇಸಿಕ್ ಕಂಪ್ಯೂಟರ್ ಮತ್ತು ಕನ್ನಡನುಡಿ ಟೈಪಿಂಗ್ ತರಬೇತಿಯನ್ನು ಪಡೆಯಲು ಯುವಕರು, ಯುವತಿಯರು ಹಾಗೂ ವಿದ್ಯಾರ್ಥಿಗಳು ನೋಂದಣಿ ಮಾಡಬಹುದಾಗಿದೆ. ತರಬೇತಿಯು ಉಚಿತವಾಗಿದ್ದು, ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ, ಜಿಲ್ಲಾಧಿಕಾರಿ ಸಂಕೀರ್ಣ, ರಜತಾದ್ರಿ, ಮಣಿಪಾಲ, ಮೊ.ನಂ: 8197440155 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ಉದ್ಯೋಗಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಲಿಕ್ವಿಡ್ ನೈಟ್ರೋಜನ್ ಸಂಶೋಧನೆಗೆ ಸಹಕಾರ: ನಿಟ್ಟೆ ಹಾಗೂ ಇಲೈಟ್ ಇಂಡಸ್ಟ್ರೀಸ್ ನಡುವೆ ಒಪ್ಪಂದ

ನಿಟ್ಟೆ: ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯ ಹಾಗೂ ಇಲೈಟ್ ಇಂಡಸ್ಟ್ರೀಸ್ ಗ್ರೂಪ್ ಆಫ್ ಕಂಪೆನೀಸ್, ದಮನ್ & ಡಿಯು ನ ನಡುವಿನ ಶೈಕ್ಷಣಿಕ ಒಪ್ಪಂದಕ್ಕೆ ಸಹಿ ಹಾಕುವ ಹಾಗೂ ಹಸ್ತಾಂತರ ಮಾಡುವ ಕಾರ್ಯಕ್ರಮವು ಜು.12 ರಂದು ನಿಟ್ಟೆ ತಾಂತ್ರಿಕ ಕಾಲೇಜಿನಲ್ಲಿ ನಡೆಯಿತು. ನಿಟ್ಟೆ ತಾಂತ್ರಿಕ ಕಾಲೇಜಿನ ಪ್ರಾಂಶುಪಾಲ ಡಾ. ನಿರಂಜನ್ ಎನ್.ಚಿಪ್ಳೂಣ್ಕರ್ ಹಾಗೂ ಇಲೈಟ್ ಇಂಡಸ್ಟ್ರೀಸ್ ಸಂಸ್ಥೆಯ ಸಿ.ಇ.ಒ ದಿನೇಶ್ ಶೆಟ್ಟಿ ಒಪ್ಪಂದದಕ್ಕೆ ಸಹಿ ಹಾಕಿದರು. ಮೆಕ್ಯಾನಿಕಲ್ ವಿಭಾಗದ ಸಹಪ್ರಾಧ್ಯಾಪಕ ಡಾ.ಉದಯ್, ಇಲೈಟ್ ಸಂಸ್ಥೆಯೊಂದಿಗಿನ […]

ಭಾರೀ ಮಳೆಗೆ ಶೃಂಗೇರಿ-ಆಗುಂಬೆ ಮಾರ್ಗದಲ್ಲಿ ಭೂಕುಸಿತ: ರಸ್ತೆ ಸಂಪರ್ಕ ಕಡಿತ, ಪರ್ಯಾಯ ಮಾರ್ಗ ಸಂಚಾರ

ಕಾರ್ಕಳ : ಚಿಕ್ಕಮಗಳೂರಿನಲ್ಲಿ ಭಾರೀ ಮಳೆ ಸುರಿಯುತ್ತಿದ್ದು ಶೃಂಗೇರಿ ಬಳಿ ಭೂಕುಸಿತ ಸಂಭವಿಸಿದೆ. ಈ ಹಿನ್ನೆಲೆಯಲ್ಲಿ ಆಗುಂಬೆ- ಶೃಂಗೇರಿ ನಡುವೆ ರಸ್ತೆ ಸಂಪರ್ಕ ಸಂಪೂರ್ಣ ಕಡಿತವಾಗಿದೆ. ಪ್ರಯಾಣಿಕರಿಗಾಗಿ ಬದಲಿ ಮಾರ್ಗದ ವಿವರ: ಶೃಂಗೇರಿ – ಕೆಲ್ಲಾರ್ – ಮೀಗಾ ಮಾರ್ಗವಾಗಿ ಬೇಗಾರ್ ಮೂಲಕ ಆಗುಂಬೆ ತಲುಪಬಹುದಾಗಿದೆ ಅಥವಾ ಶೃಂಗೇರಿ – ಕಾವಡಿ – ಬಿಲಗದ್ದೆ – ಶಾನುವಳ್ಳಿ – ಮಾವಿನಕಟ್ಟೆ – ಬೇಗಾರ್ ಮಾರ್ಗವಾಗಿ ಆಗುಂಬೆ ತಲುಪಬಹುದಾಗಿದೆ.

ಮಾಜಿ ಪ್ರಧಾನಿ ಇಂದಿರಾಗಾಂಧಿ ಅವತಾರದಲ್ಲಿ ಕಂಗನಾ ರಣೌತ್: ಎಮರ್ಜೆನ್ಸಿ ಆಧಾರಿತ ಚಿತ್ರದಲ್ಲಿ ಕಂಗನಾ ಪರಕಾಯ ಪ್ರವೇಶ

  1975 ರ ತುರ್ತುಪರಿಸ್ಥಿತಿ ಘೋಷಣೆಯ ಮೇಲೆ ಆಧಾರಿತ ‘ಎಮರ್ಜೆನ್ಸಿ’ ಚಿತ್ರದಲ್ಲಿ ಬಾಲಿವುಡ್ ನಟಿ ಕಂಗನಾ ರಣೌತ್ ಥೇಟ್ ಮಾಜಿ ಪ್ರಧಾನಿ ದಿವಂಗತ ಇಂದಿರಾಗಾಂಧಿಯಂತೆಯೆ ಕಾಣಿಸಿಕೊಂಡಿದ್ದು, ಸಿನಿಪ್ರಿಯರ ಹುಬ್ಬೇರುವಂತೆ ಮಾಡಿದ್ದಾರೆ. ಈ ಹಿಂದೆ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿವಂಗತ ಜಯಲಲಿತಾ ಅವರ ಜೀವನಾಧಾರಿತ ‘ತಲೈವಿ’ ಚಿತ್ರದಲ್ಲಿಯೂ ಪರಕಾಯ ಪ್ರವೇಶ ಮಾಡಿ ತನ್ನ ನಟನಾ ಕೌಶಲ್ಯದಿಂದ ಸಿನಿಪ್ರಿಯರನ್ನು ದಂಗುಬಡಿಸಿದ್ದರು ಕಂಗನಾ. ಇಂಧಿರಾಗಾಂಧಿಯಂತೆ ಕಾಣಿಸಿಕೊಳ್ಳಲು ಆಸ್ಕರ್ ಪ್ರಶಸ್ತಿ ವಿಜೇತ ಸ್ಪೆಷಲ್ ಎಫೆಕ್ಟ್ ಮೇಕಪ್ ಕಲಾವಿದ ಡೇವಿಡ್ ಮಲಿನೋವ್ಸ್ಕಿ ಅವರನ್ನು ಕಂಗನಾ […]

ಪಿ.ಫ್.ಐ ಸಂಘಟನೆಯ ‘2047 ರ ಯೋಜನೆ’: ಬಿಹಾರ ಪೊಲೀಸರಿಂದ ಬಯಲಾಯ್ತು ಪಿ.ಎಫ್.ಐ ರಹಸ್ಯ?!

ಪಟ್ನಾ: 2047 ರ ವೇಳೆಗೆ ಭಾರತವನ್ನು ಇಸ್ಲಾಮಿಕ್ ರಾಷ್ಟ್ರವನ್ನಾಗಿ ಮಾಡುವ ಪ್ರತಿಜ್ಞೆ ಮಾಡಿರುವ ಇಸ್ಲಾಮಿಕ್ ಸಂಘಟನೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ನ ಭೀಕರ ಯೋಜನೆಯನ್ನು ಬಹಿರಂಗಪಡಿಸಿರುವುದಾಗಿ ಬಿಹಾರ ಪೊಲೀಸರು ಹೇಳಿದ್ದಾರೆ. ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ, ಒಂದು ರಹಸ್ಯ ದಾಖಲೆಯಲ್ಲಿ, ಹಿಂಬಾಲಕರನ್ನು ತನ್ನ ಹಿಂದೆ ಒಟ್ಟುಗೂಡಿಸಿ ತನ್ನ ಮಹಾ ಯೋಜನೆಯನ್ನು “ವಾಸ್ತವೀಕರಿಸಲು” ಹೇಳಿದೆ. ಸಂಘಟನೆಯು ತನ್ನ ಕಾರ್ಯಸೂಚಿಯನ್ನು ಮತ್ತಷ್ಟು ವಿವರಿಸುತ್ತಾ, ಪಿ.ಎಫ್.ಐ ದಾಖಲೆಯು 10 ಪ್ರತಿಶತದಷ್ಟು ಭಾರತೀಯ ಮುಸ್ಲಿಮರು ಗುಂಪಿನ ಹಿಂದೆ ಒಟ್ಟುಗೂಡಿದರೂ, ಅದು […]