ಸಿನಿಮಾದಿಂದ ಭರವಸೆ ಮತ್ತು ನಂಬಿಕೆಯ ಪಾಠಗಳು: ಚಿತ್ರ ನಟ ಅನಿರುದ್ದ್ ಅವರ ಅನುಭವದ ಮಾತುಗಳು….
ನಾನು ಎಂ. ಎಸ್. ಸತ್ಯುರವರ ‘ಇಜ್ಜೋಡು’ (2010) ಚಲನಚಿತ್ರದಲ್ಲಿ ನಾಯಕ ಆನಂದನ ಪಾತ್ರ ನಿರ್ವಹಿಸಿದ್ದೆ. ನಾಯಕಿ ಚೆನ್ನಿ, ದೇವದಾಸಿಯಾಗಿರುವುದರಿಂದ (ಸಡಿಲವಾಗಿ ಅನುವಾದ ಮಾಡಿದರೆ ದೇವರ ಆಳು ಎಂದರ್ಥ) ತಾನು ಜನರಿಗೆ ಲೈಂಗಿಕ ಸೇವೆಗಳನ್ನು ಒದಗಿಸಬೇಕೆಂದು ನಂಬಿರುತ್ತಾಳೆ. ಇದು, ಕೇವಲ ಮುೂಢನಂಬಿಕೆ ಎಂದು ಆನಂದ ಅವಳಿಗೆ ಹೇಳುತ್ತಾನೆ. ಆಕೆ ನಿಜವಾಗಿಯೂ ಗಣಿಕೆ ಕೆಲಸ ಮಾಡುತ್ತಿರುವಳೆಂದೂ ಮತ್ತು ಶೋಷಣೆಗೆ ಒಳಗಾದವಳೆಂದೂ ತಿಳಿಸುತ್ತಾನೆ. ಈ ಕೆಲಸ ಬಿಟ್ಟು ಮದುವೆಯಾಗೆಂದೂ ಅವಳಿಗೆ ಸಲಹೆ ನೀಡುತ್ತಾನೆ. ಮೊದಲು ಆಘಾತಗೊಂಡ ಚೆನ್ನಿ, ಬೇಗನೇ ತಾನು ಯಾವ ಪ್ರಮಾದದೊಳಗೆ […]
ಭತ್ತದ ಬೆಳೆ ಸ್ಪರ್ಧೆಗೆ ರೈತ ಹಾಗೂ ರೈತ ಮಹಿಳೆಯರಿಂದ ಅರ್ಜಿ ಆಹ್ವಾನ
ಉಡುಪಿ: ಕೃಷಿ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಕೃಷಿ ಪ್ರಶಸ್ತಿ ಯೋಜನೆಯಡಿ ಭತ್ತದ ಬೆಳೆ ಸ್ಪರ್ಧೆಗೆ ರೈತ ಹಾಗೂ ರೈತ ಮಹಿಳೆಯರಿಂದ ಪ್ರತ್ಯೇಕ ಅರ್ಜಿ ಆಹ್ವಾನಿಸಲಾಗಿದೆ. ರಾಜ್ಯ, ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದಲ್ಲಿ ಆಯ್ಕೆ ಮಾಡಲಾದ ಬೆಳೆಗಳಲ್ಲಿ ಬೆಳೆ ಸ್ಫರ್ಧೆ ನಡೆಸಿ ಪ್ರತಿ ಹಂತದಲ್ಲಿ 3 ಬಹುಮಾನಗಳನ್ನು ನೀಡಲಾಗುತ್ತಿದ್ದು, ಮುಂಗಾರು ಹಂಗಾಮಿಗೆ ಜಿಲ್ಲೆಯಲ್ಲಿ ಭತ್ತದ ಬೆಳೆಯಲ್ಲಿ ರೈತರು ಹಾಗೂ ರೈತ ಮಹಿಳೆಯರು ವಿವಿಧ ಹಂತದ ಬೆಳೆ ಸ್ಫರ್ಧೆಗೆ ನಿಗದಿತ ಪ್ರವೇಶ ಶುಲ್ಕವನ್ನು ಪಾವತಿಸಿ, ಪಹಣಿ, ಪರಿಶಿಷ್ಟ ಜಾತಿ […]
ಕೊಡವೂರು ದಿವ್ಯಾಂಗ ರಕ್ಷಣಾ ಸಮಿತಿ ವತಿಯಿಂದ ದಿವ್ಯಾಂಗರಿಗೆ ಉಡುಗೊರೆ ಹಸ್ತಾಂತರ
ಕೊಡವೂರು: ಕೊಡವೂರು ದಿವ್ಯಾಂಗ ರಕ್ಷಣಾ ಸಮಿತಿಯ ವತಿಯಿಂದ ನಡೆಯಲು ಹಾಗೂ ದುಡಿಯಲು ಅಶಕ್ತರಾಗಿರುವ ದಿವ್ಯಾಂಗರಿಗೆ ವೀಲ್ ಚೇರ್, ವಾಟರ್ ಬೆಡ್, ವಾಕರ್, ಹೊಲಿಗೆ ಯಂತ್ರ ಮತ್ತು ಅಕ್ಕಿಯನ್ನು ಮನೆ ಮನೆಯಿಂದ ಗುಜರಿ ಸಂಗ್ರಹಿಸಿ ನೀಡುತ್ತಿದ್ದೇವೆ ಎಂದು ದಿವ್ಯಾಂಗ ರಕ್ಷಣಾ ಸಮಿತಿಯ ಸಂಚಾಲಕ ಮತ್ತು ಉಡುಪಿ ನಗರಸಭೆ ಸದಸ್ಯ ಕೆ ವಿಜಯ್ ಕೊಡವೂರು ತಿಳಿಸಿದರು. ನಾವು ಸಂಬಂಧಿಕರ ಗೃಹ ಪ್ರವೇಶಕ್ಕೆ ಅಥವಾ ಮನೆಯ ಹತ್ತಿರದ ನಮ್ಮ ಸ್ನೇಹಿತರ ಶುಭ ಕಾರ್ಯಕ್ಕೆ ಉಡುಗೊರೆಯನ್ನು ನೀಡಿ ಅವರ ಮುಂದಿನ ಜೀವನ ಸುಖಕರವಾಗಿರಲಿ […]
ಪರ್ಕಳ: ರಸ್ತೆಬದಿಯ ಮನೆಗೆ ಉರುಳಿಬಿದ್ದ ಕಂಟೈನರ್; ಚಾಲಕ ಅಪಾಯದಿಂದ ಪಾರು
ಪರ್ಕಳ: ಕೆಳಪರ್ಕಳದ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾಂಕ್ರಿಟ್ ರಸ್ತೆಯಿಂದ ಡಾಮಾರು ರಸ್ತೆಗೆ ಸಂಪರ್ಕ ಸಾಧಿಸುವ ತಿರುವಿನಲ್ಲಿ ಭಾರಿ ಗಾತ್ರದ ಕಂಟೈನರ್ ಒಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಮನೆಗೆ ಉರುಳಿಬಿದ್ದ ಘಟನೆ ಭಾನುವಾರ ರಾತ್ರಿ ನಡೆದಿದೆ. ನಿನ್ನೆ ರಾತ್ರಿ ಪರ್ಕಳದಿಂದ ಗೋವಾ ಕಡೆಗೆ ರದ್ದಿ ಪೇಪರ್ ತೆಗೆದುಕೊಂಡು ಹೋಗುತ್ತಿದ್ದ ಕಂಟೈನರ್ ಪರ್ಕಳದ ಶೆಣೈ ಕಂಪೌಂಡ್ ಮೇಲೆ ಮಗುಚಿ ಬಿದ್ದಿದೆ. ಚಾಲಕ ಸಣ್ಣಪುಟ್ಟ ಗಾಯದೊಂದಿಗೆ ಬಚಾವ್ ಆಗಿದ್ದಾನೆ. ಸದ್ಯ ಈ ಮನೆಯಲ್ಲಿ ಯಾರು ವಾಸು ಮಾಡುತ್ತಿಲ್ಲ. ಹೀಗಾಗಿ ಹೆಚ್ಚಿನ […]
ಸ್ವಾತಂತ್ರ್ಯ ಯೋಧ ಅಲ್ಲೂರಿ ಸೀತಾರಾಮ ರಾಜು ಅವರ 125 ನೇ ಜನ್ಮ ದಿನ: ಹುಟ್ಟೂರಿನಲ್ಲಿ 30 ಅಡಿ ಕಂಚಿನ ಪ್ರತಿಮೆ ಅನಾವರಣ
ಭೀಮಾವರಂ: ಪ್ರಧಾನಿ ನರೇಂದ್ರ ಮೋದಿ ಸೋಮವಾರ ಆಂಧ್ರಪ್ರದೇಶದ ಭೀಮಾವರಂನಲ್ಲಿ ಅಲ್ಲೂರಿ ಸೀತಾರಾಮ ರಾಜು ಅವರ 30 ಅಡಿ ಕಂಚಿನ ಪ್ರತಿಮೆಯನ್ನು ಅನಾವರಣಗೊಳಿಸುವ ಮೂಲಕ ದೇಶ ಕಂಡ ಮಹಾನ್ ಸ್ವಾತಂತ್ರ್ಯ ಹೋರಾಟಗಾರನಿಗೆ ಗೌರವ ಸಲ್ಲಿಸಲಿದ್ದಾರೆ. ಪ್ರಧಾನಿಯ ಭೀಮಾವರಂ ಭೇಟಿಯು ಆಜಾದಿ ಕಾ ಅಮೃತ್ ಮಹೋತ್ಸವದ ಭಾಗವಾಗಿದೆ. ಈ ಸಂದರ್ಭದಲ್ಲಿ ಅಲ್ಲೂರಿ ಸೀತಾರಾಮ ರಾಜು ಅವರ 125 ನೇ ಜನ್ಮ ದಿನಾಚರಣೆ ಮತ್ತು ಅವರು ನೇತೃತ್ವದ ರಾಂಪ ಬಂಡಾಯದ ಶತಮಾನೋತ್ಸವವನ್ನು ಆಚರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ವಿಜಯನಗರ ಜಿಲ್ಲೆಯ ಪಂಡ್ರಂಗಿಯಲ್ಲಿರುವ ಅಲ್ಲೂರಿ […]