ಇಮ್ಮಡಿ ದೇವರಾಯನ ಕಾಲದ ಶಿಲಾ ಶಾಸನ ಪತ್ತೆ

ಕುಂದಾಪುರ: ಕಲ್ಯಾಣಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೂಡುತೋನ್ಸೆ ಗ್ರಾಮದ ಕೆಮ್ಮಣ್ಣು ಮತ್ತು ನಡಂಬಳ್ಳಿ ನಡುವಿನ ಮೂಡಲಕಟ್ಟೆಯಲ್ಲಿ ವಿಜಯನಗರ ಸಾಮ್ರಾಜ್ಯದ ರಾಜ ಇಮ್ಮಡಿ ದೇವರಾಯನ ಕಾಲದ ಶಿಲಾ ಶಾಸನ ಪತ್ತೆಯಾಗಿದೆ. ಮೂರು ಅಡಿ ಎತ್ತರ ಮತ್ತು ಎರಡು ಅಡಿ ಅಗಲವಿರುವ, ಸಂಪೂರ್ಣವಾಗಿ ಸವೆದು ಹೋಗಿರುವ ಸ್ಥಿತಿಯಲ್ಲಿರುವ ಗ್ರಾನೈಟ್ ಕಲ್ಲಿನಿಂದ ಮಾಡಲ್ಪಟ್ಟಿರುವ ಈ ಶಾಸನವನ್ನು ಕನ್ನಡ ಭಾಷೆಯಲ್ಲಿ ಬರೆಯಲಾಗಿದೆ. ಒಟ್ಟು 24 ಸಾಲುಗಳಿವೆ. ಶಾಸನವು ‘ಶ್ರೀ ಗಣಾಧಿಪತಯೇ ನಮಃ’ ಶ್ಲೋಕದಿಂದ ಪ್ರಾರಂಭವಾಗುತ್ತದೆ ಮತ್ತಿದು ಕ್ರಿ.ಶ 1353 ಅಥವಾ 1431 ವರ್ಷಗಳ […]

ಅಸ್ಥಿಪಂಜರವಾಗಿ ಪತ್ತೆಯಾದ 9 ತಿಂಗಳ ಹಿಂದೆ ನಾಪತ್ತೆಯಾದವ! ಸಾವಿನ ಸುತ್ತ ಸಂಶಯದ ಹುತ್ತ?

ಪೆರ್ಡೂರು: 9 ತಿಂಗಳ ಹಿಂದೆ ನಾಪತ್ತೆಯಾಗಿದ್ದ ಪೆರ್ಡೂರು ಗ್ರಾಮದ ಪಕ್ಕಾಲು ಜಯಲಕ್ಷ್ಮೀ ಮನೆ ನಿವಾಸಿ 30 ವರ್ಷದ ನಾಗರಾಜ ಆಚಾರ್ಯ ಎಂಬವರ ಮೃತದೇಹವು ಅಸ್ಥಿಪಂಜರದ ಸ್ಥಿತಿಯಲ್ಲಿ‌ ಮನೆಯ ಸಮೀಪದ ಚೌಂಡಿ ನಗರದ ಕೇಶವ ಹೆಗ್ಡೆ ಅವರ ಹಾಡಿಯಲ್ಲಿ ಮೇ.7ರಂದು ಸಂಜೆ ಪತ್ತೆಯಾಗಿದೆ. ನಾಗರಾಜ ಆಚಾರ್ಯ 2021ರ ಆಗಸ್ಟ್ 11ರ ಬೆಳಿಗ್ಗೆ 8.30ರಿಂದ ಮನೆಯಿಂದ ಕಾಣೆಯಾಗಿದ್ದರು. ಮನೆಯವರು ಸಾಕಷ್ಟು ಹುಡುಕಾಡಿದರೂ ನಾಗರಾಜ ಪತ್ತೆಯಾಗಿರಲಿಲ್ಲ. ಈ ಬಗ್ಗೆ ಹಿರಿಯಡಕ ಠಾಣೆಯಲ್ಲಿ ನಾಪತ್ತೆ ಪ್ರಕರಣ ಕೂಡ ದಾಖಲಾಗಿತ್ತು. ನಿನ್ನೆ ಸಂಜೆ ಮೃತನ ಸಹೋದರ […]

ಬೆಂಗಳೂರಿನ ಕೆಂಗೇರಿಯಲ್ಲಿ ಬಸ್ ಅಫಘಾತ: 29 ಪ್ರಯಾಣಿಕರು ಗಾಯಾಳು

ಬೆಂಗಳೂರು: ಕೆಂಗೇರಿಯ ಮೈಸೂರು ರಸ್ತೆಯಲ್ಲಿ ಭಾನುವಾರ ರಾತ್ರಿ ಕೆಎಸ್‌ಆರ್‌ಟಿಸಿ ಬಸ್ ಅಪಘಾತಕ್ಕೀಡಾಗಿ 29 ಜನರು ಗಾಯಗೊಂಡಿದ್ದಾರೆ ಎಂದು ಪಶ್ಚಿಮ ಬೆಂಗಳೂರಿನ ಡಿಸಿಪಿ ಡಾ ಸಂಜೀವ್ ಪಾಟೀಲ್ ಸುದ್ದಿ ಸಂಸ್ಥೆ ಎ ಎನ್ ಐ ಗೆ ತಿಳಿಸಿದ್ದಾರೆ. ಪ್ರಯಾಣಿಕರಲ್ಲಿ ನಾಲ್ಕು ಜನರಿಗೆ ಗಂಭೀರ ಗಾಯಗಳಾಗಿದ್ದರೆ, ಉಳಿದವರು ಸಣ್ಣ ಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬಸ್ ನಲ್ಲಿ 45 ಮಂದಿ ಪ್ರಯಾಣಿಕರಿದ್ದು ಮಡಿಕೇರಿಯಿಂದ ಬೆಂಗಳೂರಿಗೆ ವಾಪಸ್ಸಾಗುತ್ತಿದ್ದರು. Karnataka | 25 people received minor injuries and 4 were […]

ಸರ್ಟಿಫಿಕೇಟ್ ಇನ್ ಲೈಬ್ರರಿ ಸೈನ್ಸ್ ತರಬೇತಿ: ಅರ್ಜಿ ಆಹ್ವಾನ

ಉಡುಪಿ: ಸಾರ್ವಜನಿಕ ಗ್ರಂಥಾಲಯ ಇಲಾಖೆಯ ವತಿಯಿಂದ ಮಂಗಳೂರಿನ ನಗರ ಕೇಂದ್ರ ಗ್ರಂಥಾಲಯದಲ್ಲಿ ನಾಲ್ಕು ತಿಂಗಳ ಅವಧಿಯ ಸರ್ಟಿಫಿಕೇಟ್ ಇನ್ ಲೈಬ್ರರಿ ಸೈನ್ಸ್ ತರಬೇತಿಗೆ ಅರ್ಜಿ ಆಹ್ವಾನಿಸಲಾಗಿದೆ. ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೇ. 40 ಅಂಕಗಳೊಂದಿಗೆ ತೇರ್ಗಡೆಯಾದ ಸಾಮಾನ್ಯ ಅಭ್ಯರ್ಥಿಗಳು ಹಾಗೂ ಪರಿಶಿಷ್ಟ ಜಾತಿ ಮತ್ತು ಪಂಗಡದ ಶೇ. 35 ರಷ್ಟು ಅಂಕಗಳೊಂದಿಗೆ ಉತ್ತೀರ್ಣರಾದ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ತರಬೇತಿಗಾಗಿ ಅರ್ಜಿ ಸಲ್ಲಿಸಲು ಇಚ್ಛಿಸುವ ಇಲಾಖೆಯ ಡಿ ದರ್ಜೆಯ ಗ್ರಂಥಾಲಯ ಸಹವರ್ತಿಗಳು ಹಾಗೂ ಗ್ರಾಮ ಪಂಚಾಯತಿ ಗ್ರಂಥಾಲಯಗಳ ಮೇಲ್ವಿಚಾರಕರು […]