ವಿದ್ಯಾರ್ಥಿ ಸಂಸ್ಕೃತಿ ಚಳುವಳಿ: ಬಹುಮಾನ ಗೆದ್ದ ಮುನಿಯಾಲು ಆಯುರ್ವೇದ ಕಾಲೇಜು ವಿದ್ಯಾರ್ಥಿಗಳು

ಮುನಿಯಾಲು: ಮೇ 13-14 ರಂದು ಮೈಸೂರಿನಲ್ಲಿ ಜರುಗಿದ ವಿದ್ಯಾರ್ಥಿ ಸಂಸ್ಕೃತಿ ಚಳುವಳಿ- 3ರಲ್ಲಿ ಭಾಗವಹಿಸಿದ್ದ ಮುನಿಯಾಲು ಆಯುರ್ವೇದ ಕಾಲೇಜು ಮಣಿಪಾಲದ ವಿದ್ಯಾರ್ಥಿಗಳು ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಬಹುಮಾನಗಳನ್ನು ಪಡೆದಿರುತ್ತಾರೆ. ಶಾಸ್ತ್ರೀಯ ಸಮೂಹ ನೃತ್ಯ ಸ್ಪರ್ಧೆಯಲ್ಲಿ ಚೈತನ್ಯಾ, ಮಯೂರಿ, ಮೇಘನ, ಪ್ರಸಿದ್ಧಿ, ರಕ್ಷಿತಾ, ಸ್ಟೀವಾ, ಛಾಯ, ಆರ್‌ಎಸ್ ಶಾಲಿನಿ ಪ್ರಥಮ ಸ್ಥಾನವನ್ನು ಪಡೆದಿರುತ್ತಾರೆ. ಏಕಾಂಕ ನಾಟಕಸ್ಪರ್ಧೆಯಲ್ಲಿ ಆಮೋದ್, ಮಯೂರಿ, ಚೈತನ್ಯಾ, ಪವನ್, ರಕ್ಷಿತ್, ಪ್ರಸಿದ್ಧಿ, ಛಾಯ, ಚೈತ್ರ, ಹರ್ಷಿತ, ವೀಣಾ, ಶ್ರೀನಿಧಿ, ಶ್ರೇಯ, ಮನೋಹರ್‌ ಅವರು ಸ್ವತಃ ರಚಿಸಿದ […]

ಮನೆ ಬಾಗಿಲಲ್ಲೆ ಪಡೆಯಿರಿ ರುಚಿ ರುಚಿ ಮಾವು: ಗ್ರಾಹಕರ ಮನೆ ಬಾಗಿಲಿಗೆ ಮಾವು ತಲುಪಿಸಲು ಸರ್ಕಾರದ ವೆಬ್ ಪೋರ್ಟಲ್

ಬೆಂಗಳೂರು: ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ (ಕರ್ನಾಟಕ ಸರ್ಕಾರದ ಒಂದು ಉದ್ಯಮ) ತನ್ನ ಗ್ರಾಹಕರಿಗೆ ರುಚಿಕರವಾದ ಬಗೆ ಬಗೆ ಮಾವಿನ ಹಣ್ಣುಗಳನ್ನು ಮಾರಾಟ ಮಾಡುವ ಸಲುವಾಗಿ ಮಾವಿನ ಪೋರ್ಟಲ್ ಒಂದನ್ನು ತೆರೆದಿದೆ. ಮೇ16 ರಂದು ಬಿಡುಗಡೆಯಾಗಿರುವ ಈ ಪೋರ್ಟಲ್ ನಲ್ಲಿ ವಿವಿಧ ತಳಿಗಳ ಮಾವಿನ ಹಣ್ಣುಗಳು ಲಭ್ಯವಿದೆ. ಈಗಾಗಲೇ ಪೋರ್ಟಲ್ ನಲ್ಲಿ  ವಿವಿಧ ಪ್ರಭೇದಗಳ ಮಾವಿನ ಹಣ್ಣಿನ ಆರ್ಡರ್ ಗಳನ್ನು ತೆಗೆದುಕೊಳ್ಳಲು ಪ್ರಾರಂಭಿಸಲಾಗಿದೆ. ಇಂಡಿಯಾ ಪೋಸ್ಟ್ ಸಹಯೋಗದಲ್ಲಿ ಈ ವೆಬ್‌ಸೈಟ್ ಅನ್ನು ಪ್ರಾರಂಭಿಸಲಾಗಿದ್ದು, ಇದು […]

ಬಾಬರಿ ನಂತರ ಮತ್ತೊಂದು ಮಸೀದಿಯನ್ನು ಕಳೆದುಕೊಳ್ಳಲು ಮುಸ್ಲಿಮರು ತಯಾರಿಲ್ಲ: ಅಸಾದುದ್ದೀನ್ ಓವೈಸಿ

ವಾರಣಾಸಿ: ಬಾಬರಿ ಮಸೀದಿಯ ನಂತರ ಮತ್ತೊಂದು ಮಸೀದಿಯನ್ನು ಕಳೆದುಕೊಳ್ಳಲು ಮುಸ್ಲಿಮರು ತಯಾರಿಲ್ಲ ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಸೋಮವಾರ ಹೇಳಿದ್ದಾರೆ. ನ್ಯಾಯಾಲಯದ ಆದೇಶದನ್ವಯ ವಾರಣಾಸಿಯ ಜ್ಞಾನವಾಪಿ ಸಂಕೀರ್ಣದ ಸಮೀಕ್ಷೆಯ ಸಮಯದಲ್ಲಿ ಶಿವಲಿಂಗ ಕಂಡುಬಂದಿದೆ ಎಂದು ಹೇಳಲಾಗಿರುವ ಬಳಿಕ ಅವರು ಪ್ರತಿಕ್ರಿಯಿಸಿದ್ದಾರೆ. ಬಾಬರಿ ಮಸೀದಿ ಧ್ವಂಸ ಮತ್ತು 1949 ರಲ್ಲಿ ಹಿಂದೂ ದೇವತೆಗಳ ವಿಗ್ರಹಗಳು ಕಾಣಿಸಿಕೊಂಡಾಗ ನಡೆದ ಘಟನೆಯನ್ನು ಉಲ್ಲೇಖಿಸಿದ ಓವೈಸಿ, ವಾರಣಾಸಿಯಲ್ಲಿ ಅದನ್ನು ಪುನರಾವರ್ತಿಸಲು ಬಿಡುವುದಿಲ್ಲ ಎಂದು ಮುಸ್ಲಿಮರು ಪ್ರತಿಜ್ಞೆ ಮಾಡಬೇಕೆಂದಿದ್ದಾರೆ. ತಮ್ಮ ಟ್ವಿಟರ್ ಹ್ಯಾಂಡಲ್‌ನಲ್ಲಿ […]

ಮುಂದಿನ ಶೈಕ್ಷಣಿಕ ವರ್ಷದಿಂದ ಪ.ಪೂ ವಿದ್ಯಾರ್ಥಿಗಳಿಗೆ ಸಮವಸ್ತ್ರ ಕಡ್ಡಾಯ

ಬೆಂಗಳೂರು: ರಾಜ್ಯದಲ್ಲಿ ನಡೆದ ಹಿಜಾಬ್‌ ಗದ್ದಲದಿಂದಾಗಿ 2022-23 ಸಾಲಿನ ಶೈಕ್ಷಣಿಕ ವರ್ಷದಲ್ಲಿ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ಸಮವಸ್ತ್ರವನ್ನು ಕಡ್ಡಾಯಗೊಳಿಸಲು ಪ.ಪೂ ಶಿಕ್ಷಣ ಇಲಾಖೆ ನಿರ್ಧರಿಸಿದೆ. ಸೋಮವಾರ ಬಿಡುಗಡೆ ಮಾಡಲಾದ ಇಲಾಖೆಯ ಪ್ರವೇಶ ಮಾರ್ಗಸೂಚಿಯಲ್ಲಿ ಸಮವಸ್ತ್ರದ ಬಗ್ಗೆ ಇದೇ ಮೊದಲ ಬಾರಿಗೆ ಉಲ್ಲೇಖಿಸಲಾಗಿದೆ. ಮಾರ್ಗಸೂಚಿಗಳಲ್ಲಿ ತಿಳಿಸಿರುವಂತೆ ಪದವಿ ಪೂರ್ವ ವಿಶ್ವವಿದ್ಯಾಲಯದ ಮೊದಲನೇ ಮತ್ತು ಎರಡನೇ ವರ್ಷದ ವಿದ್ಯಾರ್ಥಿಗಳು ಸಂಬಂಧಪಟ್ಟ ಕಾಲೇಜು ಅಭಿವೃದ್ಧಿ ಸಮಿತಿಗಳು(ಸಿಡಿಸಿ) ಸೂಚಿಸಿದ ಏಕರೂಪದ ಮಾನದಂಡಗಳಿಗೆ ಬದ್ದರಾಗಿರಬೇಕು. ಇಲಾಖೆಯ ಸೂಚನೆಗಳ ಪ್ರಕಾರ, ವಿದ್ಯಾರ್ಥಿಗಳು ಹಿಜಾಬ್ ಕುರಿತು […]

ಇ-ಸ್ಯಾಂಡ್ ಆ್ಯಪ್ ಮೂಲಕ ಸಾರ್ವಜನಿಕರಿಗೆ ಮರಳು ಪೂರೈಕೆ

ಉಡುಪಿ: ಗಣಿ ಮತ್ತು ಭೂವಿಜ್ಞಾನ ಇಲಾಖೆಯ ವತಿಯಿಂದ ಜಿಲ್ಲಾ ವ್ಯಾಪ್ತಿಯಲ್ಲಿ ಸಿ.ಆರ್.ಝಡ್ ಮತ್ತು ನಾನ್ ಸಿ.ಆರ್.ಝಡ್ ಪ್ರದೇಶದ ನದಿ ಪಾತ್ರಗಳಲ್ಲಿ ಮರಳು ತೆರವುಗೊಳಿಸುವ ಕಾರ್ಯ ಕೈಗೊಂಡಿರುವ ಹಿನ್ನೆಲೆ, ಉಡುಪಿ ಇ-ಸ್ಯಾಂಡ್ ಆ್ಯಪ್ ಮೂಲಕ ಮರಳನ್ನು ಸಾರ್ವಜನಿಕರಿಗೆ ಹಾಗೂ ಅಭಿವೃದ್ಧಿ ಕಾಮಗಾರಿಗಳಿಗೆ ಪೂರೈಸಲಾಗುತ್ತಿದೆ. ಪ್ರಸ್ತುತ ಮರಳು ಸಾಗಾಣಿಕೆ ಕುರಿತು ಸಾರ್ವಜನಿಕರಿಂದ ದೂರುಗಳು ಸ್ವೀಕೃತವಾಗಿರುವ ಹಿನ್ನೆಲೆ, ತಾತ್ಕಾಲಿಕ ಮರಳು ಪರವಾನಿಗೆದಾರರು, ಮರಳು ಗುತ್ತಿಗೆದಾರರು, ವಾಹನ ಮಾಲೀಕರು ಹಾಗೂ ಚಾಲಕರು ರೇನ್ ಟಿ4ಯು ಜಿ.ಪಿ.ಎಸ್ ಸಂಸ್ಥೆಯಿಂದ ಯೂಸರ್ ಐಡಿ ಮತ್ತು ಪಾಸ್‌ವರ್ಡ್ […]