ರಾಜ್ಯ, ರಾಷ್ಟ್ರಮಟ್ಟದ ಕ್ರೀಡಾಳುಗಳ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ
ಉಡುಪಿ: ರಾಜ್ಯ ಸರ್ಕಾರದ ಕ್ರೀಡಾ ವಿದ್ಯಾರ್ಥಿ ವೇತನ ಯೋಜನೆಯಡಿ ಜಿಲ್ಲೆಯಲ್ಲಿ 2020-21 ನೇ ಸಾಲಿನಲ್ಲಿ ಪ್ರತಿಭಾವಂತ ಮಾಧ್ಯಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ವಾರ್ಷಿಕ 10,000 ರೂ. ಪ್ರೋತ್ಸಾಹಿತ ಕ್ರೀಡಾ ವಿದ್ಯಾರ್ಥಿ ವೇತನ ನೀಡುತ್ತಿದ್ದು, ರಾಜ್ಯ ಮಟ್ಟದ ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಪಡೆದ, ಭಾರತ ಸರ್ಕಾರದಿಂದ ಮಾನ್ಯತೆ ಪಡೆದ ಅಧಿಕೃತ ಕ್ರೀಡಾ ಸಂಸ್ಥೆಗಳು ಆಯೋಜಿಸಿದ ರಾಷ್ಟ್ರ ಮಟ್ಟದ ಕ್ರೀಡಾ ಕೂಟದಲ್ಲಿ ಭಾಗವಹಿಸಿದ, ರಾಷ್ಟ್ರೀಯ ಖೇಲೋ ಇಂಡಿಯ ಕ್ರೀಡಾ ಕೂಟದಲ್ಲಿ ರಾಜ್ಯ ತಂಡವನ್ನು ಪ್ರತಿನಿಧಿಸಿದ ಮತ್ತು ರಾಷ್ಟ್ರೀಯ ಶಾಲಾ ಕ್ರೀಡಾ […]
ಮುನಿಯಾಲ್ ಆಯುರ್ವೇದ ಕಾಲೇಜಿನಲ್ಲಿ ಆಯುರ್ವೇದ ವಿಚಾರ ಸಂಕಿರಣ
ಕಾರ್ಕಳ: ಮುನಿಯಾಲ್ ಆಯುರ್ವೇದ ಕಾಲೇಜಿನಲ್ಲಿ ಎರಡು ದಿನಗಳ ವಿಚಾರ ಸಂಕೀರ್ಣವು ಇತ್ತೀಚೆಗೆ ನಡೆಯಿತು. ಸ್ನಾತಕೋತ್ತರ ವಿಭಾಗದ ಮುಖ್ಯಸ್ಥ ಡಾ.ಗುರುರಾಜ್ ತಂತ್ರಿ ಕಾರ್ಯಕ್ರಮವನ್ನು ಉದ್ಘಾಟಿಸಿ, ವೈದ್ಯರಿಗೆ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ, ವೈದ್ಯಕೀಯ ವಿಚಾರ ಸಂಕಿರಣಗಳ ಮಹತ್ವವನ್ನು ತಿಳಿಸಿದರು. ಮೊದಲ ದಿನದ ಸಂಪನ್ಮೂಲ ವ್ಯಕ್ತಿ, ಮಿತ್ರ ಆಸ್ಪತ್ರೆಯ ನಿರ್ದೇಶಕರಾದ ಡಾ. ಶ್ರೀಧರ್ ಹೊಳ್ಳ ಮತ್ತು ಮಿತ್ರ ಆಸ್ಪತ್ರೆಯ ಚಿಕಿತ್ಸಕರಾದ ಡಾ. ಸಾರಿಕಾ ಹೊಳ್ಳ ಇವರು ಹೃದಯ ಸಂಬಂಧಿ ಕಾಯಿಲೆಗಳು ಹಾಗೂ ಚಿಕಿತ್ಸೆ ಬಗ್ಗೆ ಮಾಹಿತಿಯನ್ನು ನೀಡಿದರು. ಸ್ವಸ್ಥವೃತ್ತ ವಿಭಾಗದ ಪ್ರಾಧ್ಯಾಪಕ […]
ದ ವಿನ್ಸಿ ಆನಿಮೇಷನ್ ಸೆಂಟರ್ ನಲ್ಲಿ 3D ಆನಿಮೇಷನ್ ಕೋರ್ಸ್
ಮಣಿಪಾಲ: ಇಲ್ಲಿನ ದ ವಿನ್ಸಿ ಆನಿಮೇಷನ್ ಸೆಂಟರ್ ನಲ್ಲಿ ಡಿಪ್ಲೋಮಾ ಇನ್ 3D ಕೋರ್ಸ್ ಗೆ ತರಗತಿಗಳು ಆರಂಭವಾಗಿವೆ. ನಾಲ್ಕು ತಿಂಗಳು ಸಂಸ್ಥೆಯಲ್ಲಿ ತರಬೇತಿ ಪಡೆದ ಬಳಿಕ ನಾಲ್ಕು ತಿಂಗಳ ಕೈಗಾರಿಕಾ ತರಬೇತಿ ನೀಡಲಾಗುವುದು. ಕೋರ್ಸ್ ಮುಗಿದ ಎಂಟು ತಿಂಗಳಲ್ಲಿ ವೇತನ ದೊರೆಯುವ ಖಚಿತತೆ. ಕೇವಲ ಮೂರು ವರ್ಷಗಳಲ್ಲಿ ಆನಿಮೇಷನ್ ಇಂಡಸ್ಟ್ರಿಯಲ್ಲಿ 40 ಸಾವಿರದವರೆಗೆ ಸಂಪಾದಿಸುವ ಅವಕಾಶ. 100% ಉದ್ಯೋಗ ಖಾತ್ರಿ ಹೊಂದಿರುವ ಈ ಕೋರ್ಸಿನ ಕೇವಲ 20 ಸೀಟುಗಳು ಲಭ್ಯವಿದ್ದು, ಆಸಕ್ತರು ಹೆಚ್ಚಿನ ವಿವರಗಳಿಗಾಗಿ ದೂ. […]
ರಷ್ಯಾದಿಂದ ತೈಲ ಆಮದನ್ನು ದ್ವಿಗುಣಗೊಳಿಸುವತ್ತ ಭಾರತದ ಚಿತ್ತ? ರಷ್ಯಾ ಕಂಪನಿಯಿಂದ ಹೆಚ್ಚು ತೈಲ ಖರೀದಿಸಲು ಭಾರತ ಉತ್ಸುಕ
ನವದೆಹಲಿ: ರಷ್ಯಾ ಮತ್ತು ಉಕ್ರೇನ್ ಯುದ್ದ ಹಿನ್ನೆಲೆಯಲ್ಲಿ ಯೂರೋಪ್ ಮತ್ತಿತರ ಪಾಶ್ಚಾತ್ಯ ದೇಶಗಳು ಮಾಸ್ಕೋದೊಂದಿಗಿನ ವ್ಯವಹಾರವನ್ನು ತಿರಸ್ಕರಿಸಿರುವುದರಿಂದ, ಭಾರತವು ಈ ಸನ್ನಿವೇಶವನ್ನು ತನ್ನ ಅನುಕೂಲಕ್ಕೆ ಪರಿವರ್ತಿಸಲು ಉತ್ಸುಕವಾಗಿದೆ ಎನ್ನಲಾಗಿದೆ. ಭಾರತವು ತನ್ನ ರಷ್ಯಾದ ತೈಲ ಆಮದುಗಳನ್ನು ಸರ್ಕಾರಿ ಸ್ವಾಮ್ಯದ ಸಂಸ್ಕರಣಾಗಾರಗಳೊಂದಿಗೆ ದ್ವಿಗುಣಗೊಳಿಸಲು ನೋಡುತ್ತಿದ್ದು, ರಷ್ಯಾದ ರೋಸ್ನೆಫ್ಟ್ ಪಿ ಜೆ ಎಸ್ ಸಿ ಯಿಂದ ಹೆಚ್ಚು-ರಿಯಾಯಿತಿ ಸರಬರಾಜುಗಳನ್ನು ತೆಗೆದುಕೊಳ್ಳಲು ಉತ್ಸುಕವಾಗಿದೆ ಎಂದು ವರದಿಯಾಗಿದೆ. ಭಾರತದ ಸಂಸ್ಕಾರಕಗಳು ಒಟ್ಟಾಗಿ ಭಾರತಕ್ಕೆ ರಷ್ಯಾದ ಕಚ್ಚಾ ತೈಲಕ್ಕಾಗಿ ಆರು ತಿಂಗಳ ಹೊಸ ಪೂರೈಕೆ […]
ಬಿಹಾರ: ದೇಶದ ಅತಿ ಉದ್ದದ ಉಕ್ಕಿನ ಸೇತುವೆ ‘ಮಹಾತ್ಮ ಗಾಂಧಿ ಸೇತು’ ಪುನರ್ನಿರ್ಮಾಣ; ಇಂದಿನಿಂದ ಸಾರ್ವಜನಿಕರಿಗೆ ಮುಕ್ತ
ಬಿಹಾರ: ದೇಶದ ಅತಿ ಉದ್ದದ ಉಕ್ಕಿನ ಸೇತುವೆ ‘ಮಹಾತ್ಮ ಗಾಂಧಿ ಸೇತು’ ಇಂದಿನಿಂದ ಕಾರ್ಯಾಚರಿಸಲಿದ್ದು, ಸಾರ್ವಜನಿಕರಿಗೆ ಮುಕ್ತವಾಗಲಿದೆ. ಕೇಂದ್ರ ಸಚಿವ ನಿತಿನ್ ಗಡ್ಕರಿ ಮತ್ತು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮರುನಿರ್ಮಾಣಗೊಂಡ ಸೇತುವೆಯನ್ನು ರಾಜ್ಯದ 12 ಕೋಟಿ ಜನರಿಗೆ ಸಮರ್ಪಿಸಲಿದ್ದಾರೆ. ಗಂಗಾ ನದಿಯ ಮೇಲೆ ನಿರ್ಮಿಸಲಾದ ಗಾಂಧಿ ಸೇತು, ದಕ್ಷಿಣದ ಪಾಟ್ನಾವನ್ನು ಉತ್ತರದ ಹಾಜಿಪುರಕ್ಕೆ ಸಂಪರ್ಕಿಸುತ್ತದೆ. ಸೇತುವೆಯನ್ನು ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯವು, ಬಿಹಾರಕ್ಕೆ ನೀಡಲಾದ ಪ್ರಧಾನ ಮಂತ್ರಿಗಳ ಪ್ಯಾಕೇಜ್ ಅಡಿಯಲ್ಲಿ 1,742 ಕೋಟಿ ರೂಪಾಯಿಗಳಲ್ಲಿ […]