ಸ್ವಾವಲಂಬಿ ಗ್ರಾಮದಿಂದ ಸ್ವಾವಲಂಬಿ ಭಾರತದ ಸಂಕಲ್ಪ: ಕೆ. ವಿಜಯ್ ಕೊಡವೂರು
ಉಡುಪಿ: ಜೂನ್ 02 ರಂದು ಮರವಂತೆಯ ಸಾಧನಾ ಸಭಾಭವನದಲ್ಲಿ ಸ್ವಾವಲಂಬಿ ಭಾರತ ಅಭಿಯಾನದ ಅಂಗವಾಗಿ ಸ್ವಾವಲಂಬಿ ಗ್ರಾಮ ಬೈಠಕ್ ಕಾರ್ಯಕ್ರಮವು ನಡೆಯಿತು. ವಿದ್ಯಾವಂತರು ನಿರೋದ್ಯೋಗಿಗಳಾದಲ್ಲಿ ಕುಡಿತ, ಡ್ರಗ್ಸ್ ಮುಂತಾದ ದುಷ್ಟತಗಳು ಹೆಚ್ಚಾಗಿ ಕಳ್ಳತನ, ದರೋಡೆ, ಲೂಟಿ ಮಾಡಿ ಸಮಾಜವನ್ನು ಕೆಡಿಸುತ್ತಾರೆ. ಈ ಕಾರಣಕ್ಕಾಗಿ ಅವರಿಗೆ ಕೇಂದ್ರ ಸರಕಾರದ ಯೋಜನೆಗಳ ಬಗ್ಗೆ ಮಾಹಿತಿ ನೀಡಿ, ಸ್ವ ಉದ್ಯೋಗ ಕೈಗೊಳ್ಳುವಂತೆ ನಾವೆಲ್ಲರೂ ಪ್ರೋತ್ಸಾಹಿಸಿದರೆ ಅವರು ತಮ್ಮ ಸ್ವಂತ ಕಾಲಿನಲ್ಲಿ ನಿಂತು ಬೆಳೆದು ಸಮಾಜದ ಕಷ್ಟಗಳಿಗೆ ಸ್ಪಂದಿಸುತ್ತಾರೆ ಎಂದು ಜಿಲ್ಲಾ ಸಮನ್ವಯಕ […]
ಆರ್ಟ್ ವಿತ್ ಆಸರೆ: ಆಸರೆಯ ವಿಶೇಷ ಮಕ್ಕಳಿಗಾಗಿ ಸಂಗೀತ ಮತ್ತು ನೃತ್ಯ ಕಾರ್ಯಕ್ರಮ
ಮಣಿಪಾಲ: ಅರ್ಚನಾ ಟ್ರಸ್ಟ್ ಮತ್ತು ಮಾಹೆಯ ಜಂಟಿ ಸಹಯೋಗದೊಂದಿಗೆ ‘ಆರ್ಟ್ ವಿತ್ ಆಸರೆ’, ಆಸರೆಯ ವಿಶೇಷ ಮಕ್ಕಳಿಗಾಗಿ ಸಂಗೀತ ಮತ್ತು ನೃತ್ಯದ ವಿಶೇಷ ಕಾರ್ಯಕ್ರಮವನ್ನು ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್ ಇಲ್ಲಿ ಇತ್ತೀಚೆಗೆ ನಡೆಸಲಾಯಿತು. ಗಾಂಧಿಯನ್ ಸೆಂಟರಿನ ವಿದ್ಯಾರ್ಥಿಗಳು ಆಸರೆಯ ವಿಶೇಷ ಚೇತನ ವಿದ್ಯಾರ್ಥಿಗಳನ್ನು ಗುಂಪು ಹಾಡು, ಗುಂಪು ನೃತ್ಯ ಮತ್ತು ವಿವಿಧ ಆಟಗಳ ಮೂಲಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರು. ಎಂಎ ಅಂತಿಮ ವರ್ಷದ ವಿದ್ಯಾರ್ಥಿಗಳಾದ ಜೂಡಿ, ಮರಿಯಮ್, ಶ್ರಾವ್ಯ, ರಮ್ಯಾ, ಶ್ರೀಕೃಷ್ಣ […]
ಕೇರಳದಲ್ಲಿ ಸಿಎಎ ಜಾರಿ ಇಲ್ಲ: ಮುಖ್ಯಮಂತ್ರಿ ಪಿಣರಾಯಿ ವಿಜಯನ್
ತಿರುವನಂತಪುರಂ: ರಾಜ್ಯದಲ್ಲಿ ಪೌರತ್ವ (ತಿದ್ದುಪಡಿ) ಕಾಯ್ದೆಯನ್ನು (ಸಿಎಎ) ತಮ್ಮ ಸರ್ಕಾರ ಜಾರಿಗೆ ತರುವುದಿಲ್ಲ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಗುರುವಾರ ಪ್ರತಿಪಾದಿಸಿದ್ದಾರೆ. ತಮ್ಮ ಸರ್ಕಾರದ ಮೊದಲ ವಾರ್ಷಿಕೋತ್ಸವದ ಆಚರಣೆಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, “ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಬಗ್ಗೆ ಸರ್ಕಾರವು ಸ್ಪಷ್ಟ ನಿಲುವನ್ನು ಹೊಂದಿದೆ. ಅದು ಹಾಗೆಯೆ ಮುಂದುವರಿಯಲಿದೆ” ಎಂದು ಹೇಳಿದ್ದಾರೆ. ಜವಾಬ್ದಾರಿಯುತ ಸ್ಥಾನದಲ್ಲಿರುವ ವ್ಯಕ್ತಿಗಳು ಕಾನೂನನ್ನು ಜಾರಿಗೊಳಿಸುವುದಾಗಿ ಆಗಾಗ್ಗೆ ಹೇಳುತ್ತಿದ್ದಾರೆ. ಈ ವಿಚಾರದಲ್ಲಿ ರಾಜ್ಯ ಸರ್ಕಾರ ಸ್ಪಷ್ಟ ನಿಲುವು ಹೊಂದಿದೆ. ಅದರಲ್ಲಿ […]
ಬೆಂಗಳೂರು- ಉಡುಪಿಯ ಜಂಗಲ್ ಡ್ರೈವ್ನ ಸುಂದರ ಚಿತ್ರ ಪೋಸ್ಟ್ ಮಾಡಿದ ಆನಂದ್ ಮಹೀಂದ್ರಾ: ಕುಕ್ಕೆ ಸುಬ್ರಮಣ್ಯ- ಗುಂಡ್ಯ ರಸ್ತೆಗೆ ಉದ್ಯಮ ದಿಗ್ಗಜ ಪುಲ್ ಫಿದಾ!
ಉಡುಪಿ: ಮಹೀಂದ್ರಾ ಕಂಪನಿಯ ಅಧ್ಯಕ್ಷ ಬೆಂಗಳೂರು-ಉಡುಪಿಯ ಹಚ್ಚ ಹಸುರಿನ ರಸ್ತೆ ಕಂಡು ಫುಲ್ ಫಿದಾ ಆಗಿದ್ದಾರೆ. ಉದ್ಯಮ ದಿಗ್ಗಜ ಸಾಮಾನ್ಯವಾಗಿ ಹಾಸ್ಯ ಮತ್ತು ಸ್ಪೂರ್ತಿದಾಯಕ ಪೋಸ್ಟ್ಗಳನ್ನು ಟ್ವಿಟರ್ ನಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಬುಧವಾರ, ಈ ಬಿಲಿಯನೇರ್ ಸುಂದರವಾದ ಜಂಗಲ್ ಡ್ರೈವ್ನ ಚಿತ್ರವನ್ನು ಹಂಚಿಕೊಂಡಿದ್ದಾರೆ. ಬೆಂಗಳೂರು ಮತ್ತು ಉಡುಪಿ ನಡುವೆ ಬರುವ ರಸ್ತೆಯ ಒಂದು ಸುಂದರವಾದ ಚಿತ್ರವನ್ನು ಹಂಚಿಕೊಂಡು ನೆಟ್ಟಿಗರನ್ನು ಸೆಳೆದಿದ್ದಾರೆ. ವಿಶ್ವದ ಅತ್ಯಂತ ಸುಂದರವಾದ ಜಂಗಲ್ ಡ್ರೈವ್ನ ಚಿತ್ರವನ್ನು ಟ್ವಿಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಇದು ಎರಡೂ ಬದಿಗಳಲ್ಲಿ […]
ಇಡಿ ಭೀತಿ, ಕೋವಿಡ್ ಫಜೀತಿ: ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಇಡಿ ವಿಚಾರಣೆಗೂ ಮುನ್ನ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಕೋವಿಡ್ ಪಾಸಿಟಿವ್
ನವದೆಹಲಿ: ಸೋನಿಯಾ ಗಾಂಧಿ ಅವರಿಗೆ ಕೋವಿಡ್-19 ಪಾಸಿಟಿವ್ ಎಂದು ವರದಿಯಾಗಿದೆ ಎಂದು ಕಾಂಗ್ರೆಸ್ನ ರಣದೀಪ್ ಸುರ್ಜೇವಾಲಾ ಸುದ್ದಿ ಸಂಸ್ಥೆಗಳಿಗೆ ತಿಳಿಸಿದ್ದಾರೆ. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಕೋವಿಡ್ -19 ಪರೀಕ್ಷೆಯಲ್ಲಿ ಪಾಸಿಟಿವ್ ಎಂದು ಕಂಡುಬಂದಿದೆ. ಅವರು ಸೌಮ್ಯ ಜ್ವರ ಮತ್ತು ಕೆಲವು ರೋಗಲಕ್ಷಣಗಳನ್ನುಹೊಂದಿದ್ದು, ತಮ್ಮನ್ನು ತಾವು ಪ್ರತ್ಯೇಕಿಸಿಕೊಂಡಿದ್ದಾರೆ. ಅವರಿಗೆ ಅಗತ್ಯ ವೈದ್ಯಕೀಯ ಆರೈಕೆಯನ್ನು ನೀಡಲಾಗುತ್ತಿದೆ ಎಂದು ಸುರ್ಜೇವಾಲ ಹೇಳಿದ್ದಾರೆ. ಜಾರಿ ನಿರ್ದೇಶನಾಲಯದ (ಇಡಿ) ಅಧಿಕೃತ ನೋಟಿಸ್ನಲ್ಲಿ ಜೂನ್ 8 ರಂದು ಸೋನಿಯಾ ಗಾಂಧಿ ಮತ್ತು ಜೂನ್ 2 […]