ಸಾಗರ ಉಪವಿಭಾಗ ಆಸ್ಪತ್ರೆಯಲ್ಲಿ ಆ್ಯಂಟಿಬಯೋಟಿಕ್ ಚುಚ್ಚುಮದ್ದು ಪ್ರಮಾದ: ದಾಖಲಾದ 14 ಮಕ್ಕಳಲ್ಲಿ 4 ಮಕ್ಕಳ ಆರೋಗ್ಯ ಗಂಭೀರ
ಶಿವಮೊಗ್ಗ: ಸಾಗರದ ತಾಲೂಕು ಉಪವಿಭಾಗದ ಆಸ್ಪತ್ರೆಯಲ್ಲಿ ಜ್ವರ, ಕೆಮ್ಮು, ವಾಂತಿ ಸೇರಿದಂತೆ ನಾನಾ ಕಾಯಿಲೆಗಳಿಗೆ ಚಿಕಿತ್ಸೆ ಪಡೆಯುತ್ತಿರುವ ಹತ್ತು ತಿಂಗಳಿಂದ 12 ವರ್ಷದೊಳಗಿನ 14 ಮಕ್ಕಳ ಪೈಕಿ ನಾಲ್ವರು ಮಕ್ಕಳ ಸ್ಥಿತಿ ಹದಗೆಟ್ಟ ಹಿನ್ನೆಲೆಯಲ್ಲಿ ಶಿವಮೊಗ್ಗದ ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಗಿದೆ. ಈ ಎಲ್ಲಾ ಮಕ್ಕಳಿಗೆ ಆ್ಯಂಟಿಬಯೋಟಿಕ್ ಚುಚ್ಚುಮದ್ದನ್ನು ಆಸ್ಪತ್ರೆಯ ದಾದಿಯರು ನೀಡಿದ್ದು, ಆ ಬಳಿಕ ಮಕ್ಕಳ ಆರೋಗ್ಯ ಹದಗೆಟ್ಟಿದೆ. ಮೂವರನ್ನು ಶಿವಮೊಗ್ಗದ ಜಿಲ್ಲಾ ಮೆಕ್ಗಾನ್ ಜನರಲ್ ಆಸ್ಪತ್ರೆಯಲ್ಲಿ ಹಾಗೂ ಒಂದು ಮಗುವನ್ನು ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. […]
ಟಿ20 ಪವರ್ಪ್ಲೇ ಐರ್ಲೆಂಡ್ ವರ್ಸಸ್ ಭಾರತ: ಅತ್ಯಾಧಿಕ ವಿಕೆಟ್ ಕಬಳಿಸಿ ಭುವನೇಶ್ವರ್ ಕುಮಾರ್ ವಿಶ್ವ ದಾಖಲೆ
ಡಬ್ಲಿನ್ನಲ್ಲಿ ನಡೆದ ಭಾರತ ಮತ್ತು ಐರ್ಲೆಂಡ್ ನಡುವಿನ ಮೊದಲ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ 7 ವಿಕೆಟ್ಗಳ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಭಾರತದ ವೇಗದ ಬೌಲರ್ ಭುವನೇಶ್ವರ್ ಕುಮಾರ್ ಇತಿಹಾಸ ನಿರ್ಮಿಸಿ ದೊಡ್ಡ ವಿಶ್ವ ದಾಖಲೆ ಬರೆದಿದ್ದಾರೆ. ಭುವಿ, ತಮ್ಮ 3 ಓವರ್ಗಳ ಕೋಟಾದಲ್ಲಿ 16 ರನ್ಗಳನ್ನು ನೀಡಿ ವಿಕೆಟ್ ಪಡೆದರು, ಈ ಸಮಯದಲ್ಲಿ ಅವರು ಒಂದು ಮೇಡನ್ ಓವರ್ ನೀಡಿದ್ದಾರೆ. ಭುವನೇಶ್ವರ್ ಪವರ್ಪ್ಲೇನಲ್ಲಿ ಐರ್ಲೆಂಡ್ ವಿರುದ್ಧ ಏಕೈಕ ವಿಕೆಟ್ ಪಡೆದಿದ್ದಾರೆ. ಈಗ ಟಿ20 ಕ್ರಿಕೆಟ್ನ […]
7 ನೇ ವೇತನ ಆಯೋಗದ ಸೌಲಭ್ಯಗಳನ್ನು ನೌಕರರಿಗೆ ದೊರಕಿಸಿ ಕೊಡಲು ರಾಜ್ಯ ಸರಕಾರಿ ನೌಕರರ ಸಂಘ ಬದ್ದ : ಸಿ.ಎಸ್.ಷಡಾಕ್ಷರಿ
ಉಡುಪಿ: ಪ್ರಸಕ್ತ ವರ್ಷದ ಡಿಸೆಂಬರ್ ನೊಳಗೆ ರಾಜ್ಯದ ಸರಕಾರಿ ನೌಕರರ ಬಹು ನಿರೀಕ್ಷಿತ 7 ನೇ ವೇತನ ಆಯೋಗದ ಸೌಲಭ್ಯಗಳನ್ನು ನೌಕರರಿಗೆ ದೊರಕಿಸುವಲ್ಲಿ ರಾಜ್ಯ ಸರಕಾರಿ ನೌಕರರ ಸಂಘ ಬದ್ದವಾಗಿದೆ ಎಂದು ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ ಭರವಸೆ ನೀಡಿದರು. ಅವರು ಭಾನುವಾರದಂದು ಉಡುಪಿಯ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಭವನದಲ್ಲಿ ನಡೆದ ಉಡುಪಿ ಜಿಲ್ಲಾ ಸರಕಾರಿ ನೌಕರರ ವಾರ್ಷಿಕ ಸಮಾವೇಶ 2021 ಮತ್ತು ಸೇವಾ ನಿವೃತ್ತಿಗೊಳ್ಳುತ್ತಿರುವ ಉಡುಪಿ ಜಿಲ್ಲಾ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ […]
ಗಿರಿಜಾ ಹೆಲ್ತ್ ಕೇರ್ ಮತ್ತು ಸರ್ಜಿಕಲ್ಸ್ ನಲ್ಲಿ ಆರೋಗ್ಯ ಮತ್ತು ವೈದ್ಯಕೀಯ ಸಲಕರಣೆಗಳು ಬಾಡಿಗೆಗೆ ಲಭ್ಯ
ಉಡುಪಿ: ಗಿರಿಜಾ ಹೆಲ್ತ್ ಕೇರ್ ಮತ್ತು ಸರ್ಜಿಕಲ್ಸ್ ನಲ್ಲಿ ಆಸ್ಪತ್ರೆ ಬೆಡ್, ವ್ಹೀಲ್ ಚೇರ್, ಆಕ್ಸಿಜನ್ ಕಾನ್ಸನ್ಟ್ರೇಟರ್, ಸಿಪಾಪ್/ಬೈಪಾಪ್ ಮಶೀನ್, ಸಕ್ಷನ್ ಮಶೀನ್, ಏರ್ ಬೆಡ್, ಪೇಷಂಟ್ ಟ್ರಾಲಿ, ಪೇಷಂಟ್ ಶಿಫ್ಟಿಂಗ್ ಚೇರ್ ಮತ್ತು ಇತರ ವೈದ್ಯಕೀಯ ಸಲಕರಣೆಗಳು ಕಡಿಮೆ ಬೆಲೆಗೆ ಬಾಡಿಗೆಗೆ ಲಭ್ಯವಿದೆ. ಇಲ್ಲಿ ವೈದ್ಯಕೀಯ ಸಲಕರಣೆಗಳನ್ನು ಮಾರಾಟ ಮಾಡವ ಜೊತೆಗೆ ಮಾರಾಟ ಮಾಡಿರುವ ಸಲಕರಣೆಗಳನ್ನು ವಾಪಾಸು ಖರೀದಿಸುವ ಬೈ ಬ್ಯಾಕ್ ಸೌಲಭ್ಯ ಕೂಡಾ ಲಭ್ಯವಿದೆ. ಮಾರುಕಟ್ಟೆಯಲ್ಲಿ ವೈದ್ಯಕೀಯ ಸಲಕರಣೆಗಳು ಅರ್ವತ್ತರಿಂದ ಎಪ್ಪತ್ತು ಸಾವಿರ ರೂಪಾಯಿ […]
ರಾಷ್ಟ್ರದ ಅಭಿವೃದ್ದಿ ಪ್ರತಿಯೊಬ್ಬ ವಿದ್ಯಾರ್ಥಿಯ ಜವಾಬ್ದಾರಿ: ಪ್ರೊ. ನರೇಂದ್ರ.ಎಲ್.ನಾಯಕ್
ಮಂಗಳೂರು: ವಿದ್ಯಾರ್ಥಿಗಳು ಜೀವನದಲ್ಲಿ ನಿಖರವಾದ ಗುರಿಯನ್ನುಹೊಂದಿರಬೇಕು ಹಾಗೂ ಆ ಗುರಿ ಸಾಧಿಸುವಲ್ಲಿ ನಿರಂತರ ಪ್ರಯತ್ನ ಮಾಡಬೇಕು. ಸರಿಯಾದ ಯೋಜನೆ, ಕಠಿಣ ಪರಿಶ್ರಮ, ಸಮರ್ಪಣಾ ಮನೋಭಾವ ಹಾಗೂ ಛಲದೊಂದಿಗೆ ಮುನ್ನಡೆದರೆ ಸಾಧನೆಯ ಶಿಖರವನ್ನು ತಲುಪಲು ಸಾಧ್ಯ. ವಿದ್ಯಾರ್ಥಿಗಳು ಸ್ವಯಂ ಶಿಸ್ತುಬದ್ಧರಾಗಿದರೆ ಮಾತ್ರ ಈ ರಾಷ್ಟ್ರ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗುತ್ತದೆ. ಆದ್ದರಿಂದ ರಾಷ್ಟ್ರದ ಅಭಿವೃದ್ಧಿ ಪ್ರತಿಯೊಬ್ಬ ವಿದ್ಯಾರ್ಥಿಯ ಕೈಯಲ್ಲಿದೆ. ಆ ಜವಾಬ್ದಾರಿಯನ್ನರಿತು ವಿದ್ಯಾರ್ಥಿಗಳು ಸಮಯ ವ್ಯರ್ಥ ಮಾಡದೆ ಗಂಭೀರವಾಗಿ ಅಧ್ಯಯನ ಮಾಡಬೇಕು. ಕಾಲೇಜಿನಲ್ಲಿ ಕೆಲವೊಂದು ನಿಯಮ ನಿಬಂಧನೆಗಳು ಇದ್ದುಅದನ್ನುಯಾವುದೇ ಕಾರಣಕ್ಕೂ […]