ಉಡುಪಿ ಜಿಲ್ಲೆ: ಭಾರೀ ಮಳೆಗೆ ವಿದ್ಯಾರ್ಥಿಗಳಿಗೆ ರಜೆ, ಗ್ರಾಮೀಣ ಭಾಗದ ಅತಿಥಿ ಶಿಕ್ಷಕರಿಗೆ ಸಜೆ:ಅತಿಥಿ ಉಪನ್ಯಾಸಕರು ಗರಂ!

ಉಡುಪಿ ಜಿಲ್ಲೆ: ಕಳೆದೆರಡು ದಿನಗಳಿಂದ ಉಡುಪಿ ಜಿಲ್ಲೆಯಲ್ಲಿ ವ್ಯಾಪಕವಾದ ಮಳೆ ಸುರಿಯುತ್ತಿದೆ. ಮಳೆಯ ನಿಮಿತ್ತ ಶಾಲಾ-ಕಾಲೇಜುಗಳಿಗೆ ಜಿಲ್ಲಾಧಿಕಾರಿಗಳು ರಜೆ ಘೋಷಿಸುತ್ತಾರೆ. ಇಂದು (july 5) ಉಡುಪಿ ಜಿಲ್ಲೆಯ ಎಲ್ಲಾ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆಯಾಗಿದೆ. ಆದರೆ ಶಾಲಾ-ಕಾಲೇಜುಗಳಿಗೆ ರಜೆ ಇದ್ದರೂ ಜಿಲ್ಲೆಯ ಶಾಲಾ ಮುಖ್ಯಸ್ಥರು, ಕಾಲೇಜು ಪ್ರಾಂಶುಪಾಲರು ಪೂರ್ಣಕಾಲಿಕರಲ್ಲದ ಉಪನ್ಯಾಸಕರಿಗೆ, ಶಿಕ್ಷಕರಿಗೆ ಕಾಲೇಜಿಗೆ ಬಂದೇ ಬರಬೇಕು ಇಲ್ಲದಿಲ್ಲದರೆ ಕ್ರಮ ಕೈಗೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿ ಬೆದರಿಸುತ್ತಿರುವ ಕುರಿತು ಮಾಹಿತಿ ಲಭಿಸಿದೆ.ಈ ಕುರಿತು ಜಂಟಿ ಇಲಾಖೆಯೂ ಸುಮ್ಮನಿದೆ, ಪೂರ್ಣಕಾಲಿಕ ಉಪನ್ಯಾಸಕರಿಗೆ/ಶಿಕ್ಷಕರಿಗೆ […]
ಬುಕ್ ಮೈ ಶೋ ವಿರುದ್ದ ನಿರ್ದೇಶಕಿ ಶೀತಲ್ ಶೆಟ್ಟಿ ಅಸಮಾಧಾನ: ಕನ್ನಡ ಚಿತ್ರಗಳಿಗೆ ಅನ್ಯಾಯದ ಗಂಭೀರ ಆರೋಪ

ಬೆಂಗಳೂರು: ಚಲನಚಿತ್ರಗಳನ್ನು ವೀಕ್ಷಿಸಲು ಥಿಯೇಟರ್ ನಲ್ಲಿ ಮುಂಗಡವಾಗಿ ಟಿಕೇತು ಖರೀದಿಸಿಡುವ ಆನ್ ಲೈನ್ ವೇದಿಕೆ ಬುಕ್ ಮೈ ಶೋ ಮೇಲೆ ನಿರ್ದೇಶಕಿ ಶೀತಲ್ ಶೆಟ್ಟಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ವೇದಿಕೆಯಲ್ಲಿ ಪ್ರೇಕ್ಷಕರ ವಿಮರ್ಶೆ ಮತ್ತು ಚಿತ್ರದ ರೇಟಿಂಗ್ ಗಳನ್ನು ತೋರಿಸಲು ಷರತ್ತುಗಳನ್ನು ವಿಧಿಸಿ ಕನ್ನಡ ಚಿತ್ರರಂಗಕ್ಕೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಗಂಭೀರ ಆರೋಪ ಹೊರಿಸಿದ್ದಾರೆ. ವೀಕ್ಷಕರು ವಿಮರ್ಶೆಗಳನ್ನು ನೋಡಿ ಚಿತ್ರ ನೋಡಲು ಮುಂದಾಗುತ್ತಾರೆ. ಆದರೆ ಇಲ್ಲಿ ವಿಮರ್ಶೆಗಳನ್ನು ಕಾಣದಂತೆ ಮಾಡಿರುವುದು ವಿಂಡೋ ಸೀಟ್ ನಿರ್ದೇಶಕಿಯ ಸಿಟ್ಟಿಗೆ ಕಾರಣವಾಗಿದೆ. […]
ಬೈರಂಪಳ್ಳಿ: ಗದ್ದೆ ಕೆಲಸದಲ್ಲಿ ನಿರತನಾಗಿದ್ದ ಯುವಕ ಜಾರಿ ಬಿದ್ದು ಸಾವು

ಹಿರಿಯಡ್ಕ: ಇಲ್ಲಿನ ಬೈರಂಪಳ್ಳಿಯಲ್ಲಿ ಗದ್ದೆ ಕೆಲಸದಲ್ಲಿ ನಿರತನಾಗಿದ್ದ ಯುವ ಕೃಷಿಕನೊಬ್ಬ ಸಾವನಪ್ಪಿರುವ ಘಟನೆ ಜುಲೈ 3ರಂದು ನಡೆದಿದೆ. ಬೈರಂಪಳ್ಳಿ ದೂಪದಕಟ್ಟೆ ನಿವಾಸಿ 35 ವರ್ಷದ ಉಮೇಶ್ ಕುಲಾಲ್ ಮೃತಪಟ್ಟ ದುರ್ದೈವಿ. ಉಮೇಶ್ ತನ್ನ ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದರು. ಈ ವೇಳೆ ಈ ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದೆ.
ಉಡುಪಿ ಜಿಲ್ಲೆಯಲ್ಲಿ ಮುಂದುವರೆದ ಮಳೆ ಆರ್ಭಟ : ನಾಳೆ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ

ಉಡುಪಿ: ಜಿಲ್ಲೆಯಲ್ಲಿ ಹೆಚ್ಚಿನ ಮಳೆಯಾಗುತ್ತಿರುವುದರಿಂದ, ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಮುಂದಿನ ಎರಡು ದಿನಗಳ ಕಾಲ ಹೆಚ್ಚಿನ ಮಳೆಯಾಗುವುದರಿಂದ, ಮುಂಜಾಗ್ರತಾ ಕ್ರಮವಾಗಿ, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಜುಲೈ 6ರಂದು ಉಡುಪಿ ಜಿಲ್ಲೆಯ ಅಂಗನವಾಡಿ, ಸರಕಾರಿ ಖಾಸಗಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆ ಮತ್ತು ಪದವಿ ಪೂರ್ವ, ಪದವಿ ಕಾಲೇಜುಗಳಿಗೆ ರಜೆಯನ್ನು ಘೋಷಿಸಿ ಜಿಲ್ಲಾಧಿಕಾರಿ ಕೂರ್ಮರಾವ್ ಆದೇಶ ಹೊರಡಿಸಿದ್ದಾರೆ