ರಾಜಕುಮಾರಿಯಾಗಿ ಮಿಂಚಲಿದ್ದಾರೆ ಐಶ್ವರ್ಯಾ ರೈ: ವಿಶ್ವ ಸುಂದರಿಯ ಪೊನ್ನಿಯನ್ ಸೆಲ್ವನ್ ಪೋಸ್ಟರ್ ಗೆ ಫಿದಾ ಆದ ಸಿನಿಪ್ರಿಯರು

ನಿರ್ದೇಶಕ ಮಣಿರತ್ನಂ ಅವರ ಪೊನ್ನಿಯಿನ್ ಸೆಲ್ವನ್ ಚಿತ್ರದ ಮೂಲಕ ಐಶ್ವರ್ಯಾ ರೈ ಬಚ್ಚನ್ ತಮಿಳು ಚಿತ್ರರಂಗಕ್ಕೆ ಮತ್ತೆ ಮರಳಲಿದ್ದಾರೆ. ಚಿತ್ರದಲ್ಲಿ ಆಕೆ ಪಜುವೂರಿನ ರಾಜಕುಮಾರಿ ನಂದಿನಿ ಪಾತ್ರವನ್ನು ನಿರ್ವಹಿಸಲಿದ್ದಾರೆ. ಜುಲೈ 6 ರಂದು, ಚಿತ್ರದ ಐಶ್ವರ್ಯಾ ಅವರ ಫಸ್ಟ್ ಲುಕ್ ಪೋಸ್ಟರ್ ಅನ್ನು ಅನಾವರಣಗೊಳಿಸಲಾಗಿದೆ. ನಂದಿನಿ ಪಾತ್ರದ ಜೊತೆಗೆ ಮಂದಾಕಿನಿ ದೇವಿಯಾಗಿಯೂ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಪೊನ್ನಿಯಿನ್ ಸೆಲ್ವನ್: ಭಾಗ 1 ಎಂಬ ಶೀರ್ಷಿಕೆಯ ಮೊದಲ ಭಾಗವು ಸೆಪ್ಟೆಂಬರ್ 30 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಮಣಿರತ್ನಂ ಅವರ ನಿರ್ದೇಶನ […]

ಮರವಂತೆ ನಾಗರಾಜ್ ಹೆಬ್ಬಾರರ ಪ್ರವಾಸ ಕಥನ ‘ಚಾರ್ ಧಾಮ್ ಯಾತ್ರಾ’ ಪುಸ್ತಕ ಜುಲೈ 12 ರಂದು ಬಿಡುಗಡೆ 

ಉಡುಪಿ: ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಉಡುಪಿ ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಘಟಕದ ಆಶ್ರಯದಲ್ಲಿ ಮರವಂತೆ ನಾಗರಾಜ್ ಹೆಬ್ಬಾರ್ ರವರ ಪ್ರವಾಸ ಕಥನ ‘ಚಾರ್ ಧಾಮ್ ಯಾತ್ರಾ’ ಪುಸ್ತಕ ಬಿಡುಗಡೆ ಸಮಾರಂಭವು ಜುಲೈ 12 ರಂದು ಮಂಗಳವಾರ 6.00 ಗಂಟೆಗೆ ಹೋಟೇಲ್ ಮಣಿಪಾಲ್ ಇನ್ ನ ಸಿಂಡ್ರೆಲ್ಲಾ ಸಭಾಂಗಣದಲ್ಲಿ ನಡೆಯಲಿದೆ. ಕೆ.ಎಂ.ಸಿ ಮಣಿಪಾಲದ ಪ್ರಾಧ್ಯಾಪಕ ಡಾ. ಕಿರಣ್ ಆಚಾರ್ಯ ಕೃತಿ ಬಿಡುಗಡೆ ಮಾಡಲಿದ್ದಾರೆ. ಮಂಗಳೂರಿನ ನಿವೃತ್ತ ಪ್ರಾಧ್ಯಾಪಕ ಡಾ. ಲಕ್ಷ್ಮೀ ನಾರಾಯಣ ಭಟ್ ಪಿ ಕೃತಿ […]

ಕರಾವಳಿಯ ಸಂಗೀತಾಸಕ್ತರಿಗೆ ಅಭಂಗ್ ಸಂಗೀತದ ರಸದೌತಣ: ಜುಲೈ 24 ರಂದು ಪುರಭವನದಲ್ಲಿ `ಬೋಲಾವ ವಿಠಲ’

ಮಂಗಳೂರು: ಕರಾವಳಿಯ ಸಂಗೀತಾಸಕ್ತರಿಗೆ ಮತ್ತೊಂದು ರಸದೌತಣ. ಮೂರು ಆವೃತ್ತಿಯಲ್ಲಿ ಯಶಸ್ವಿಯಾಗಿದ್ದ `ಬೋಲಾವ ವಿಠಲ’ ಸಂಗೀತ ಕಾರ್ಯಕ್ರಮವು ಜುಲೈ 24 ರಂದು ಸಂಜೆ 5.00 ರಿಂದ ಪುರಭವನದಲ್ಲಿ ನಡೆಯಲಿದೆ. ಹಿಂದೂಸ್ತಾನಿ ಹಾಗೂ ಕರ್ಣಾಟಕ ಸಂಗೀತದ ಶ್ರೇಷ್ಠ ಕಲಾವಿದರಾದ ಹುಬ್ಬಳ್ಳಿಯ ಪಂಡಿತ್ ವೆಂಕಟೇಶ್‌ಕುಮಾರ್, ದೇವಕಿ ಪಂಡಿತ್‌ ಅವರಿಂದ ಅಭಂಗ ರೂಪದಲ್ಲಿ ಹಾಡುಗಾರಿಕೆ ನಡೆಯಲಿದೆ. ಬೋಲಾವ ವಿಠಲ ಕಾರ್ಯಕ್ರಮದಲ್ಲಿ ಭಾಗವಹಿಸಲು ಇಚ್ಚಿಸುವ ಕಲಾಸಕ್ತರು ಪಾಸ್‌ ಅನ್ನು ಕೋಡಿಯಾಲ್‌ಬೈಲ್‌ನಲ್ಲಿರುವ ಎಕ್ಸ್ಪರ್ಟ್ ಪದವಿ ಪೂರ್ವ ಕಾಲೇಜಿನಿಂದ ಜುಲೈ 18 ಸೋಮವಾರದಿಂದ ಪಡೆದುಕೊಳ್ಳಬಹುದು. ಪಾಸ್ ಪಡೆದವರಿಗೆ […]

ಮಿಸ್ ಇಂಡಿಯಾ ಕಿರೀಟ ತೊಟ್ಟ ಕರಾವಳಿಯ ಕುವರಿ ಸಿನಿ ಶೆಟ್ಟಿಗೆ ದೈವ ದೇವರ ಮೇಲೆ ಅಪಾರ ಭಕ್ತಿ; ತುಳುನಾಡಿನ ತೆನಸಿನ ಮೇಲೆ ಅಗಾಧ ಪ್ರೀತಿ!

ಉಡುಪಿ: ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಇನ್ನಂಜೆ ಗ್ರಾಮದ ಮಡುಂಬು ಹೊಸಮನೆ ಸದಾನಂದ ಬಿ. ಶೆಟ್ಟಿ ಮತ್ತು ಬೆಳ್ಳಂಪಳ್ಳಿ ಪುಂಚೂರು ಮಾಧವ ನಿಲಯ ಹೇಮಾ ಎಸ್. ಶೆಟ್ಟಿ ದಂಪತಿ ಪುತ್ರಿ ಸಿನಿ ಶೆಟ್ಟಿ ಹುಟ್ಟಿದ್ದು ಮತ್ತು ಬೆಳೆದಿದ್ದೆಲ್ಲಾ ಮುಂಬಯಿಯಲ್ಲಿಯಾದರೂ ತಮ್ಮ ಮೂಲ ಊರಿನ ಬಗ್ಗೆ ವಿಶೇಷ ಪ್ರೀತಿ ಹೊಂದಿದ್ದಾರೆ. ಇದು ನನ್ನ ಜೀವನದ ಅದ್ಭುತ ಕ್ಷಣ, ಬಹಳಷ್ಟು ನಿರೀಕ್ಷೆಯೊಂದಿಗೆ ಸ್ಪರ್ಧೆಯಲ್ಲಿ ಭಾಗವಹಿಸಿದ್ದೆ, ಮಿಸ್‌ ಇಂಡಿಯಾ ಆಗಿ ಮೂಡಿ ಬಂದದ್ದಕ್ಕೆ ಖುಷಿಯಾಗಿದೆ. ಹೆತ್ತವರ ಪ್ರೋತ್ಸಾಹ, ದೈವ ದೇವರ ಆಶೀರ್ವಾದದೊಂದಿಗೆ […]

ಬ್ರಹ್ಮಾವರ: ಸವಿತಾ ಸಮಾಜ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಇದರ 5ನೇ ಶಾಖೆ ಉದ್ಘಾಟನೆ

ಬ್ರಹ್ಮಾವರ: ವಿಶಿಷ್ಟ ಕಲ್ಪನೆಯೊಂದಿಗೆ ಪ್ರಾರಂಭಗೊಂಡು, ಸವಿತಾ ಸಮಾಜಕ್ಕೆ ಅಗತ್ಯವಿರುವ ವಸ್ತುಗಳನ್ನು ಸಹಕಾರಿ ತತ್ತ್ವದಡಿ ಪೂರೈಸಿ ಯಶಸ್ವಿಯಾಗಿ ಮುನ್ನಡೆಯುತ್ತಿರುವ ಸವಿತಾ ಸಮಾಜ ವಿವಿಧೋದ್ದೇಶ ಸೌಹಾರ್ದ ಸಹಕಾರಿಯು ರಾಜ್ಯಕ್ಕೆ ಮಾದರಿಯಾಗಿದೆ ಎಂದು ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯ ಅಧ್ಯಕ್ಷ ಬಿ. ಎಚ್. ಕೃಷ್ಣ ರೆಡ್ಡಿ ಹೇಳಿದರು. ಅವರು ಮಂಗಳವಾರ ಬ್ರಹ್ಮಾವರ ಸೈಂಟ್ ಅಂತೋನಿ ಪ್ರೆಸ್ ಕಟ್ಟಡದ ಮೊದಲನೇ ಮಹಡಿಯಲ್ಲಿ ಸವಿತಾ ಸಹಕಾರಿಯ 5ನೇ ಶಾಖೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಕೇಂದ್ರ ಮತ್ತು ರಾಜ್ಯ ಸರಕಾರದ ಸವಲತ್ತುಗಳನ್ನು ನೇರವಾಗಿ ಜನರಿಗೆ ತಲುಪಿಸುವ […]