ಉದಯಪುರ ಅಮಾಯಕನ ಶಿರಚ್ಛೇದಗೈದ ಇಬ್ಬರು ಭಯೋತ್ಪಾದಕರಿಗೆ ಅದೇ ಮಾದರಿಯ ಶಿಕ್ಷೆಯಾಗಲಿ: ಕುಯಿಲಾಡಿ ಸುರೇಶ್ ನಾಯಕ್
ಉಡುಪಿ: ರಾಜಸ್ಥಾನದ ಉದಯಪುರದಲ್ಲಿ ಕನ್ಹಯ್ಯಲಾಲ್ ಎಂಬ ಅಮಾಯಕ ವ್ಯಕ್ತಿಯ ಶಿರಚ್ಛೇದಗೈದು ಹತ್ಯೆ ಮಾಡಿರುವ ಭಯೋತ್ಪಾದಕ ಜಂತುಗಳನ್ನು ಕೇವಲ ವ್ಯಕ್ತಿಗಳು ಮಾಡಿದ ಕೃತ್ಯ ಎಂದು ಸಂಭೋಧಿಸಿ, ಇಂತಹ ಘಟನೆಗಳು ಬಿಜೆಪಿ ಪ್ರೇರಿತ ಭಯೋತ್ಪಾದನೆ ಎಂದಿರುವ ವಿಧಾನ ಪರಿಷತ್ ವಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್ ಪ್ರಚೋದನಕಾರಿ ಹೇಳಿಕೆ ಅತ್ಯಂತ ಖಂಡನೀಯ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಹೇಳಿದ್ದಾರೆ. ಕಳೆದ ಎಂಟು ವರ್ಷಗಳಿಂದ ಇಂತಹ ಘಟನೆಗಳು ನಡೆಯುತ್ತಿವೆ ಎಂದಿರುವ ಬಿ.ಕೆ. ಹರಿಪ್ರಸಾದ್ ರವರಿಗೆ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ […]
ಶಿಥಿಲಾವಸ್ಥೆಯಲ್ಲಿರುವ ಕಟ್ಟಡಗಳನ್ನು 30 ದಿನಗಳೊಳಗೆ ತೆರವುಗೊಳಿಸಲು ನಗರಸಭೆ ಆದೇಶ
ಉಡುಪಿ: ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ವಾಸಕ್ಕೆ ಯೋಗ್ಯವಲ್ಲದ ಹಾಗೂ ಶಿಥಿಲಗೊಂಡಿರುವ ವಾಸ್ತವ್ಯ ಹಾಗೂ ವಾಣಿಜ್ಯ ಕಟ್ಟಡಗಳನ್ನು ಉಪಯೋಗಿಸುವುದನ್ನು ನಿಷೇಧಿಸಿ ನಗರಸಭೆ ಪೌರಾಯುಕ್ತರು ಆದೇಶ ಹೊರಡಿಸಿದ್ದು, ಶಿಥಿಲಾವಸ್ಥೆಯಲ್ಲಿರುವ ಕಟ್ಟಡಗಳನ್ನು ಮಾಲಕರು ತಮ್ಮ ಸ್ವಂತ ವೆಚ್ಚದಲ್ಲಿ 30 ದಿನಗಳ ಒಳಗೆ ತೆರವುಗೊಳಿಸಬೇಕು. ತಪ್ಪಿದ್ದಲ್ಲಿ ಯಾವುದೇ ಅನಾಹುತ ಮತ್ತು ಜೀವಹಾನಿಗಳು ಸಂಭವಿಸಿದ್ದಲ್ಲಿ ಮಾಲಕರೇ ಜವಾಬ್ದಾರರಾಗಿರುತ್ತಾರೆ ಹಾಗೂ ನಗರಸಭೆಯಿಂದ ನೀಡಲಾಗಿರುವ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಹಿಂಪಡೆಯಲಾಗುವುದು ಎಂದು ನಗರಸಭೆ ಪೌರಾಯುಕ್ತರ ಕಚೇರಿ ಪ್ರಕಟಣೆ ತಿಳಿಸಿದೆ.
ಪದವೀಧರರಿಗೆ ಕ್ಯಾಂಪ್ಕೋ ನಲ್ಲಿ ಉದ್ಯೋಗ: ಅರ್ಜಿ ಸಲ್ಲಿಸಲು ಇಂದು ಕಡೆ ದಿನ
ಮಂಗಳೂರು: ಸೆಂಟ್ರಲ್ ಅರೆಕಾನಟ್ ಮತ್ತು ಕೋಕೋ ಮಾರ್ಕೆಟಿಂಗ್ ಮತ್ತು ಪ್ರೊಸೆಸಿಂಗ್ ಕೋ-ಆಪರೇಟಿವ್ ಲಿಮಿಟೆಡ್ (ಕ್ಯಾಂಪ್ಕೋ) ನಲ್ಲಿ ವಿವಿಧ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿದೆ. ಅಸಿಸ್ಟೆಂಟ್ ಕ್ವಾಲಿಟಿ ಅಶ್ಯೂರೆನ್ಸ್ ಸೂಪರ್ವೈಸರ್, ಅಸಿಸ್ಟೆಂಟ್ ಪ್ರೊಡಕ್ಷನ್ ಸೂಪರ್ವೈಸರ್ ಹುದ್ದೆಗಳ ನೇಮಕಾತಿ ನಡೆಯಲಿದೆ. ಮಂಗಳೂರಿನಲ್ಲಿ ಕೆಲಸ ಮಾಡಲು ಆಸಕ್ತಿ ಹೊಂದಿರುವ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಇಂದು ಅರ್ಜಿ ಸಲ್ಲಿಸಲು ಕಡೆಯ ದಿನವಾಗಿದ್ದು ಆಸಕ್ತರು ಕೂಡಲೇ ಅರ್ಜಿ ಸಲ್ಲಿಸತಕ್ಕದ್ದು. ಸಂಸ್ಥೆಯ ಹೆಸರು: ಸೆಂಟ್ರಲ್ ಅರೆಕಾನಟ್ ಮತ್ತು ಕೋಕೋ ಮಾರ್ಕೆಟಿಂಗ್ ಮತ್ತು ಪ್ರೊಸೆಸಿಂಗ್ ಕೋ-ಆಪರೇಟಿವ್ […]
ಮಹಾರಾಷ್ಟ್ರದಲ್ಲಿ ಏಕ್ ಬಾರ್ ಫಿರ್ ದೇವೇಂದ್ರ ಸರಕಾರ್? ಮುದುಡಿದ ತಾವರೆ ಅರಳಿಸುವರೆ ಶಿಂಧೆ?
ಮುಂಬಯಿ: ಮಹಾರಾಷ್ಟ್ರದ ಮಹಾ ವಿಕಾಸ್ ಅಘಾಡಿ ಸರಕಾರ ಪತನವಾಗಿ ಶಿವಸೇನಾ ನಾಯಕ ಉದ್ದವ್ ಠಾಕ್ರೆ ರಾಜಿನಾಮೆ ನೀಡಿದ ಹಿನ್ನೆಲೆಯಲ್ಲಿ ಇದೀಗ ದೇವೇಂದ್ರ ಫಡ್ನವಿಸ್ ಅವರ ನಾಯಕತ್ವದ ಬಿಜೆಪಿ ಏಕೈಕ ದೊಡ್ಡ ಪಕ್ಷ ವಾಗಿದ್ದು, ಸರ್ಕಾರ ರಚಿಸಲು ಹಕ್ಕು ಸಾಧಿಸಬಹುದು. ಬಿಜೆಪಿ ಬಳಿ 106 ಶಾಸಕರಿದ್ದು, ಮ್ಯಾಜಿಕ್ ಫಿಗರ್ 144 ರಿಂದ ತುಸುವೆ ದೂರವಿದೆ. ಸರಕಾರ ರಚಿಸಲು ಬಹುಮತ ಸಾಬೀತು ಪಡಿಸುವ ಅಗತ್ಯವಿದ್ದು, 156 ಶಾಸಕರ ಬೆಂಬಲವಿದೆ ಎನ್ನಲಾಗಿದೆ. ಉದ್ಧವ್ ಠಾಕ್ರೆ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ […]
ಆಜಾದಿ ಕಾ ಅಮೃತ್ ಮಹೋತ್ಸವ್: ಭಾರತೀಯ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಲಿರುವ ಯುಕೆ
ಭಾರತದ 75 ನೇ ಸ್ವಾತಂತ್ರ್ಯ ವಾರ್ಷಿಕೋತ್ಸವದ ಆಚರಣೆ ಹಿನ್ನೆಲೆಯಲ್ಲಿ ಸೆಪ್ಟೆಂಬರ್ನಿಂದ ಬ್ರಿಟನ್ನಲ್ಲಿ ಅಧ್ಯಯನ ಮಾಡಲು ಭಾರತೀಯ ವಿದ್ಯಾರ್ಥಿಗಳಿಗೆ 75 ಸಂಪೂರ್ಣ ಅನುದಾನಿತ ವಿದ್ಯಾರ್ಥಿವೇತನವನ್ನು ನೀಡಲು ಯುಕೆ ಸರ್ಕಾರವು ನಿರ್ಧರಿಸಿದ್ದು, ಭಾರತದಲ್ಲಿನ ಪ್ರಮುಖ ಕಂಪನಿಗಳೊಂದಿಗೆ ಪಾಲುದಾರಿಕೆ ನಡೆಸಿದೆ. ಇಲ್ಲಿಯವರೆಗೆ ಒಂದು ವರ್ಷದ ಸ್ನಾತಕೋತ್ತರ ಕಾರ್ಯಕ್ರಮಕ್ಕಾಗಿ ನೀಡಲಾದ ಅತಿ ಹೆಚ್ಚು ಸಂಖ್ಯೆಯ ಸಂಪೂರ್ಣ ಅನುದಾನಿತ ವಿದ್ಯಾರ್ಥಿವೇತನ ಇದಾಗಿದೆ ಎಂದು ಬ್ರಿಟಿಷ್ ಹೈ ಕಮಿಷನ್ ಹೇಳಿದೆ. ಎಚ್ಎಸ್ಬಿಸಿ, ಪಿಯರ್ಸನ್ ಇಂಡಿಯಾ, ಹಿಂದೂಸ್ತಾನ್ ಯೂನಿಲಿವರ್, ಟಾಟಾ ಸನ್ಸ್ ಮತ್ತು ಡ್ಯುಯೊಲಿಂಗೋ ಮುಂತಾದ ಕಂಪನಿಗಳು […]