ಜಿಲ್ಲಾ ಮಲೆಕುಡಿಯ ಸಂಘ: ನೂತನ ಆಡಳಿತ ಮಂಡಳಿಯ ಪದಗ್ರಹಣ ಸಮಾರಂಭ

ಉಡುಪಿ: ಜಿಲ್ಲಾ ಮಲೆ ಕುಡಿಯ ಸಂಘದ ನೂತನ ಆಡಳಿತ ಮಂಡಳಿಯ ಪದಗ್ರಹಣ ಸಮಾರಂಭ, ವಿಶೇಷ ಮಹಾಸಭೆ ಹಾಗೂ ನೂತನ ಆಡಳಿತ ಮಂಡಳಿಯ ಪ್ರಥಮ ತ್ರೈಮಾಸಿಕ ಸಭೆಯು ಜಿಲ್ಲಾಧ್ಯಕ್ಷ ಗಂಗಾಧರ ಗೌಡ ಇವರ ಅಧ್ಯಕ್ಷತೆಯಲ್ಲಿ ಇಂದು ಪೇರಡ್ಕದಲ್ಲಿರುವ ಸಂಘದ ಕಛೇರಿಯಲ್ಲಿ ಜರಗಿತು. ನಿಕಟಪೂರ್ವ ಜಿಲ್ಲಾಧ್ಯಕ್ಷ ಗೋಪಾಲ್ ಗೌಡ ಎತ್ತಲ್ ಗುಡ್ಡೆ ಮತ್ತು ನಿಕಟಪೂರ್ವ ಪ್ರಧಾನ ಕಾರ್ಯದರ್ಶಿ ಸಾಧು ಗೌಡ ನಾರ್ಜೆ ಹಾಗೂ ಆಡಳಿತ ಮಂಡಳಿ ಸದಸ್ಯರು ನೂತನ ಆಡಳಿತ ಮಂಡಳಿಗೆ ಸಂಘದ ಕಡತಗಳನ್ನು ನೀಡುವ ಮೂಲಕ ಅಧಿಕಾರ ಹಸ್ತಾಂತರಿಸಿದರು. […]

ಉದ್ಯಾವರ: ಉದ್ಯಮಿಗಳ ಒಣ ಪ್ರತಿಷ್ಠೆಗೆ ಹೈರಾಣಾದ ಸ್ಥಳೀಯ ಜನತೆ ರಸ್ತೆ ಅವಾಂತರದಿಂದ ಬದುಕು ನರಕ

ಉದ್ಯಾವರ: ಉಳಿದೆಲ್ಲಾ ಕಡೆ ಮಳೆಯಿಂದಾಗಿ ರಸ್ತೆ ಸಮಸ್ಯೆಗಳುಂಟಾಗಿದ್ದರೆ, ಉದ್ಯಾವರದ ಜನರಿಗೆ ಮಾತ್ರ ಮಳೆಗಾಲ ಆರಂಭಕ್ಕೂ ಮೊದಲೆ ರಸ್ತೆ ಸಮಸ್ಯೆ ಎದುರಾಗಿತ್ತು. ಉದ್ಯಾವರದಿಂದ ಪಿತ್ರೋಡಿಗೆ ಹೋಗುವ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದ್ದು, ಜನರು ಹೊಂಡ ಗುಂಡಗಳಿಂದ ತಪ್ಪಿಸಿಕೊಂಡು ವಾಹನ ಸಂಚಾರ ಮಾಡಬೇಕಾದ ಅನಿವಾರ್ಯತೆ ಉಂಟಾಗಿದೆ. ಎರಡು ತಿಂಗಳ ಹಿಂದೆ ಉದ್ಯಾವರ ಪಂಚಾಯತ್ ಮುಂಭಾಗದಿಂದ ಪಿತ್ರೋಡಿ ಹೋಗುವ 170 ಮೀಟರ್ ರಸ್ತೆಯನ್ನು ಅಗೆದು ಹಾಕಿ ಕಾಮಗಾರಿಯನ್ನು ಆಮೆಗತಿಯಲ್ಲಿ ನಡೆಸಲಾಗುತ್ತಿತ್ತು. ಈ ಬಗ್ಗೆ ಜನಪ್ರತಿನಿಧಿಗಳ ಮೇಲೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ ಬಳಿಕ ಸಿಮೆಂಟ್ […]

ಕೆ. ಎಲ್ ರಾಹುಲ್ ದಾಖಲೆ ಪುಡಿಗಟ್ಟಿದ ಸೂರ್ಯಕುಮಾರ್ ಯಾದವ್: ಟಿ20ಯಲ್ಲಿ ಶತಕ ಸಿಡಿಸಿದ ಐದನೇ ಭಾರತೀಯ

ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೂರನೇ ಟಿ20ಯಲ್ಲಿ ಮೊದಲು ಬ್ಯಾಟಿಂಗ್ ಮಾಡಿ 20 ಓವರ್‌ಗಳಲ್ಲಿ ಇಂಗ್ಲೆಡ್ 215 ರನ್‌ಗಳ ಬೃಹತ್ ಮೊತ್ತವನ್ನು ದಾಖಲಿಸಿತು. ಎರಡನೇ ಇನ್ನಿಂಗ್ಸ್‌ನಲ್ಲಿ, ಭಾರತವು ಮೊದಲ ಐದು ಓವರ್‌ಗಳಲ್ಲಿ ರಿಷಬ್ ಪಂತ್, ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರ ವಿಕೆಟ್‌ಗಳನ್ನು ಕಳೆದುಕೊಂಡು 31-3ಕ್ಕೆ ಇಳಿದಾಗ, ತನ್ನ ಬ್ಯಾಂಟಿಂಗ್ ಕೌಶಲ್ಯವನ್ನು ಒರೆಗೆ ಹಚ್ಚಿದ ಸೂರ್ಯಕುಮಾರ್ ಯಾದವ್ ಟೀಂ ಇಂಡಿಯಾವನ್ನು ಮತ್ತೆ ಹಳಿಗೆ ತಂದರು. ಭಾರತವು ಪಂದ್ಯವನ್ನು ಸೋತಿದ್ದರೂ ಕೂಡಾ ಸೂರ್ಯಕುಮಾರ್ ಶತಕದ ಬಗ್ಗೆ ಇಡೀ […]

ಫುಡ್ ಡೆಲಿವರಿ ಕಂಪನಿ ಸ್ವಿಗ್ಗಿಯಲ್ಲಿ ಉದ್ಯೋಗಾವಕಾಶ

ಉಡುಪಿ/ಮಂಗಳೂರು: ಫುಡ್ ಡೆಲಿವರಿ ಕಂಪನಿ ಸ್ವಿಗ್ಗಿಯಲ್ಲಿ ಫುಲ್ ಟೈಮ್, ಪಾರ್ಟ್ ಟೈಮ್ ಮತ್ತು ವಾರದ ಶಿಫ್ಟ್ ಗಳಲ್ಲಿ ಡೆಲಿವರಿಗೆ ಯುವಕರು ಬೇಕಾಗಿದ್ದು, ಆಸಕ್ತರು ದೂರವಾಣಿ ಸಂಖ್ಯೆ: 8951620203 ಗೆ ಕರೆ ಮಾಡಬಹುದು. ಕೆಲಸದ ವಿಶೇಷತೆಗಳು: ಪ್ರತಿ ತಿಂಗಳು 30000 ರೂ ವರೆಗೆ ಸಂಪಾದನೆ ವಾರಾಂತ್ಯದ ವೇತನ ಶಿಫ್ಟ್ ಭತ್ಯೆ ಕೆಲಸಕ್ಕೆ ಸೇರಿದ ಬೋನಸ್ ಪರ್ಫಾಮೆನ್ಸ್ ಬೋನಸ್ ರೈನ್ ಸರ್ಜ್ ಇನ್ಶೂರೆನ್ಸ್ ಕವರೆಜ್ ಅಭ್ಯರ್ಥಿಗಳು ದ್ವಿಚಕ್ರ ವಾಹನ ಮತ್ತು ಆಂಡ್ರಾಯ್ಡ್ ಫೋನ್ ಹೊಂದುವುದು ಅತ್ಯಗತ್ಯ. ಕೆಲಸದ ಸ್ಥಳ: ಉಡುಪಿ, […]

ಜನಸಂಖ್ಯಾ ಸ್ಪೋಟ: 2023 ರಲ್ಲಿ ಚೀನಾ ಹಿಂದಿಕ್ಕಿ ಅತಿ ಹೆಚ್ಚು ಜನಸಂಖ್ಯೆ ಹೊಂದುವ ರಾಷ್ಟ್ರವಾಗಲಿದೆ ಭಾರತ!

ನವದೆಹಲಿ: ವಿಶ್ವ ಜನಸಂಖ್ಯಾ ದಿನದಂದು ವಿಶ್ವಸಂಸ್ಥೆಯ ವರದಿಯ ಪ್ರಕಾರ ಭಾರತ ಮುಂದಿನ ವರ್ಷ ಚೀನಾವನ್ನು ಹಿಂದಿಕ್ಕಿ ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾಗಿ ಹೊರಹೊಮ್ಮಲಿದೆ ಎಂದು ಅಂದಾಜಿಸಲಾಗಿದೆ. 2022 ರ ನವೆಂಬರ್ ಮಧ್ಯದ ವೇಳೆಗೆ ವಿಶ್ವದ ಜನಸಂಖ್ಯೆಯು ಎಂಟು ಶತಕೋಟಿ ತಲುಪುವ ಮುನ್ಸೂಚನೆ ಇದೆ ಎಂದು ಸಂಸ್ಥೆಯು ಹೇಳಿದೆ. ವಿಶ್ವಸಂಸ್ಥೆಯ ಆರ್ಥಿಕ ಮತ್ತು ಸಾಮಾಜಿಕ ವ್ಯವಹಾರಗಳ ವಿಭಾಗ, ಜನಸಂಖ್ಯಾ ವಿಭಾಗದ ವರ್ಲ್ಡ್ ಪಾಪ್ಯುಲೇಶನ್ ಪ್ರಾಸ್ಪೆಕ್ಟ್ಸ್ 2022, ಜಾಗತಿಕ ಜನಸಂಖ್ಯೆಯು ನವೆಂಬರ್ 15, 2022 ರಂದು ಎಂಟು […]