ಪ್ರಾಕೃತಿಕ ವಿಕೋಪ ಪರಿಶೀಲನಾ ಸಭೆ ನಡೆಸಿದ ಸಚಿವೆ ಶೋಭಾ ಕರಂದ್ಲಾಜೆ: ವಿವಿಧ ಸಮಸ್ಯೆಗಳ ಕುರಿತು ಚರ್ಚೆ

ಉಡುಪಿ: ಜಿಲ್ಲೆಯಲ್ಲಿ ಅವ್ಯಾಹತ ಮಳೆಯಿಂದಾಗಿ ಬಿತ್ತನೆ ಮಾಡಿದ ಭತ್ತದ ಬೆಳೆಯು ಹಾನಿಯಾಗಿದ್ದು, ರೈತರಿಗೆ ಹಾನಿಯ ಮೊತ್ತವನ್ನು ಶೀಘ್ರದಲ್ಲಿಯೇ ಒದಗಿಸಬೇಕು. ರೈತರು ಮತ್ತೊಮ್ಮೆ ಕೃಷಿ ಮಾಡಲು ಅಗತ್ಯವಿರುವ ಬಿತ್ತನೆ ಬೀಜಗಳನ್ನು ಸಮರ್ಪಕವಾಗಿ ವಿತರಣೆ ಮಾಡಬೇಕು ಎಂದು ಕೃಷಿ ಇಲಾಖೆಯ ಅಧಿಕಾರಿಗಳಿಗೆ ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಖಾತೆಯ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದರು. ಅವರು ಸೋಮವಾರ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ, ಜಿಲ್ಲೆಯಲ್ಲಿ ಪ್ರಾಕೃತಿಕ ವಿಕೋಪಕ್ಕೆ ಸಂಬಂಧಿಸಿದ ಪರಿಶೀಲನಾ ಸಭೆಯಲ್ಲಿ ವಿವಿಧ ಸಮಸ್ಯೆಗಳ ಕುರಿತು ಚರ್ಚಿಸಿ […]

ಜು. 13 ರಂದು ಕಂದಾಯ ಸಚಿವ ಆರ್ ಅಶೋಕ್ ಜಿಲ್ಲಾ ಪ್ರವಾಸ

ಉಡುಪಿ: ರಾಜ್ಯದ ಕಂದಾಯ ಸಚಿವ ಆರ್. ಅಶೋಕ್ ಅವರು ಜುಲೈ 13 ರಂದು ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ. ಜು. 12 ರಂದು ರಾತ್ರಿ 8.30 ಕ್ಕೆ ಉಡುಪಿಗೆ ಆಗಮಿಸಿ ವಾಸ್ತವ್ಯ ಮಾಡಲಿದ್ದಾರೆ. ಜು. 13 ರಂದು ಬೆಳಗ್ಗೆ 9 ಗಂಟೆಗೆ ಉಡುಪಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮಳೆ ಹಾನಿಗೆ ಸಂಬಂಧಿಸಿದಂತೆ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಸಭೆಯಲ್ಲಿ ಭಾಗವಹಿಸಿ, ಉತ್ತರ ಕ್ನನಡ ಜಿಲ್ಲೆಗೆ ಪ್ರಯಾಣಿಸಿ, ನಂತರ ಉಡುಪಿ ಜಿಲ್ಲೆಯಲ್ಲಿ ಸಂಜೆ 6 ಗಂಟೆಗೆ […]

ಜೆಇಇ ಮೈನ್ಸ್ ಪರೀಕ್ಷೆ: ಎಕ್ಸ್ಪರ್ಟ್ ಪಿಯು ಕಾಲೇಜಿನ 63 ವಿದ್ಯಾರ್ಥಿಗಳಿಗೆ 95 ಪರ್ಸೆಟೈಲ್‌ಗಿಂತ ಅಧಿಕ ಅಂಕ

ಎಂಜಿನಿಯರಿಂಗ್ ವಿಭಾಗದಲ್ಲಿ ರಾಷ್ಟ್ರಮಟ್ಟದಲ್ಲಿ ನಡೆಸುವ ಜೆಇಇ ಮೈನ್ಸ್ ಪ್ರಥಮ ಹಂತದ ಪರೀಕ್ಷೆಯಲ್ಲಿ ವಳಚ್ಚಿಲ್ ಎಕ್ಸ್ಪರ್ಟ್ ಪದವಿ ಪೂರ್ವ ಕಾಲೇಜಿನ ಮತ್ತು ಕೊಡಿಯಾಲ್‌ಬೈಲ್ ಎಕ್ಸ್ಪರ್ಟ್ ಪದವಿ ಪೂರ್ವ ಕಾಲೇಜಿನ 63 ವಿದ್ಯಾರ್ಥಿಗಳು 95 ಪರ್ಸೆಂಟೈಲ್‌ಗಿಂತ ಅಧಿಕ ಹಾಗೂ 136 ವಿದ್ಯಾರ್ಥಿಗಳು ಪರ್ಸೆಂಟೈಲ್ 90 ಕ್ಕಿಂತ ಅಧಿಕ ಫಲಿತಾಂಶವನ್ನು ಗಳಿಸಿದ್ದಾರೆ. ಐವರು ವಿದ್ಯಾರ್ಥಿಗಳು 99 ಪರ್ಸೆಂಟೈಲ್‌ಗಿಂತ ಅಧಿಕ, 18 ವಿದ್ಯಾರ್ಥಿಗಳು 98 ಪರ್ಸೆಂಟೈಲ್‌ಗಿಂತ ಅಧಿಕ, 36 ವಿದ್ಯಾರ್ಥಿಗಳು 97 ಪರ್ಸೆಂಟೈಲ್‌ಗಿಂತ ಅಧಿಕ ಅಂಕ ಪಡೆದಿದ್ದಾರೆ. ಸಂಕೇತ್ ಎನ್ ಎಸ್ (99.6679803), […]

ಜೆಇಇ ಮೈನ್ಸ್: ಜ್ಞಾನಸುಧಾ ಕಾಲೇಜಿನ ನಾಲ್ಕು ವಿದ್ಯಾರ್ಥಿಗಳಿಗೆ 99ಕ್ಕೂ ಅಧಿಕ ಪರ್ಸಂಟೈಲ್

ಕಾರ್ಕಳ :ಇಂಜಿನಿಯರಿಂಗ್ ವಿಭಾಗದಲ್ಲಿ ರಾಷ್ಟ್ರಮಟ್ಟದಲ್ಲಿ ನಡೆಸುವ ಜೆಇಇ ಮೈನ್ಸ್ ಮೊದಲ ಹಂತದ ಪರೀಕ್ಷೆಯಲ್ಲಿ ಗಣಿತನಗರದ ಕಾರ್ಕಳ ಜ್ಞಾನಸುಧಾ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ. ಭೌತಶಾಸ್ತ್ರದಲ್ಲಿ ಅಖಿಲ್‌ವಾಗ್ಲೆ 100ಕ್ಕೆ 100 ಪರ್ಸಂಟೈಲ್ ನೊಂದಿಗೆ ಒಟ್ಟು99.4554703 ಪರ್ಸಂಟೈಲ್ ದಾಖಲಿಸಿದ್ದಾರೆ. ಚಿರಾಗ್.ಎಸ್ 99.3526192, ಸ್ತುತಿ ಎಸ್ 99.1515686, ಆರ್ಯ.ಪಿ.ಶೆಟ್ಟಿ 99.1010784, ಪ್ರಜ್ವಲ್.ಜೆ.ಪಟಗಾರ್ 98.9625324, ಆದರ್ಶ್ ತಟಾವಟಿ 98.4230842, ಸಾತ್ವಿಕ್‌ ಚಂದ್ರ 98.3865636, ಪ್ರಜ್ಞಾ ವಿ 97.9240797, ಕೆ. ಶಶಾಂಕ ಕಲ್ಕುರ 97.8016312, ಶಶಾಂಕ್‌.ಆರ್‌.ಆಚಾರ್ಯ 97.4484435, ಮೊಹಮ್ಮದ್‌ ರಿಹಾನ್ ವಾಲಿಕಾರ್ […]

ಬ್ರಹ್ಮಶ್ರೀ ನಾರಾಯಣ ಗುರುಗಳ ಪಠ್ಯ ಸಮಾಜ ವಿಜ್ಞಾನ ಪುಸ್ತಕದಲ್ಲಿ ಮರು ಸೇರ್ಪಡೆ

ಉಡುಪಿ: ಬ್ರಹ್ಮಶ್ರೀ ನಾರಾಯಣ ಗುರುಗಳ ಪಠ್ಯವನ್ನು ಕನ್ನಡ ಭಾಷೆಯಲ್ಲಿ ಅಳವಡಿಸಿದ್ದು, ಅದರ ಬದಲು ಸಮಾಜ ವಿಜ್ಞಾನ ವಿಷಯದ ಪಠ್ಯದಲ್ಲಿ ಅಳವಡಿಸಲು ಸಚಿವ ಸುನಿಲ್ ಕುಮಾರ್ ಅವರ ಕೋರಿಕೆಯ ಹಿನ್ನೆಲೆಯಲ್ಲಿ ಗುರುಗಳ ಕುರಿತಾದ ಪಾಠವನ್ನು ಸಮಾಜ ವಿಜ್ಞಾನ ವಿಷಯದ ಪಠ್ಯ ಪುಸ್ತಕದಲ್ಲಿ ತಕ್ಷಣ ಅಳವಡಿಸಲು ಸರ್ಕಾರಿ ಆದೇಶ ಹೊರಡಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತಿಳಿಸಿದ್ದಾರೆ. ಸರಕಾರದ ಈ ನಿರ್ಧಾರವನ್ನು ಸ್ವಾಗತಿಸಿರುವ ಬಿಲ್ಲವ ಸಮಾಜವು ಅಧಿಕೃತ ಆದೇಶ ಬಂದ ಕೂಡಲೇ ಈಗಾಗಲೇ ಕರೆ […]