ವಿಧಾನ ಪರಿಷತ್ ಸದಸ್ಯ ಕೆ.ಪಿ.ನಂಜುಂಡಿ ವಿಶ್ವಕರ್ಮ ಭಾನುವಾರದಂದು ಕೋಟಾ ಕ್ಕೆ ಆಗಮನ

ಉಡುಪಿ: ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ(ರಿ) ರಾಜ್ಯಾಧ್ಯಕ್ಷ ಮತ್ತು ವಿಧಾನಪರಿಷತ್ ಸದಸ್ಯರಾದ ಕೆ.ಪಿ.ನಂಜುಂಡಿ ವಿಶ್ವಕರ್ಮ, ಜೂನ್ 12 ರಂದು ಭಾನುವಾರ ಬೆಳಿಗ್ಗೆ 9.30 ಗಂಟೆಗೆ ಕೋಟಕ್ಕೆ ಆಗಮಿಸಲಿದ್ದಾರೆ. ಕೋಟ ಮಾಂಗಲ್ಯ ಮಂದಿರದಲ್ಲಿ ನಡೆಯಲಿರುವ ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ಕೋಟ ಹೋಬಳಿಯ ಯುವ ಘಟಕ ಉದ್ಘಾಟನೆ, ವಿಶ್ವಕರ್ಮ ಸಮಾಜದ ವಿವಿಧ ಕ್ಷೇತ್ರಗಳ‌ ಸಾಧಕರ ಸನ್ಮಾನ, ಎಸ್.ಎಸ್.ಎಲ್.ಸಿ ಯಲ್ಲಿ 600 ಕ್ಕಿಂತ ಅಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳ ಸನ್ಮಾನ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ರಾಜ್ಯ ಯುವಘಟಕಾಧ್ಯಕ್ಷ ಶ್ರೀನಿವಾಸ ಮಳವಳ್ಳಿ ಉಪಸ್ಥಿತರಿರಲಿದ್ದಾರೆ. […]

ಪಡಿತರ ಚೀಟಿದಾರರಿಗೆ ಪೋರ್ಟಿಬಿಲಿಟಿ ಮೂಲಕ ಇ-ಕೆವೈಸಿ ಮಾಡಿಸಲು ಜೂನ್ 30 ರವರೆಗೆ ಅವಕಾಶ

ಉಡುಪಿ: ರಾಜ್ಯದ ಯಾವುದೇ ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ಚೀಟಿದಾರರಿಗೆ ಪೋರ್ಟಿಬಿಲಿಟಿ ಮೂಲಕ ಜೂನ್ 30 ರ ಒಳಗೆ ಇ-ಕೆವೈಸಿ ಮಾಡಿಸಲು ಅಂತಿಮ ಅವಕಾಶ ಕಲ್ಪಿಸಲಾಗಿದೆ. ಕುಟುಂಬದ ಎಲ್ಲಾ ಸದಸ್ಯರು ಇ-ಕೆವೈಸಿ ಮಾಡಿಸುವುದು ಕಡ್ಡಾಯವಾಗಿದ್ದು, ಈವರೆಗೆ ಪಡಿತರ ಆಹಾರ ಧಾನ್ಯ ಪಡೆಯುತ್ತಿದ್ದ ಮೂಲ ನ್ಯಾಯಬೆಲೆ ಅಂಗಡಿಗಳಲ್ಲಿ ಮಾತ್ರ ಇ-ಕೆವೈಸಿ ಮಾಡಲು ಇದ್ದ ನಿಯಮವನ್ನು ಸಡಿಲಗೊಳಿಸಲಾಗಿದ್ದು, ಇದುವರೆಗೂ ಇ- ಕೆವೈಸಿ ಆಗದೇ ಇರುವ ಪಡಿತರ ಚೀಟಿಯ ಸದಸ್ಯರು ರಾಜ್ಯದ ಯಾವುದೇ ನ್ಯಾಯಬೆಲೆ ಅಂಗಡಿಯಲ್ಲಿ ತಮ್ಮ ಬೆರಳಚ್ಚು ನೊಂದಾಯಿಸಿಕೊಳ್ಳಬಹುದಾಗಿದೆ (ಆಧಾರ ದೃಢೀಕರಣ […]

ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಕಾಲೇಜಿನಲ್ಲಿ ಡಿಜಿಟಲ್ ಉತ್ಪನ್ನ ‘ಐ ಓ ಕ್ಯೂಬ್’ ಬಿಡುಗಡೆ

ನಿಟ್ಟೆ: ನಿಟ್ಟೆಯ ಅಟಲ್ ಇನ್ಕ್ಯುಬೇಷನ್ ಸೆಂಟರ್ ನಲ್ಲಿ ಸ್ಥಾಪಿತವಾಗಿರುವ ಬೆಂಗಳೂರಿನ ಡಿಲೈತ್ ಕನ್ಸಲ್ಟೆನ್ಸಿ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್ ಕಂಪನಿಯ ‘ಇಂಟರ್ನೆಟ್ ಆಫ್ ಥಿಂಗ್ಸ್’ ಮೇಲಿನ ಒಂದು ಡಿಜಿಟಲ್ ಉತ್ಪನ್ನ ‘ಐ ಓ ಕ್ಯೂಬ್’ ನ್ನು ಜೂ.9 ರಂದು ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಕಾಲೇಜಿನಲ್ಲಿ ಬಿಡುಗಡೆ ಮಾಡಲಾಯಿತು. ನಿಟ್ಟೆ ಅಟಲ್ ಇನ್ಕ್ಯುಬೇಷನ್ ಸೆಂಟರನ ಸಿಇಓ ಡಾ. ಅನಂತ ಪದ್ಮನಾಭ್ ಆಚಾರ್, ನಿಟ್ಟೆ ತಾಂತ್ರಿಕ ವಿದ್ಯಾಲಯದ ಕಂಪ್ಯೂಟರ್ ವಿಭಾಗದ ಮುಖ್ಯಸ್ಥೆ ಡಾ. ಜ್ಯೋತಿ ಶೆಟ್ಟಿ, ಇನ್ಫರ್ಮೇಷನ್ ಸೈನ್ಸ್ […]

ದೂರು ಕೊಟ್ಟವರ ಕಾರಿನಲ್ಲಿ ತಿರುಗಾಟ ಮಾಡಿದ ದಾವಣಗೆರೆ ಎಸ್ ಐ ಮತ್ತು ಪೇದೆ ವಿರುದ್ದ ಕ್ರಮ

ದಾವಣಗೆರೆ: ಖಾಸಗಿ ವಾಹನವನ್ನು ಅದರ ಮಾಲೀಕರ ಅನುಮತಿಯಿಲ್ಲದೆ ಅಥವಾ ಅದರ ಮೂಲವನ್ನು ತಿಳಿದುಕೊಳ್ಳದೆ ಬಳಸಿದ್ದಕ್ಕಾಗಿ ಮತ್ತು ನಾಗರಿಕರೊಂದಿಗೆ ಅನುಚಿತವಾಗಿ ವರ್ತಿಸಿದ್ದಕ್ಕಾಗಿ ಹದಡಿ ಪೋಲೀಸ್ ಠಾಣೆಯ ಪೇದೆ ಮತ್ತು ಮೇಲಾಧಿಕಾರಿಯ ವಿರುದ್ದ ವಿಚಾರಣೆಯನ್ನು ಕೈಗೊಳ್ಳಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಹದಡಿ ಪೊಲೀಸ್ ಠಾಣೆಯ ಪೊಲೀಸ್ ಪೇದೆಯನ್ನು ಅಮಾನತುಗೊಳಿಸಲಾಗಿದೆ ಮತ್ತು ಅವರ ಮೇಲಧಿಕಾರಿಯ ವಿರುದ್ಧ ಇಲಾಖಾ ವಿಚಾರಣೆಯನ್ನು ಪ್ರಾರಂಭಿಸಲಾಗಿದೆ ಎಂದು ವರದಿಯಾಗಿದೆ. ಬೆಂಗಳೂರು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಅಲೋಕ್ ಕುಮಾರ್ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಪಿಎಸ್‌ಐ ಮತ್ತು ಕಾನ್‌ಸ್ಟೆಬಲ್ ವಿರುದ್ಧ ದಾವಣಗೆರೆ […]

ನಕ್ಸಲರ ದಾಳಿಗೆ ಬಲಿಯಾದ ತಂದೆ; ಖೇಲೋ ಇಂಡಿಯಾದಲ್ಲಿ ದಾಖಲೆ ನಿರ್ಮಿಸಿ ಚಿನ್ನ ಗೆದ್ದ ಮಗಳು: ಸುಪ್ರಿತಿ ಕಚ್ಚಪ್ ಗೆಲುವಿನ ಓಟ

ನವದೆಹಲಿ: ತನ್ನ ತಂದೆಯನ್ನು ಕಳೆದುಕೊಂಡಾಗ ಸುಪ್ರಿತಿ ಕಚ್ಚಪ್ ಕೇವಲ ಶಿಶುವಾಗಿದ್ದರು. ತಂದೆ ರಾಮಸೇವಕ್ ಓರಾನ್‌, ತಾಯಿ ಬಲ್ಮತಿ ದೇವಿ ಮತ್ತು ಅವರ ಐದು ಮಕ್ಕಳು ಝಾರ್ಖಂಡ್ ನ ಬುರ್ಹು ಗ್ರಾಮದ ನಿವಾಸಿಗಳಾಗಿದ್ದರು. ಗ್ರಾಮದ ವೈದ್ಯಕೀಯ ವೈದ್ಯರಾಗಿದ್ದ ಓರಾನ್ 2003 ಡಿಸೆಂಬರ್ ರಾತ್ರಿಯಂದು ಇತರ ನಾಲ್ಕು ಗ್ರಾಮಸ್ಥರೊಂದಿಗೆ ಹತ್ತಿರದ ಹಳ್ಳಿಯ ರೋಗಿಯ ಮನೆಗೆ ಹೋಗಿದ್ದರು. ಆದರೆ ಅವರು ತಿರುಗಿ ವಾಪಾಸು ಮನೆಗೆ ಬರಲೇ ಇಲ್ಲ. ಓರಾನ್ ಮತ್ತು ಇತರ ಗ್ರಾಮಸ್ಥರು ನಕ್ಸಲ್ ದಾಳಿಗೆ ಬಲಿಯಾಗಿ ಶವವಾಗಿ ಪತ್ತೆಯಾಗಿದ್ದರು. ಅವರ […]