ಮಾಸ್ಟರ್ ಪ್ರಥಮ್ ಕಾಮತ್ ಕಟಪಾಡಿಗೆ ಸಂಗಮ ರತ್ನ ರಾಷ್ಟ್ರೀಯ ಪ್ರಶಸ್ತಿ

ಉಡುಪಿ: ಡಾ. ಶಿವಕುಮಾರ ಸ್ವಾಮೀಜಿಯವರ ಜಯಂತಿಯ ಅಂಗವಾಗಿ ಸಂಗಮ ಸಮಾವೇಶ ಸಮಾರಂಭ ಮತ್ತು ಜನಸ್ಪಂದನ ಪತ್ರಿಕೆಯ 13ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ನೀಡಲಿರುವ ಸಂಗಮ ರತ್ನ ರಾಷ್ಟ್ರೀಯ ಪ್ರಶಸ್ತಿಗಾಗಿ ಬಹುಮುಖ ಪ್ರತಿಭೆ ಮಾ. ಪ್ರಥಮ್ ಕಾಮತ್ ಕಟಪಾಡಿ ಇವರು ಆಯ್ಕೆಯಾಗಿರುತ್ತಾರೆ. ಮೇ 22 ರಂದು ಬೆಂಗಳೂರಿನ ಜೆ. ಪಿ ರಸ್ತೆಯ ಕನ್ನಡ ಭವನದ ನಯನ ಸಭಾಂಗಣದಲ್ಲಿ ಗಣ್ಯರ ಸಮ್ಮುಖದಲ್ಲಿ ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಈ ಸಂದರ್ಭದಲ್ಲಿ ಪ್ರಥಮ್ ಕಾಮತ್ ಕಟಪಾಡಿ ಇವರಿಂದ 75 ನೇ ಜಾದೂ ಪ್ರದರ್ಶನ […]
ವಿಶ್ರಾಂತಿ ಪಡೆಯಲು ಸಮಯವಿಲ್ಲ, 2024 ಕ್ಕೆ ಸಿದ್ಧರಾಗಿ: ಯೋಗಿ ಸಂಪುಟ ಭೇಟಿಯಾದ ಪ್ರಧಾನಿಯಿಂದ ‘ಬುಲ್ಡೋಜರ್ ಅಭಿಯಾನಕ್ಕೆ’ ಶ್ಲಾಘನೆ

ಉತ್ತರ ಪ್ರದೇಶ: ಸೋಮವಾರ ಸಂಜೆ ಲಕ್ನೋನಲ್ಲಿ ಯೋಗಿ ಆದಿತ್ಯನಾಥ್ ಸಂಪುಟದೊಂದಿಗೆ ಚಿಂತನ-ಮಂಥನ ಸಭೆ ನಡೆಸಿದ ಪ್ರಧಾನಿ ಮೋದಿ, ಉತ್ತಮ ಆಡಳಿತದಿಂದ ಮಾತ್ರ ಅಧಿಕಾರದ ಹಾದಿ ಸುಗಮವಾಗುತ್ತದೆ ಎಂದು ಕಿವಿಮಾತು ಹೇಳಿದ್ದಾರೆ. ಯೋಗಿ ಸಂಪುಟದ ಸಚಿವರೊಂದಿಗೆ ಮಾತನಾಡಿದ ಅವರು, ರಾಜ್ಯದ ಎಲ್ಲಾ ಸಚಿವರು ಸಾರ್ವಜನಿಕರ ಸೇವೆಗೆ ಮುಡುಪಾಗಿರಬೇಕು. ವಿಶ್ರಾಂತಿಗೆ ಸಮಯ ಉಳಿದಿಲ್ಲ, 2024 ರಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆಗೆ ಎಲ್ಲರೂ ಸಿದ್ಧತೆಗಳನ್ನು ಪ್ರಾರಂಭಿಸಬೇಕು ಎಂದಿದ್ದಾರೆ ಎಂದು ನ್ಯೂಸ್ 18 ವರದಿ ಮಾಡಿದೆ. ಅಪರಾಧಿಗಳ ವಿರುದ್ಧ ಯೋಗಿ ಆದಿತ್ಯನಾಥ್ ಸರ್ಕಾರದ […]