ಅಂತಾರಾಷ್ಟ್ರೀಯ ಮಾದಕ ದ್ರವ್ಯ ಸೇವನೆ ವಿರೋಧಿ ದಿನ: 1.28 ಕೋಟಿ ಮೌಲ್ಯದ ಡ್ರಗ್ಸ್ ನಾಶಪಡಿಸಿದ ಮಂಗಳೂರು ನಗರ ಪೊಲೀಸ್ ಇಲಾಖೆ

ಮಂಗಳೂರು: ಅಂತಾರಾಷ್ಟ್ರೀಯ ಮಾದಕ ದ್ರವ್ಯ ಸೇವನೆ ಮತ್ತು ಅಕ್ರಮ ಸಾಗಾಟ ವಿರೋಧಿ ದಿನದಂದು ಮಂಗಳೂರು ನಗರ ಪೊಲೀಸರು 1.28 ಕೋಟಿ ಮೌಲ್ಯದ ಡ್ರಗ್ಸ್ ನಾಶಪಡಿಸಿದ್ದಾರೆ. ಭಾನುವಾರದಂದು ಮಂಗಳೂರು ನಗರ ಪೊಲೀಸರು ಅಂತಾರಾಷ್ಟ್ರೀಯ ಮಾದಕ ದ್ರವ್ಯ ಸೇವನೆ ಮತ್ತು ಅಕ್ರಮ ಸಾಗಾಟ ವಿರೋಧಿ ದಿನಾಚರಣೆಯ ಅಂಗವಾಗಿ ಈ ಕಾರ್ಯವನ್ನು ಕೈಗೊಂಡಿದ್ದಾರೆ. ಕಮಿಷನರೇಟ್ ವ್ಯಾಪ್ತಿಯಲ್ಲಿ ಬರುವ 15 ಪೊಲೀಸ್ ಠಾಣೆಗಳಲ್ಲಿ ಕಳೆದ ಒಂದು ವರ್ಷದಲ್ಲಿ ವಶಪಡಿಸಿಕೊಳ್ಳಲಾದ ಡ್ರಗ್ಸ್ ಪ್ರಮಾಣ ಇದಾಗಿದೆ. 580.860 ಕೆಜಿ ಗಾಂಜಾ, 25 ಗ್ರಾಂ ಹೆರಾಯಿನ್ ಮತ್ತು […]

ತಿಂಗಳಿಗೆ 15 ದಿನ ಅರಣ್ಯದಲ್ಲೇ ಇರಿ: ಹಿರಿಯ ಅರಣ್ಯ ಇಲಾಖಾಧಿಕಾರಿಗಳಿಗೆ ಸಿಎಂ ಬೊಮ್ಮಾಯಿ ನಿರ್ದೇಶನ

ಬೆಂಗಳೂರು: ಜಿಲ್ಲಾ ಮಟ್ಟದ ಅರಣ್ಯಾಧಿಕಾರಿಗಳಿಂದ ಹಿಡಿದು ಪ್ರಧಾನ ಕಾರ್ಯದರ್ಶಿವರೆಗಿನ ಎಲ್ಲ ಅರಣ್ಯ ಇಲಾಖಾಧಿಕಾರಿಗಳು ತಿಂಗಳಲ್ಲಿ 15 ದಿನಗಳ ಕಾಲ ಅರಣ್ಯದಲ್ಲಿ ಇರುವಂತೆ ಶನಿವಾರದಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. “ಹಿರಿಯ ಅಧಿಕಾರಿಗಳು ಬೆಂಗಳೂರಿನಲ್ಲೆ ನೆಲೆಸಿದ್ದಾರೆ. ನೀವು ನಿಮ್ಮ ಕಛೇರಿಯಿಂದ ಹೊರಗೆ ಬರುತ್ತಿಲ್ಲ. ಕಾಡಿಗೆ ಹೋಗಿ, ತಿಂಗಳಿಗೆ 15 ದಿನ ಅಲ್ಲೇ ಇರಿ. ಇದು ಇಲಾಖೆಯ ಇತರ ಸಿಬ್ಬಂದಿಗಳ ನೈತಿಕತೆಯನ್ನು ಹೆಚ್ಚಿಸುತ್ತದೆ. ಹಿರಿಯ ಅಧಿಕಾರಿಗಳು ಅರಣ್ಯ ಸಂರಕ್ಷಣೆಯಲ್ಲಿ ತೊಡಗಿದ್ದಾರೆ ಎಂಬ ಸಂದೇಶ ರವಾನೆಯಾಗುತ್ತದೆ” ಎಂದು ಬೊಮ್ಮಾಯಿ ಹೇಳಿದ್ದಾರೆ ಎಂದು […]

ಮಾಹೆಯ ಸಂಶೋಧಕರಿಂದ ಮೈಕ್ರೋಫ್ಲೂಯಿಡಿಕ್ ಕ್ಯಾನ್ಸರ್-ಆನ್-ಚಿಪ್ ತಂತ್ರಜ್ಞಾನ ಅಭಿವೃದ್ಧಿ

ಮಣಿಪಾಲ: ಮಾಹೆಯ ಮಣಿಪಾಲ ಸ್ಕೂಲ್ ಆಫ್ ಲೈಫ್ ಸೈನ್ಸಸ್ ನ ಸಹಾಯಕ ಪ್ರಾಧ್ಯಾಪಕ ಮತ್ತು ಯುವ ಸಂಶೋಧಕ ಡಾ. ಸಂಜಿಬನ್ ಚಕ್ರಬರ್ತಿ, ಮೈಕ್ರೋಫ್ಲೂಯಿಡಿಕ್ ಕ್ಯಾನ್ಸರ್-ಆನ್- ಚಿಪ್ ಎನ್ನುವ ಹೊಸ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದ್ದಾರೆ. ಇದು ಕ್ಯಾನ್ಸರ್ ರೋಗಿಯಿಂದ ಬಯಾಪ್ಸಿ ಮೂಲಕ ಪಡೆದ ಗೆಡ್ಡೆಯಲ್ಲಿ ಔಷಧ ಪ್ರತಿಕ್ರಿಯೆಯ ನೇರ ಮೌಲ್ಯಮಾಪನವನ್ನು ಮಾಡಲು ಸಹಾಯ ಮಾಡುತ್ತದೆ. ಇದು ಔಷಧ-ಸೂಕ್ಷ್ಮ ಮತ್ತು ಔಷಧ-ನಿರೋಧಕ ಗೆಡ್ಡೆಗಳನ್ನು ಗುರುತಿಸಲು ಕ್ರಿಯಾತ್ಮಕ ಓದುವಿಕೆಗಳನ್ನು ಒದಗಿಸುತ್ತದೆ. ವೈಯಕ್ತಿಕ ಕ್ಯಾನ್ಸರ್ ಚಿಕಿತ್ಸೆಯಲ್ಲಿ ವಿವಿಧ ರೀತಿಯ ಕ್ಯಾನ್ಸರ್‌ಗಳನ್ನು ನಿರ್ವಹಿಸುವಾಗ ಈ ಸಂಶೋಧನೆಗಳು […]

ಭಾರತದಿಂದ ಅಫ್ಘಾನಿಸ್ತಾನಕ್ಕೆ 3000 ಮೆಟ್ರಿಕ್ ಟನ್ ಗೋಧಿ ರವಾನೆ

ನವದೆಹಲಿ: ಶನಿವಾರದಂದು ಭಾರತವು 3,000 ಮೆಟ್ರಿಕ್ ಟನ್ ಗೋಧಿಯನ್ನು ಮತ್ತೊಮ್ಮೆ ಅಫ್ಘಾನಿಸ್ತಾನಕ್ಕೆ ಕಳುಹಿಸಿಕೊಟ್ಟಿದೆ. ಅಫ್ಘಾನ್ ಜನರಿಗೆ ಮಾನವೀಯ ನೆರವು ನೀಡುವ ಭಾರತದ ಬದ್ಧತೆ ಅಚಲವಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಹೇಳಿದ್ದಾರೆ. ಇಲ್ಲಿಯವರೆಗೆ, ಭಾರತವು ವಿಶ್ವ ಆಹಾರ ಕಾರ್ಯಕ್ರಮದ ಸಹಭಾಗಿತ್ವದಲ್ಲಿ ಅಫ್ಘಾನಿಸ್ತಾನಕ್ಕೆ 33,500 ಮೆಟ್ರಿಕ್ ಟನ್ ಗೋಧಿ ಸಾಗಣೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ.

ಕೊಸಾನೋವ್ ಸ್ಮಾರಕ 2022 ಅಥ್ಲೆಟಿಕ್ಸ್ ಕೂಟ: ಡಿಸ್ಕಸ್ ಎಸೆತಗಾರ್ತಿ ನವಜೀತ್ ಧಿಲ್ಲೋನ್ ಗೆ ಚಿನ್ನದ ಪದಕ

ನವದೆಹಲಿ: ಶನಿವಾರ ಕಝಾಕಿಸ್ತಾನದ ಅಲ್ಮಾಟಿಯಲ್ಲಿ ನಡೆದ ಕೊಸಾನೋವ್ ಸ್ಮಾರಕ 2022 ಅಥ್ಲೆಟಿಕ್ಸ್ ಕೂಟದಲ್ಲಿ ಭಾರತದ ಮಹಿಳಾ ಡಿಸ್ಕಸ್ ಎಸೆತಗಾರ್ತಿ ನವಜೀತ್ ಧಿಲ್ಲೋನ್ ಚಿನ್ನದ ಪದಕ ಗೆದ್ದಿದ್ದಾರೆ. ಕಾಮನ್‌ವೆಲ್ತ್ ಗೇಮ್ಸ್‌ಗಾಗಿ ಭಾರತ ತಂಡದಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಲು ನೋಡುತ್ತಿರುವ ನವಜೀತ್ ಧಿಲ್ಲೋನ್, ಮಹಿಳೆಯರ ಡಿಸ್ಕಸ್ ಥ್ರೋನಲ್ಲಿ 56.24 ಮೀ ದೂರ ಎಸೆದು ಚಿನ್ನ ಗೆದ್ದಿದ್ದಾರೆ. ಸಿಡಬ್ಲ್ಯೂಜಿಗಾಗಿ 4×100ಮೀ ರಿಲೇ ತಂಡದಲ್ಲಿ ಆಯ್ಕೆಯಾಗಿರುವ ದ್ಯುತಿ ಚಂದ್ 100ಮೀ ಫೈನಲ್‌ನಲ್ಲಿ 11.49 ಸೆಕೆಂಡ್‌ಗಳಲ್ಲಿ ಗುರಿ ತಲುಪಿ 11.40 ಸೆಕೆಂಡ್‌ಗಳಲ್ಲಿ ಚಿನ್ನ ಗೆದ್ದ […]