ಸಾಲ ವಾಪಸು ಕೇಳಿದ್ದಕ್ಕೆ ಕೊಲೆ ಬೆದರಿಕೆ

ಉಡುಪಿ: ವ್ಯವಹಾರಕ್ಕೆ ನೀಡಿರುವ ಸಾಲವನ್ನು ವಾಪಸು ಕೇಳಿದ್ದಕ್ಕೆ ವ್ಯಕ್ತಿಗೆ ಅವಾಚ್ಯ ಶಬ್ದಗಳಿಂದ ಬೈದು ಕೊಲೆ ಬೆದರಿಕೆ ಹಾಕಿರುವ ಘಟನೆ ಉಡುಪಿ ತಾಲೂಕಿನ ಬ್ರಹ್ಮಗಿರಿಯಲ್ಲಿ ನಡೆದಿದೆ. ಈ ಬಗ್ಗೆ ಬ್ರಹ್ಮಗಿರಿ ನಾಯರ್‌ಕೆರೆ ನಿವಾಸಿ 70 ವರ್ಷದ ಪ್ರೇಮಾನಂದ ಶೆಟ್ಟಿ ಪೊಲೀಸರಿಗೆ ದೂರು ನೀಡಿದ್ದಾರೆ. ಇವವರಿಗೆ ಪರಿಚಯಸ್ಥನಾಗಿದ್ದ ಸ್ಯಾಮುವೆಲ್ ರಿಜೋಯ್‌ ಆನಂದ ಯಾನೆ ಸ್ಯಾಮುವೆಲ್ ಡಿ’ಸೋಜ ವಂಚನೆ ಎಸಗಿರುವ ಆರೋಪಿ. ಪ್ರೇಮಾನಂದ ಅವರು 2019ರಲ್ಲಿ ಆರೋಪಿಗೆ ವ್ಯವಹಾರದ ಉದ್ದೇಶಕ್ಕೆ 3.50 ಲಕ್ಷ ರೂ. ಹಣವನ್ನು ಸಾಲದ ರೂಪದಲ್ಲಿ ಕೊಟ್ಟಿದ್ದರು. ಹಣವನ್ನು […]

ದೈವಸ್ಥಾನದ ಬಾಗಿಲು ಮುರಿದು ದೈವದ ಸೊತ್ತು ಕಳವು: ದೂರು ದಾಖಲು

ಉಡುಪಿ: ದೈವಸ್ಥಾನದ ಬಾಗಿಲು ಮುರಿದು ಒಳಪ್ರವೇಶಿಸಿದ ಕಳ್ಳರು ಸಾವಿರಾರು ರೂ. ಮೌಲ್ಯದ ಸೊತ್ತುಗಳನ್ನು ಕಳವು ಮಾಡಿರುವ ಘಟನೆ ಉಡುಪಿ ತಾಲೂಕಿನ ಹಿರೇಬೆಟ್ಟು ಗ್ರಾಮದ ಬಾಳ್ಕಟ್ಟು ಬೀಡು ಎಂಬಲ್ಲಿ ಮೇ.6ರಂದು ಬೆಳಕಿಗೆ ಬಂದಿದೆ. ಬ್ರಹ್ಮಗಿರಿಯ ಪೃಥ್ವಿರಾಜ ಬಿ ಶೆಟ್ಟಿ ಎಂಬವರ ಕುಟುಂಬದ ಬಾಳ್ಕಟ್ಟು ಬೀಡು ಮನೆಯ ಆವರಣದಲ್ಲಿರುವ  ದೈವದ ಮನೆಯಲ್ಲಿ ಕಳ್ಳತನ ನಡೆದಿದೆ. ಯಾರೋ ಕಳ್ಳರು ದೈವದ ಮನೆಯ ಚಿಲಕ‌ ಮುರಿದು ಒಳ ಪ್ರವೇಶಿಸಿ 51 ಸಾವಿರ ರೂ. ಮೌಲ್ಯದ ದೈವದ ಪಂಚ ಲೋಹದ ಹಾಗೂ ಹಿತ್ತಾಳೆಯ ಸೊತ್ತುಗಳನ್ನು […]

ಅತಿಯಾದ ಮದ್ಯ ಸೇವನೆ ವ್ಯಕ್ತಿ ಸಾವು

ಕುಂದಾಪುರ: ಅಂಪಾರು ಗ್ರಾಮದಲ್ಲಿ ಅತಿಯಾದ ಮದ್ಯ ಸೇವನೆಯಿಂದ ಹಠಾತ್ ಆಗಿ ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಕುಂದಾಪುರ ತಾಲೂಕಿನ ಅಂಪಾರು ಗ್ರಾಮದಲ್ಲಿ ಮೇ. 6 ರಂದು ಸಂಜೆ ನಡೆದಿದೆ. ಮೃತರನ್ನು ಅಂಪಾರು ಗ್ರಾಮದ ನಿವಾಸಿ 40 ವರ್ಷದ ರಾಘವೇಂದ್ರ ಎಂದು ಗುರುತಿಸಲಾಗಿದೆ. ಇವರು ವಿಪರೀತ ಮದ್ಯಪಾನ ಮಾಡುವ ಚಟ ಹೊಂದಿದ್ದರು. ಅತಿಯಾದ ಮದ್ಯಪಾನ ಹಾಗೂ ಸರಿಯಾಗಿ ಆಹಾರ ಸೇವನೆ ಮಾಡದೆ ದೈಹಿಕವಾಗಿ ಬಳಲಿದ್ದರು. ಇದೇ ಕಾರಣದಿಂದ ಮೇ. 6 ರಂದು ಸಂಜೆ ಹಠಾತ್ ಆಗಿ ಮೃತಪಟ್ಟಿದ್ಧಾರೆ. ಈ ಸಂಬಂಧ […]

ಸಾಣೂರು ಗ್ರಾಮದಲ್ಲಿ ಬೆಂಕಿ ಆಕಸ್ಮಿಕ‌; ಗಾಯಾಳು ವೃದ್ಧೆ ಸಾವು

ಕಾರ್ಕಳ: ಒಲೆಯಲ್ಲಿ ತಿಂಡಿ ಮಾಡುತ್ತಿರುವಾಗ ಆಕಸ್ಮಿಕವಾಗಿ ಬೆಂಕಿ ತಗುಲಿ‌ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಹಿಳೆಯೊಬ್ಬರು ಚಿಕಿತ್ಸೆ ಫಲಿಸದೆ ಮೃತಪಟ್ಟ ಘಟನೆ ಕಾರ್ಕಳ ತಾಲೂಕಿನ ಸಾಣೂರು ಗ್ರಾಮದಲ್ಲಿ ಶನಿವಾರ ಮಧ್ಯಾಹ್ನ ನಡೆದಿದೆ. ಸಾಣೂರು ಗ್ರಾಮದ ನಿವಾಸಿ 71 ವರ್ಷದ ಸುಮತಿ ಶೆಟ್ಟಿ ಮೃತ ದುರ್ದೈವಿ. ಇವರು ಏ.4ರಂದು ಬೆಳಿಗ್ಗೆ ಅಡುಗೆ ಮನೆಯಲ್ಲಿ ಕಟ್ಟಿಗೆ ಓಲೆಯಲ್ಲಿ ತಿಂಡಿ ಮಾಡುತ್ತಿರುವಾಗ ಆಕಸ್ಮಿಕವಾಗಿ ಸೀರೆಯ ಸೆರಗಿಗೆ ಬೆಂಕಿ ತಗಲಿತ್ತು. ಇದರಿಂದ ಗಂಭೀರವಾಗಿ ಗಾಯಗೊಂಡವರನ್ನು ಆಳ್ವಾಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಅಲ್ಲಿ […]

ಮಾಹೆ: ‘ವಚನಗಳನ್ನು ಓದು’- ಪ್ರೊ.ರಾಜೇಂದ್ರ ಚೆನ್ನಿ ಅವರಿಂದ ವಿಶೇಷ ಉಪನ್ಯಾಸ

ಮಣಿಪಾಲ: ಹನ್ನೆರಡನೇ ಶತಮಾನದ ಶರಣ ಚಳವಳಿಯ ‘ನವ ರಾಜಕಾರಣ’ ಕರ್ನಾಟಕದಲ್ಲಿ ಅಪೂರ್ವವಾದ ವಚನ ಸಾಹಿತ್ಯಕ್ಕೆ ನಾಂದಿಯಾಗಿ ‘ನವ ಕಾವ್ಯಮೀಮಾಂಸೆ’ಯ ಹುಟ್ಟಿಗೆ ಕಾರಣವಾಯಿತು ಎಂದು ಖ್ಯಾತ ಸಂಸ್ಕೃತಿ ವಿಮರ್ಶಕ ಪ್ರೊ.ರಾಜೇಂದ್ರ ಚೆನ್ನಿ ಅವರು ನುಡಿದರು. ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್ ಆಶ್ರಯದಲ್ಲಿ ‘ವಚನಗಳನ್ನು ಓದು’ ಕುರಿತು ವಿಶೇಷ ಉಪನ್ಯಾಸ ನೀಡಿದ ಪ್ರೊ.ಚೆನ್ನಿ, ಶರಣ ಚಳವಳಿಯ ಸಂದರ್ಭದಲ್ಲಿ ವಿವಿಧ ವೃತ್ತಿ ಮತ್ತು ಸಾಮಾಜಿಕ ಸ್ತರಗಳಿಗೆ ಸೇರಿದ ಪುರುಷ ಮತ್ತು ಮಹಿಳೆಯರು ಕಾವ್ಯಗಳನ್ನು ರಚಿಸಿ ಆ […]