2002 ಗೋಧ್ರಾ ರೈಲು ಹತ್ಯಾಕಾಂಡ: ಪ್ರಮುಖ ಆರೋಪಿ ರಫೀಕ್ ಹುಸೇನ್ ಬಟುಕ್ಗೆ ಜೀವಾವಧಿ ಶಿಕ್ಷೆ
ಗೋಧ್ರಾ: 2002 ರ ಭೀಬತ್ಸ ಗೋದ್ರಾ ರೈಲು ಹತ್ಯಾಕಾಂಡದ ಘಟನೆಯ ಸುಮಾರು ಎರಡು ದಶಕಗಳ ಬಳಿಕ, ಗುಜರಾತ್ನ ಗೋಧ್ರಾ ನ್ಯಾಯಾಲಯವು ಪ್ರಮುಖ ಆರೋಪಿ ರಫೀಕ್ ಹುಸೇನ್ ಬಟುಕ್ಗೆ ಕೊಲೆ ಆರೋಪದ ಅಡಿಯಲ್ಲಿ ಜೀವಾವಧಿ ಶಿಕ್ಷೆ ವಿಧಿಸಿದೆ ಎಂದು ವಿಶೇಷ ಸರ್ಕಾರಿ ಅಭಿಯೋಜಕ ಆರ್ಸಿ ಕೊಡೇಕರ್ ಹೇಳಿದ್ದಾರೆ. ಕಳೆದ ವರ್ಷ ರಫೀಕ್ ಹುಸೇನ್ ಬಂಧನದ ನಂತರ ಪ್ರಕರಣದಲ್ಲಿ ಆತನ ವಿರುದ್ಧದ ವಿಚಾರಣೆ ಪ್ರಾರಂಭವಾಗಿತ್ತು. ರೈಲಿನಲ್ಲಿದ್ದ ಒಟ್ಟು 59 ಕರಸೇವಕರನ್ನು ಸಜೀವ ಸುಟ್ಟು ಗೋಧ್ರೋತ್ತರ ಗಲಭೆಗೆ ಕಾರನಾದ ಆರೋಪಿ ರಫೀಕ್ […]
ಮರವಂತೆ: ಚಲಿಸುತ್ತಿದ್ದ ಕಾರು ಸಮುದ್ರ ಪಾಲು; ಓರ್ವ ಮೃತ್ಯು, ಇನ್ನೋರ್ವ ನಾಪತ್ತೆ
ಮರವಂತೆ: ಚಲಿಸುತ್ತಿದ್ದ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಸಮುದ್ರಕ್ಕೆ ಬಿದ್ದ ಪರಿಣಾಮ ಕಾರಿನಲ್ಲಿದ್ದ ನಾಲ್ವರ ಪೈಕಿ ಓರ್ವ ಮೃತಪಟ್ಟು, ಇನ್ನೋರ್ವ ನಾಪತ್ತೆಯಾಗಿರುವ ಘಟನೆ ಮರವಂತೆ ಬೀಚ್ ನ ರಾಷ್ಟ್ರೀಯ ಹೆದ್ದಾರಿ 66 ರ ಬಳಿ ನಿನ್ನೆ ಮಧ್ಯರಾತ್ರಿ ಸಂಭವಿಸಿದೆ. ಮೃತರನ್ನು ಬೀಜಾಡಿಯ ಗೋಳಿಬೆಟ್ಟು ನಿವಾಸಿ, ವಿಲಾಸ್ ಮಾರ್ಬಲ್ ನ ಮಾಲೀಕ ರಮೇಶ್ ಆಚಾರ್ ನೇರಂಬಳ್ಳಿಯವರ ಪುತ್ರ ವಿರಾಜ್ ಆಚಾರ್ಯ(28) ಎಂದು ಗುರುತಿಸಲಾಗಿದೆ. ಸಹೋದರ ಸಂಬಂಧಿಗಳಾದ ರೋಶನ್ ನಾಪತ್ತೆಯಾಗಿದ್ದು, ಸಂದೇಶ್, ಕಾರ್ತಿಕ್ ಅವರನ್ನು ರಕ್ಷಿಸಲಾಗಿದೆ. ರೋಶನ್ ಸಮುದ್ರದಲ್ಲಿ ಕೊಚ್ಚಿ […]
ಮನೆ ಬಾಗಿಲಲ್ಲೆ ಪಡೆಯಬಹುದು ಬಾಬಾ ಬರ್ಫಾನಿ ಪ್ರಸಾದ: ಆನ್ ಲೈನ್ ಪೂಜೆ ಸೇವೆ ಪ್ರಾರಂಭಿಸಿದ ಅಮರನಾಥ ಆಡಳಿತ ಮಂಡಳಿ
ಜಮ್ಮು: ಶ್ರೀ ಅಮರನಾಥ ದೇವಾಲಯ ಮಂಡಳಿಯು ಈ ವರ್ಷ ಹಿಮಾಲಯದ ಗುಹಾ ದೇಗುಲಕ್ಕೆ ಬರಲು ಸಾಧ್ಯವಾಗದ ಭಕ್ತರಿಗೆ ಆನ್ಲೈನ್ ಪೂಜೆ, ಹವನ ಮತ್ತು ಪ್ರಸಾದ ಸೇವೆಗಳನ್ನು ಘೋಷಿಸಿದೆ. ಆನ್ಲೈನ್ ಸೇವೆಗಳನ್ನು ತನ್ನ www.shriamarnathjishrine.com ವೆಬ್ಸೈಟ್ ಅಥವಾ ಗೂಗಲ್ ಪ್ಲೇ ಸ್ಟೋರ್ನಿಂದ ಡೌನ್ಲೋಡ್ ಮಾಡಬಹುದಾದ ಅದರ ಮೊಬೈಲ್ ಅಪ್ಲಿಕೇಶನ್ ಮೂಲಕ ಬುಕ್ ಮಾಡಬಹುದು ಆಡಳಿತ ಮಂಡಳಿ ತಿಳಿಸಿದೆ. ಪೂಜೆಗೆ 1,100 ರೂ ನಿಗದಿಪಡಿಸಲಾಗಿದೆ. ಭಕ್ತಾದಿಗಳ ಹೆಸರಿನಲ್ಲಿ ಪುರೋಹಿತರು ಪೂಜೆ ಮತ್ತು ಹವನಗಳನ್ನು ನಡೆಸುತ್ತಾರೆ ಮತ್ತು ಭಕ್ತರು ಆನ್ಲೈನ್ ಮೂಲಕ […]
ಆದರ್ಶ ಆಸ್ಪತ್ರೆ ಮತ್ತು ಚಾರಿಟೇಬಲ್ ಟ್ರಸ್ಟ್ ವತಿಯಿಂದ ವೈದ್ಯರ ದಿನಾಚರಣೆಯ ಪ್ರಯುಕ್ತ ವೈದರಿಗೆ ಸನ್ಮಾನ ಮತ್ತು ಉಚಿತ ವೈದ್ಯಕೀಯ ತಪಾಸಣಾ ಶಿಬಿರ
ಉಡುಪಿ: ಕೋಲ್ಕೊತ್ತಾದ ಡಾ ಬಿ.ಸಿ ರಾಯ್ ಅವರ ಜನ್ಮ ದಿನದ ಅಂಗವಾಗಿ ಆಚರಿಸುವ ವೈದ್ಯರ ದಿನಾಚರಣೆಯ ಪ್ರಯುಕ್ತ ಉಡುಪಿಯ ಆದರ್ಶ ಆಸ್ಪತ್ರೆ ಮತ್ತು ಚಾರಿಟೇಬಲ್ ಟ್ರಸ್ಟ್ ವತಿಯಿಂದ ವೈದರಿಗೆ ಸನ್ಮಾನ ಕಾರ್ಯಕ್ರಮ ಮತ್ತು ಬೃಹತ್ ಉಚಿತ ವೈದ್ಯಕೀಯ ತಪಾಸಣಾ ಶಿಬಿರವು ಆದಿತ್ಯವಾರ ಜೂನ್ 3 ರಂದು ಬೆಳಿಗ್ಗೆ 10.00 ಗಂಟೆಗೆ ಆಸ್ಪತ್ರೆಯ ಹೊರರೋಗಿ ವಿಭಾಗದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಜಿಲ್ಲಾಧಿಕಾರಿ ಕೂರ್ಮಾ ರಾವ್ ಎಂ, ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿಗಳು ನಮ್ಮ ಜೀವನದಲ್ಲಿ ಬಹಳ ಪ್ರಾಮುಖ್ಯತೆಯನ್ನು […]