ಕಕ್ಕುಂಜೆಯಲ್ಲಿ ಮನೆಗೆ ನುಗ್ಗಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳ್ಳತನ ಪ್ರಕರಣ: ಇಬ್ಬರು ಆರೋಪಿಗಳ ಸೆರೆ

ಉಡುಪಿ: ಅಂಬಾಗಿಲು ಕಕ್ಕುಂಜೆ ನಿವಾಸಿ ಪ್ರಮೀಳಾ  ಬಂಗೇರಾ ಎಂಬವರ ಮನೆಗೆ ನುಗ್ಗಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಿದ ಘಟನೆಗೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಉಡುಪಿ ನಗರ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ 2,18,169 ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ಕಕ್ಕುಂಜೆ ಗರಡಿಯ ಬಳಿ ನಿವಾಸಿ 36 ವರ್ಷದ ಸಂತೋಷ್ ಪೂಜಾರಿ ಹಾಗೂ ಕಟಪಾಡಿ ಮಟ್ಟು ನಿವಾಸಿ 37 ವರ್ಷದ ರಾಕೇಶ್ ಪಾಲನ್ ಬಂಧಿತ ಆರೋಪಿಗಳು. ಇವರು ಕಕ್ಕುಂಜೆ ಎಂಬಲ್ಲಿ ಪ್ರಮೀಳಾ ಅವರ ಮನೆಗೆ ನುಗ್ಗಿ, […]

ಮಹಿಳೆಯರ 3000 ಮೀಟರ್ ಓಟ: ರಾಷ್ಟ್ರೀಯ ದಾಖಲೆ ಮುರಿದು ಹೊಸ ದಾಖಲೆ ನಿರ್ಮಿಸಿದ ಪಾರುಲ್ ಚೌಧರಿ

  ನವದೆಹಲಿ:  ಲಾಸ್ ಏಂಜಲೀಸ್‌ನ ಯುಎ ಸನ್‌ಸೆಟ್ ಟೂರ್‌ನಲ್ಲಿ 8:57.19 ಸೆಕೆಂಡ್ ಗಳಲ್ಲಿ ಓಟ ಮುಗಿಸಿ 6 ವರ್ಷಗಳ ಹಿಂದಿನ ರಾಷ್ಟ್ರೀಯ ದಾಖಲೆಯನ್ನು ಮುರಿದು ಹೊಸ ರಾಷ್ಟ್ರೀಯ ದಾಖಲೆಯನ್ನು ಸ್ಥಾಪಿಸಿದ್ದಕ್ಕಾಗಿ ಪಾರುಲ್ ಚೌಧರಿ ಅವರನ್ನು ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವ ಅನುರಾಗ್ ಠಾಕೂರ್ ಅಭಿನಂದಿಸಿದ್ದಾರೆ. ಪಾರುಲ್ ಚೌಧರಿ ಅವರು ಮಹಿಳೆಯರ 3000 ಮೀಟರ್‌ ಓಟದಲ್ಲಿ 9 ನಿಮಿಷಕ್ಕಿಂತ ಕಡಿಮೆ ಸಮಯವನ್ನು ದಾಖಲಿಸಿದ ಮೊದಲ ಭಾರತೀಯ ಅಥ್ಲೀಟ್‌ ಎಂದು ಟ್ವೀಟ್‌ನಲ್ಲಿ ಠಾಕೂರ್ ಹೇಳಿದ್ದಾರೆ. ದೆಹಲಿಯಲ್ಲಿ ಆರು ವರ್ಷಗಳ […]

ಗ್ರಾಮ ಪಂಚಾಯತ್ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ: ಚುನಾವಣಾಧಿಕಾರಿಗಳ ನೇಮಕ

ಉಡುಪಿ: ಬ್ರಹ್ಮಾವರ ತಾಲೂಕು ಹೆಗ್ಗುಂಜೆ ಗ್ರಾಮ ಪಂಚಾಯತ್‌ನ ಅಧ್ಯಕ್ಷ ಸ್ಥಾನಕ್ಕೆ ಹಾಗೂ ವಾರಂಬಳ್ಳಿ ಗ್ರಾಮ ಪಂಚಾಯತ್‌ನ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಆಯ್ಕೆ ನಡೆಸುವ ಸಲುವಾಗಿ ಬ್ರಹ್ಮಾವರ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ಶಿಕ್ಷಣ ಸಂಯೋಜಕ ರಾಘವ ಶೆಟ್ಟಿ, ಉಪ್ಪೂರು ಗ್ರಾಮ ಪಂಚಾಯತ್‌ನ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ನಡೆಸುವ ಸಲುವಾಗಿ ಕೊಕ್ಕರ್ಣೆ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ದೇವೇಂದ್ರ ಕೆ ಮೋಗೆರ, ನಾಲ್ಕೂರು ಗ್ರಾಮ ಪಂಚಾಯತ್‌ನ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಆಯ್ಕೆ ನಡೆಸುವ ಸಲುವಾಗಿ ಸೈಬ್ರಕಟ್ಟೆ ಪಶು […]

ಡಿ.ಇಎಲ್.ಇ.ಡಿ, ಡಿ.ಪಿ.ಎಸ್.ಇ ಪರೀಕ್ಷೆ ಹಿನ್ನೆಲೆಯಲ್ಲಿ ನಿಷೇಧಾಜ್ಷೆ ಜಾರಿ

ಉಡುಪಿ: ಜುಲೈ 4 ರಿಂದ 14 ರ ವರೆಗೆ ಪ್ರಥಮ ಮತ್ತು ದ್ವಿತೀಯ ಡಿ.ಇಎಲ್.ಇ.ಡಿ ಹಾಗೂ ಡಿ.ಪಿ.ಎಸ್.ಇ ಪರೀಕ್ಷೆಗಳು ಉಡುಪಿಯ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (ಡಯಟ್) ಯಲ್ಲಿ ನಡೆಯಲಿದ್ದು, ಪರೀಕ್ಷೆಗಳು ಮುಕ್ತಾಯವಾಗುವವರೆಗೂ ಸಂಬಂಧಿಸಿದ ಪರೀಕ್ಷಾ ಕೇಂದ್ರದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ, ಶಿಸ್ತು ಮತ್ತು ಶಾಂತಿಯನ್ನು ಕಾಪಾಡುವ ಸಲುವಾಗಿ, ಪರೀಕ್ಷೆಗಳು ಸುಸೂತ್ರವಾಗಿ ಮತ್ತು ದೋಷರಹಿತವಾಗಿ ನಡೆಸಲು ಮತ್ತು ನಡೆಯಬಹುದಾದ ಎಲ್ಲಾ ರೀತಿಯ ಅವ್ಯವಹಾರಗಳನ್ನು ತಡೆಗಟ್ಟುವ ಸಲುವಾಗಿ ನಿಗದಿಪಡಿಸಿದ ಪರೀಕ್ಷಾ ಕೇಂದ್ರದ 200 ಮೀಟರ್ ಪ್ರದೇಶದ […]

ಭಾರತೀಯ ವೈದ್ಯಕೀಯ ಸಂಘದ ವತಿಯಿಂದ ವೈದ್ಯರ ದಿನಾಚರಣೆ

ಉಡುಪಿ: ಭಾರತೀಯ ವೈದ್ಯಕೀಯ ಸಂಘ ಉಡುಪಿ-ಕರಾವಳಿ ಇದರ ವತಿಯಿಂದ ವೈದ್ಯರ ದಿನಾಚರಣೆಯನ್ನು ಶುಕ್ರವಾರ ಉಡುಪಿ ಐಎಂಎ ಭವನದಲ್ಲಿ ಜರಗಿತು. ಮುಖ್ಯ ಅತಿಥಿ ಯಾಗಿ ಮಣಿಪಾಲ ಅಕಾಡಮಿ ಆಫ್ ಹೈಯರ್ ಎಜುಕೇಷನ್ ಇದರ ಉಪಕುಲಪತಿ ಲೇ .ಜ . ಡಾ ಎಂ. ಡಿ. ವೆಂಕಟೇಶ್ ಭಾಗವಹಿಸಿದ್ದರು. ವೈದ್ಯಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಡಾ ಹರಿಶ್ಚಂದ್ರ ಆಚಾರ್ಯ, ಡಾ ಆರ್ . ಎನ್ . ಭಟ್, ಡಾ. ಶ್ರೀಮತಿ ರಮಾ ವಿ. ಶೆಟ್ಟಿ ಇವರನ್ನು ಗೌರವಿಸಲಾಯತು. ಈ ಸಂದರ್ಭದಲ್ಲಿ ಹಲವಾರು […]