ಕೇಂದ್ರ ಸರ್ಕಾರದಿಂದ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
ಉಡುಪಿ: ಕೇಂದ್ರ ಸರ್ಕಾರದಿಂದ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು ಎಸ್.ಎಸ್.ಎಲ್.ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣಗೊಂಡ ಅರ್ಹ ಅಭ್ಯರ್ಥಿಗಳು https://ssc.nic.in ಪೋರ್ಟಲ್ ನಲ್ಲಿ ಆನ್ ಲೈನ್ ಮೂಲಕ ಜೂನ್ 16 ರವರೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಲು ಅಗತ್ಯವಾದ ಮಾರ್ಗದರ್ಶನವನ್ನು ವೆಬ್ಸೈಟ್ನಲ್ಲಿ ನೀಡಲಾಗಿದ್ದು, ಅನುಮಾನಗಳಿದ್ದಲ್ಲಿ ಸಹಾಯವಾಣಿ 080- 25502520, 9483862020 ಅನ್ನು ಸಂಪರ್ಕಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕಛೇರಿ, ಜಿಲ್ಲಾಧಿಕಾರಿ ಸಂಕೀರ್ಣ, ರಜತಾದ್ರಿ, ಮಣಿಪಾಲ, ಮೊ.ನಂ. 9945856670, 8105618291 ಮತ್ತು 8197440155 ನ್ನು ಸಂಪರ್ಕಿಸುವಂತೆ […]
ಐಪಿಎಲ್ 2022: ಮೇಲ್ವಿಚಾರಕರು ಮತ್ತು ಮೈದಾನ ಸಿಬ್ಬಂದಿಗಳಿಗೆ ರೂ 1.25 ಕೋಟಿ ಬಹುಮಾನವನ್ನು ಘೋಷಿಸಿದ ಬಿಸಿಸಿಐ
ನವದೆಹಲಿ: ಸೋಮವಾರ, ಮೇ 30 ರಂದು ಐಪಿಎಲ್ 2022 ಅನ್ನು ಆಯೋಜಿಸಿದ ಎಲ್ಲಾ 6 ಸ್ಥಳಗಳ ಮೇಲ್ವಿಚಾರಕರು ಮತ್ತು ಮೈದಾನದ ಸಿಬ್ಬಂದಿಯನ್ನು ಹೊಗಳಿದ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕಾರ್ಯದರ್ಶಿ ಜಯ್ ಶಾ, ಅವರೆಲ್ಲಾ ಈ ಯಶಸ್ವಿ ಋತುವಿನ ‘ಅನ್ ಸಂಗ್ ಹೀರೋಗಳು’ ಎಂದು ಬಣ್ಣಿಸಿದ್ದಾರೆ. ಐಪಿಎಲ್ 2022 ಸೀಸನ್ ಅನ್ನು ಆಯೋಜಿಸಿದ ಎಲ್ಲಾ 6 ಸ್ಥಳಗಳಲ್ಲಿ ಮೇಲ್ವಿಚಾರಕರು ಮತ್ತು ಮೈದಾನದ ಸಿಬ್ಬಂದಿಗಳಿಗೆ 1.25 ಕೋಟಿ ರೂಪಾಯಿ ಬಹುಮಾನವನ್ನು ಬಿಸಿಸಿಐ ಘೋಷಿಸಿದೆ. ಮುಂಬೈನ ವಾಂಖೆಡೆ ಸ್ಟೇಡಿಯಂ, […]
ಜೂನ್ 2 ರಂದು ಬಿಜೆಪಿ ಸೇರಲಿದ್ದಾರೆ ಮಾಜಿ ಕಾಂಗ್ರೆಸಿಗ ಹಾರ್ದಿಕ್ ಪಟೇಲ್
ನವದೆಹಲಿ: ಮಾಜಿ ಕಾಂಗ್ರೆಸ್ ನಾಯಕ ಹಾರ್ದಿಕ್ ಪಟೇಲ್ ತಾನು ಜೂನ್ 2 ರಂದು ಬಿಜೆಪಿ ಸೇರುವುದಾಗಿ ಮಂಗಳವಾರ ಖಚಿತಪಡಿಸಿದ್ದಾರೆ. ರಾಜ್ಯಾಧ್ಯಕ್ಷ ಸಿಆರ್ ಪಾಟೀಲ್ ಸಮ್ಮುಖದಲ್ಲಿ ಹಾರ್ದಿಕ್ ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಲಾಗುವುದು ಎಂದು ಬಿಜೆಪಿ ನಾಯಕರೊಬ್ಬರು ಖಚಿತಪಡಿಸಿದ್ದಾರೆ ಎನ್ನಲಾಗಿದೆ. ಗುಜರಾತಿನಲ್ಲಿ ಪಾಟಿದಾರ್ ಕೋಟಾ ಆಂದೋಲನವನ್ನು ಮುನ್ನಡೆಸುವ ಮೂಲಕ ಪ್ರಾಮುಖ್ಯತೆ ಪಡೆದಿದ್ದ ಮಾಜಿ ಕಾಂಗ್ರೆಸಿಗ ಪಟೇಲ್ ಇತ್ತೀಚೆಗಷ್ಟೆ ಕೈ ಗೆ ಗುಡ್ ಬೈ ಹೇಳಿದ್ದರು. 2019 ರಲ್ಲಿ ಕಾಂಗ್ರೆಸ್ಗೆ ಸೇರಿದ್ದ 28 ವರ್ಷದ ಪಟೇಲ್, ಪಕ್ಷ ತೊರೆಯುವ ಮುನ್ನ […]
ಮಕ್ಕಳಿಗೆ ಪಿಎಂ ಕೇರ್ಸ್ ಫಾರ್ ಚಿಲ್ಡ್ರನ್ ಕಿಟ್ ವಿತರಣೆ ಮಾಡಿದ ಜಿಲ್ಲಾಧಿಕಾರಿ
ಉಡುಪಿ: ಕೋವಿಡ್ ಸಂದರ್ಭದಲ್ಲಿ ಜನತೆ ಎದುರಿಸಿದ ಕಷ್ಟ ನಷ್ಟಗಳನ್ನು ಭರ್ತಿ ಮಾಡಲು ಯಾರಿಂದಲೂ ಸಾಧ್ಯವಿಲ್ಲ. ಆ ಸಂದರ್ಭದಲ್ಲಿ ಎದುರಿಸಿದ ಬಾಧಕಗಳು ಇಂದಿಗೂ ನಮ್ಮ ಕಣ್ಣ ಮುಂದಿದೆ ಎಂದು ಜಿಲ್ಲಾಧಿಕಾರಿ ಕೂರ್ಮರಾವ್ ಎಂ ಹೇಳಿದರು. ಅವರು ಸೋಮವಾರ ಜಿಲ್ಲಾ ಪಂಚಾಯತ್ನ ಡಾ. ವಿ. ಎಸ್. ಆಚಾರ್ಯ ಸಭಾಂಗಣದಲ್ಲಿ ಕೇಂದ್ರ ಸರ್ಕಾರದ ಪಿ.ಎಂ ಕೇರ್ಸ್ ಫಾರ್ ಚಿಲ್ಡ್ರನ್ ಯೋಜನೆ ಅಡಿಯಲ್ಲಿ ಪೋಷಕರನ್ನು ಕಳೆದುಕೊಂಡ ಜಿಲ್ಲೆಯ 3 ಮಕ್ಕಳಿಗೆ ಅಂಚೆ ಪಾಸ್ ಪುಸ್ತಕ, ಆಯುಷ್ಮಾನ್ ಕಾರ್ಡ್, ಪ್ರಧಾನ ಮಂತ್ರಿಯಿಂದ ಮಕ್ಕಳಿಗೆ ಪತ್ರ, […]
ನಿಗದಿತ ಕಾಲಮಿತಿಯೊಳಗೆ ಸರ್ಕಾರಿ ಯೋಜನೆಗಳನ್ನು ಫಲಾನುಭವಿಗಳಿಗೆ ತಲುಪಿಸಿ: ಕೋಟ ಶ್ರೀನಿವಾಸ್ ಪೂಜಾರಿ
ಉಡುಪಿ: ಪರಿಶಿಷ್ಟ ಜಾತಿ ಮತ್ತು ಪಂಗಡದವರ ಅಭಿವೃದ್ಧಿಗೆ ಸರ್ಕಾರ ಅನೇಕ ಯೋಜನೆ ಹಾಗೂ ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದು, ಇದನ್ನು ಅರ್ಹ ಫಲಾನುಭವಿಗಳಿಗೆ ನಿಗದಿತ ಕಾಲಮಿತಿಯೊಳಗೆ ತಲುಪಿಸಬೇಕು ಎಂದು ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅಧಿಕಾರಿಗಳಿಗೆ ಸೂಚನೆ ನೀಡಿದರು. ಅವರು ಸೋಮವಾರ ಜಿಲ್ಲಾ ಪಂಚಾಯತ್ನ ಸಭಾಂಗಣದಲ್ಲಿ ನಡೆದ ಎಸ್.ಸಿ.ಎಸ್.ಪಿ ಮತ್ತು ಟಿ.ಎಸ್.ಪಿ, ಹಿಂದುಳಿದ ವರ್ಗ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸರಕಾರ ಪ್ರಸ್ತುತ ಸಾಲಿನಲ್ಲಿ ಆಯವ್ಯಯ ಮೊತ್ತದಲ್ಲಿ […]