ರಾಜಕುಮಾರಿಯಾಗಿ ಮಿಂಚಲಿದ್ದಾರೆ ಐಶ್ವರ್ಯಾ ರೈ: ವಿಶ್ವ ಸುಂದರಿಯ ಪೊನ್ನಿಯನ್ ಸೆಲ್ವನ್ ಪೋಸ್ಟರ್ ಗೆ ಫಿದಾ ಆದ ಸಿನಿಪ್ರಿಯರು

ನಿರ್ದೇಶಕ ಮಣಿರತ್ನಂ ಅವರ ಪೊನ್ನಿಯಿನ್ ಸೆಲ್ವನ್ ಚಿತ್ರದ ಮೂಲಕ ಐಶ್ವರ್ಯಾ ರೈ ಬಚ್ಚನ್ ತಮಿಳು ಚಿತ್ರರಂಗಕ್ಕೆ ಮತ್ತೆ ಮರಳಲಿದ್ದಾರೆ. ಚಿತ್ರದಲ್ಲಿ ಆಕೆ ಪಜುವೂರಿನ ರಾಜಕುಮಾರಿ ನಂದಿನಿ ಪಾತ್ರವನ್ನು ನಿರ್ವಹಿಸಲಿದ್ದಾರೆ. ಜುಲೈ 6 ರಂದು, ಚಿತ್ರದ ಐಶ್ವರ್ಯಾ ಅವರ ಫಸ್ಟ್ ಲುಕ್ ಪೋಸ್ಟರ್ ಅನ್ನು ಅನಾವರಣಗೊಳಿಸಲಾಗಿದೆ. ನಂದಿನಿ ಪಾತ್ರದ ಜೊತೆಗೆ ಮಂದಾಕಿನಿ ದೇವಿಯಾಗಿಯೂ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಪೊನ್ನಿಯಿನ್ ಸೆಲ್ವನ್: ಭಾಗ 1 ಎಂಬ ಶೀರ್ಷಿಕೆಯ ಮೊದಲ ಭಾಗವು ಸೆಪ್ಟೆಂಬರ್ 30 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

ಮಣಿರತ್ನಂ ಅವರ ನಿರ್ದೇಶನ ಮತ್ತು ಸ್ಟುಡಿಯೋ ಮದ್ರಾಸ್ ಟಾಕೀಸ್ ಸಹ-ನಿರ್ಮಾಣದಲ್ಲಿ, ಮೂಡಿಬರುತ್ತಿರುವ ತಮಿಳು ಭಾಷೆಯ ಮಹಾಕಾವ್ಯ ಚಲನಚಿತ್ರವಾಗಿದೆ. ಕಲ್ಕಿ ಕೃಷ್ಣಮೂರ್ತಿಯವರ 1955 ರ ಕಾದಂಬರಿ ಪೊನ್ನಿಯಿನ್ ಸೆಲ್ವನ್ ಆಧಾರಿತ ಎರಡು ಸಿನಿಮಾ ಭಾಗಗಳಲ್ಲಿ ಇದು ಮೊದಲನೆಯದು. ಇದರಲ್ಲಿ ವಿಕ್ರಮ್, ಜಯಂ ರವಿ, ಕಾರ್ತಿ, ಐಶ್ವರ್ಯ ರೈ ಬಚ್ಚನ್, ತ್ರಿಷಾ, ಜಯರಾಂ, ಸೋಭಿತಾ ಧೂಳಿಪಾಲ, ಐಶ್ವರ್ಯ ಲಕ್ಷ್ಮಿ, ವಿಕ್ರಮ್ ಪ್ರಭು ಮತ್ತು ಅಶ್ವಿನ್ ಕಾಕುಮನು ತಾರಾಗಣದಲ್ಲಿದ್ದಾರೆ.

₹500 ಕೋಟಿ ಬಜೆಟ್‌ನಲ್ಲಿ ನಿರ್ಮಿಸಲಾದ ಪೊನ್ನಿಯಿನ್ ಸೆಲ್ವನ್: 1 ಅತ್ಯಂತ ದುಬಾರಿ ಭಾರತೀಯ ಚಲನಚಿತ್ರಗಳಲ್ಲಿ ಒಂದಾಗಿದೆ. ಪೊನ್ನಿಯನ್ ಸೆಲ್ವನ್ 8 ಮತ್ತು 9 ನೇ ಶತಮಾನದಲ್ಲಿ ವಾಸಿಸುತ್ತಿದ್ದ ಚೋಳ ಚಕ್ರವರ್ತಿ ರಾಜರಾಜ ಚೋಳನ ಜೀವನವನ್ನು ಆಧರಿಸಿದೆ. ಪುಸ್ತಕವು ಕಾಲ್ಪನಿಕ ಪಾತ್ರಗಳು ಮತ್ತು ನೈಜ ಪಾತ್ರಗಳನ್ನು ಸಹ ಒಳಗೊಂಡಿದೆ ಎನ್ನಲಾಗಿದೆ.