ಪ್ರಧಾನಿ ಮೋದಿ ಹಿಂದಿನವರಿಗಿಂತ ಭಿನ್ನ; ಅವರು ಭಯೋತ್ಪಾದನೆಯನ್ನು ಕಡೆಗಣಿಸುವುದಿಲ್ಲ ಅಥವಾ ಸಹಿಸುವುದಿಲ್ಲ: ಜೈಶಂಕರ್

ದೆಹಲಿ: ಪ್ರಧಾನಿ ನರೇಂದ್ರ ಮೋದಿ ಭಯೋತ್ಪಾದನೆಯನ್ನು, ವಿಶೇಷವಾಗಿ ಗಡಿಯಾಚೆಗಿನ ಆಕ್ರಾಮಕ ಸ್ವಭಾವವನ್ನು ಸಾಮಾನ್ಯವೆಂದು ಎಂದಿಗೂ ಪರಿಗಣಿಸುವುದಿಲ್ಲವೆಂದು ‘ಸ್ಫಟಿಕದಷ್ಟು ಸ್ಪಷ್ಟವಾಗಿ’ ಹೇಳಿದ್ದಾರೆ. ಈ ನಿರ್ಣಯವು 2014 ರಿಂದ ಈಚೆಗೆ ಪಾಕಿಸ್ತಾನದ ಬಗ್ಗೆ ಭಾರತದ ನೀತಿಯನ್ನು ರೂಪಿಸಿದೆ ಎಂದು ವಿದೇಶಾಂಗ ಸಚಿವ ಎಸ್ ಜೈಶಂಕರ್ ಹೇಳಿದ್ದಾರೆ. “ಮೋದಿ@20: ಡ್ರೀಮ್ಸ್ ಮೀಟ್ ಡೆಲಿವರಿ” ಪುಸ್ತಕದಲ್ಲಿ ಈ ಬಗ್ಗೆ ಬರೆದಿರುವ ಜೈಶಂಕರ್, 2015 ರಲ್ಲಿ ವಿದೇಶಾಂಗ ಕಾರ್ಯದರ್ಶಿಯಾದ ನಂತರ ತಮ್ಮ ‘ಸಾರ್ಕ್ ಯಾತ್ರೆ’ಗೆ ಸಿದ್ಧವಾಗುತ್ತಿರುವಾಗ, ಮೋದಿ ನೀಡಿದ ಸೂಚನೆಗಳನ್ನು ನೆನಪಿಸಿಕೊಂಡಿದ್ದಾರೆ. “ನನ್ನ ಅನುಭವ […]
ಬಾಲರೋಗ ಮತ್ತು ಪ್ರಸೂತಿತಂತ್ರ ಸ್ತ್ರೀ ರೋಗಗಳ ಉಚಿತ ತಪಾಸಣೆ ಹಾಗೂ ಮಾಹಿತಿ ಶಿಬಿರ

ಮಣಿಪಾಲ: ಮಣಿಪಾಲದ ಇಂಡಸ್ಟ್ರಿಯಲ್ ಏರಿಯಾದಲ್ಲಿರುವ ಮುನಿಯಾಲು ಆಯುರ್ವೇದ ಕಾಲೇಜು ಮತ್ತುಆಸ್ಪತ್ರೆಯ ಬಾಲರೋಗ ಮತ್ತು ಪ್ರಸೂತಿ ತಂತ್ರ ಸ್ತ್ರೀ ರೋಗ ವಿಭಾಗದ ವತಿಯಿಂದ ಮೇ 23 ರಿಂದ 28 ರವರೆಗೆ ಪೂರ್ವಾಹ್ನ9.00 ರಿಂದ ಅಪರಾಹ್ನ4.00 ಘಂಟೆಯವರೆಗೆ ಮಕ್ಕಳ ಮತ್ತು ಸ್ತ್ರೀ ರೋಗಗಳ ಉಚಿತ ತಪಾಸಣೆ, ಹಾಗೂ ಮಾಹಿತಿ ಶಿಬಿರ ನಡೆಯಲಿರುವುದು. ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆಯಬೇಕೆಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.
‘ಒಂದು ಕುಟುಂಬ ಒಂದು ಟಿಕೆಟ್’ ಗೆ ಜೈ ಎಂದ ಕಾಂಗ್ರೆಸ್: ಚಿಂತನ ಶಿಬಿರದಲ್ಲಿ ಪಕ್ಷ ಪುನಶ್ಚೇತನದ ಮಂಥನ?

ಉದಯಪುರ: ಮೂರು ದಿನಗಳ ನವ ಸಂಕಲ್ಪ ಶಿಬಿರದ ಸಮಾರೋಪದಲ್ಲಿ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯು ಭಾನುವಾರ ಉದಯಪುರದಲ್ಲಿ ‘ಒಂದು ಕುಟುಂಬ ಒಂದು ಟಿಕೆಟ್’ ಘೋಷಣೆಯನ್ನು ಅಂಗೀಕರಿಸಿತು. ಪಕ್ಷದ ಪ್ರಧಾನ ಕಾರ್ಯದರ್ಶಿ ಅಜಯ್ ಮಾಕನ್ ಘೋಷಣೆಯನ್ನು ವಾಚಿಸಿದರು. ಘೋಷಣೆಯನ್ನು ಓದಿದ ಮಾಕನ್, ಕಾಂಗ್ರೆಸ್ ಎಲ್ಲಾ ಸಮಾನ ಮನಸ್ಕ ಪಕ್ಷಗಳನ್ನು ತಲುಪುತ್ತದೆ ಮತ್ತು ಮೈತ್ರಿಗೆ ಮುಕ್ತವಾಗಿದೆ ಎಂದು ಹೇಳಿದರು. ಪಕ್ಷ ಪುನಶ್ಚೇತನಕ್ಕಾಗಿ ಕಾಂಗ್ರೆಸ್ ಪಕ್ಷವು ಮೂರು ಹೊಸ ಇಲಾಖೆಗಳನ್ನು ಸ್ಥಾಪಿಸಲು ನಿರ್ಧರಿಸಿದೆ. ಮೊದಲನೆಯದ್ದು ಸಾರ್ವಜನಿಕ ಒಳನೋಟ, ಎರಡನೆಯದ್ದು ಚುನಾವಣಾ ನಿರ್ವಹಣೆ ಮತ್ತು […]