ತಮಿಳುನಾಡಿನ ರೈತನ ಕೈಚಳಕ: ಭತ್ತದ ಗದ್ದೆಯಲ್ಲಿ ಮೂಡಿಬಂತು ತಿರುವಳ್ಳುವರ್ ಚಿತ್ರ!

ತಂಜಾವೂರು: ಇಲ್ಲಿನ ಮಲೈಯಪ್ಪನಲ್ಲೂರಿನ ರೈತ ಇಳಂಗೋವನ್ ಎನ್ನುವವರು ಭತ್ತದ ಗದ್ದೆಯಲ್ಲಿ ತನ್ನ ಕೈಚಳಕೆ ತೋರಿಸಿ, ತಮಿಳು ಕವಿ ತಿರುವಳ್ಳುವರ್ ಅವರ ಚಿತ್ರ ಮೂಡಿ ಬರುವಂತೆ ಭತ್ತದ ಗದ್ದೆಯನ್ನು ನಾಟಿ ಮಾಡಿದ್ದಾರೆ. “ಹಲವು ವರ್ಷಗಳಿಂದ ಸಾವಯವ ಕೃಷಿ ಮಾಡುತ್ತಿದ್ದೇನೆ. ತಿರುವಳ್ಳುವರ್ ಸಾವಯವ ಕೃಷಿಯ ಬಗ್ಗೆ ಬರೆದಿದ್ದಾರೆ, ಅದಕ್ಕಾಗಿಯೇ ನಾನು ಅದನ್ನು 2 ವಿಧದ ಭತ್ತದ ತಳಿಗಳೊಂದಿಗೆ ತಿರುವಳ್ಳುವರ್ ಅವರ ಚಿತ್ರ ಮಾಡಿದ್ದೇನೆ ಎಂದು ಇಳಂಗೋವನ್ ಸುದ್ದಿ ಸಂಸ್ಥೆ ಎ.ಎನ್.ಐ ಗೆ ಹೇಳಿದ್ದಾರೆ.

ರೈತರಾದವರು ಕಲಾಕಾರರೂ ಆಗಿದ್ದರೆ ಗದ್ದೆಯೆ ಕ್ಯಾನ್ವಾಸ್, ಭತ್ತದ ಬೀಜವೆ ಕುಂಚ…. ಗದ್ದೆಯಲ್ಲೂ ಮೂಡಿಬರುವುದು ಸುಂದರ ಚಿತ್ರ!