ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರಿಗೆ ಗುರುವಂದನಾ ಕಾರ್ಯಕ್ರಮ
ಉಡುಪಿ: ಶ್ರೀ ಪೂರ್ಣಪ್ರಜ್ಞಾ ಆಡಿಟೋರಿಯಂನಲ್ಲಿ ಅದಮಾರು ಹಿರಿಯ ಮಠಾಧೀಶರಾದ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರ ಸನ್ಯಾಸದೀಕ್ಷಾ ಸುವರ್ಣ ಮಹೋತ್ಸವದ ಅಂಗವಾಗಿ ಶ್ರೀ ಪಾದರಿಗೆ ಅದಮಾರು ಕಿರಿಯ ಮಠಾಧೀಶರಾದ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಗುರುವಂದನಾ ಕಾರ್ಯಕ್ರಮವನ್ನು ನೆರವೇರಿಸಿದರು. ಕಾರ್ಯಕ್ರಮದಲ್ಲಿ ಗಣ್ಯರು ನೆರೆದಿದ್ದರು.
ಭಾರತ XI ಮತ್ತು ವಿಶ್ವ XI ತಂಡದ ನಡುವೆ ಕ್ರಿಕೆಟ್ ಪಂದ್ಯವಾಡಿಸಲು ಸರಕಾರದಿಂದ ಬಿಸಿಸಿಐಗೆ ಮನವಿ
ನವದೆಹಲಿ: ಪಿಟಿಐ ವರದಿಗಳನ್ನು ನಂಬುವುದಾದರೆ, ಭಾರತದ 75 ನೇ ಸ್ವಾತಂತ್ರ್ಯ ವಾರ್ಷಿಕೋತ್ಸವದ ಆಚರಣೆ ಅಂಗವಾಗಿ ಆಗಸ್ಟ್ 22 ರಂದು ಭಾರತ XI ಮತ್ತು ವಿಶ್ವ XI ತಂಡದ ನಡುವೆ ಕ್ರಿಕೆಟ್ ಪಂದ್ಯವನ್ನು ಆಯೋಜಿಸುವಂತೆ ಭಾರತ ಸರ್ಕಾರವು, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಗೆ (ಬಿಸಿಸಿಐ) ಕೋರಿಕೆ ಸಲ್ಲಿಸಿದೆ. ಆಜಾದಿ ಕಾ ಅಮೃತ್ ಮಹೋತ್ಸವ ಅಭಿಯಾನದ ಭಾಗವಾಗಿ ಭಾರತದ ಸಂಸ್ಕೃತಿ ಸಚಿವಾಲಯವು ಭಾರತದ ಅಗ್ರ ಆಟಗಾರರು ಮತ್ತು ವಿದೇಶದ ಜನಪ್ರಿಯ ಕ್ರಿಕೆಟಿಗರ ಮಧ್ಯೆ ಪಂದ್ಯವನ್ನು ಆಡಿಸಲು ಪ್ರಯತ್ನಿಸುವಂತೆ ಬಿಸಿಸಿಐ ಅಧಿಕಾರಿಗಳ […]
ರೂಪಾಯಿಯಲ್ಲೆ ಅಂತರರಾಷ್ಟ್ರೀಯ ವ್ಯಾಪಾರ ಪಾವತಿ: ರೂಪಾಯಿ ಬಲವರ್ಧನೆಗೆ ಆರ್‌ಬಿಐ ಉಪಕ್ರಮ
ನವದೆಹಲಿ: ಇನ್ನು ಮುಂದೆ ಭಾರತೀಯ ರೂಪಾಯಿಯಲ್ಲಿ ವ್ಯಾಪಾರ ಪಾವತಿಗಳನ್ನು ಮಾಡಲು ಆರ್‌ಬಿಐ ಒಂದು ಕಾರ್ಯವಿಧಾನವನ್ನು ಸ್ಥಾಪಿಸಿದೆ. ರೂಪಾಯಿಯಲ್ಲೇ ರಫ್ತು ಮತ್ತು ಆಮದುಗಳ ಇನ್‌ವಾಯ್ಸ್, ಪಾವತಿ ಮತ್ತು ಸೆಟಲ್ ಮೆಂಟ್ ಗಳನ್ನು ನಡೆಸಲು ಕೇಂದ್ರ ಬ್ಯಾಂಕ್ ಈ ಹೆಚ್ಚುವರಿ ವ್ಯವಸ್ಥೆಯನ್ನು ಜಾರಿಗೆ ತಂದಿದೆ. ಈ ಕ್ರಮವು ಭಾರತದ ರಫ್ತಿಗೆ ಒತ್ತು ನೀಡುವ ಮೂಲಕ ಜಾಗತಿಕ ವ್ಯಾಪಾರದ ಬೆಳವಣಿಗೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ ಮತ್ತು ಭಾರತೀಯ ರೂಪಾಯಿಯಲ್ಲಿ ಜಾಗತಿಕ ವ್ಯಾಪಾರ ಸಮುದಾಯದ ಹೆಚ್ಚುತ್ತಿರುವ ಆಸಕ್ತಿಯನ್ನು ಬೆಂಬಲಿಸುತ್ತದೆ. ಈ ಕಾರ್ಯವಿಧಾನವನ್ನು ಜಾರಿಗೆ […]
ನ್ಯಾಷನಲ್ ಹೆರಾಲ್ಡ್ ಪ್ರಕರಣ: ಸೋನಿಯಾ ಗಾಂಧಿಗೆ ಇಡಿ ಸಮನ್ಸ್, ಜುಲೈ 21 ರಂದು ಹಾಜರಾಗಲು ಕೋರಿಕೆ
ನವದೆಹಲಿ: ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಜುಲೈ 21 ರಂದು ಏಜೆನ್ಸಿಯ ಮುಂದೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯ (ಇಡಿ) ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಹೊಸ ಸಮನ್ಸ್ ನೀಡಿದೆ. ಕೋವಿಡ್ -19 ರಿಂದ ಚೇತರಿಸಿಕೊಳ್ಳುವುದನ್ನು ಉಲ್ಲೇಖಿಸಿ ಸೋನಿಯಾ ಗಾಂಧಿ ಈ ಹಿಂದೆ ತನಿಖಾ ಸಂಸ್ಥೆಗೆ ಪತ್ರ ಬರೆದಿದ್ದರು. ಮೊದಲನೆ ನೋಟೀಸ್ ನೀಡಿದಾಗ ಸೋನಿಯಾ ಗಾಂಧಿಗೆ ಕೋವಿಡ್ ಪತ್ತೆ ಪರೀಕ್ಷೆಯಲ್ಲಿ ಸಂಕ್ರಮಣ ಇದೆ ಎಂದಾಗಿತ್ತು ಮತ್ತೆ ಆಕೆ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆ ಬಳಿಕ ಜೂನ್ 23 ರಂದು ಹಾಜರಾಗಲು […]
ಅಂಬಲಪಾಡಿ: ಜುಲೈ 13 ರಂದು ಪೆಟ್ ಮಾರ್ಟ್ ಶುಭಾರಂಭ
ಉಡುಪಿ: ಇಲ್ಲಿನ ಅಂಬಲಪಾಡಿಯಲ್ಲಿರುವ ಕಾರ್ತಿಕ್ ಎಸ್ಟೇಟ್ ನಲ್ಲಿ, ಸಾಕು ಪ್ರಾಣಿಗಳ ಆಹಾರ ತಿನಿಸು ಮತ್ತು ಆಟದ ಸಾಮಾಗಿಗಳ ಅಂಗಡಿ ಪೆಟ್ ಮಾರ್ಟ್ ಜುಲೈ 13 ರಂದು ಶುಭಾರಂಭಗೊಳ್ಳುತ್ತಿದ್ದು, ಮಧ್ಯಾಹ್ನ 3 ಗಂಟೆಗೆ ಉದ್ಘಾಟನಾ ಸಮಾರಂಭ ಜರುಗಲಿದೆ. ಉದ್ಘಾಟನಾ ಸಮಾರಂಭಕ್ಕೆ ಎಲ್ಲರೂ ಆಗಮಿಸಿ ಶುಭ ಹಾರೈಸಿ ಪ್ರೋತ್ಸಾಹಿಸುವಂತೆ ಸತ್ಯ ಅವರು ಕೇಳಿಕೊಂಡಿದ್ದಾರೆ.