ಬಡಾ ಎರ್ಮಾಳಿನಲ್ಲಿ ಉದ್ಯೋಗ ಕಳೆದುಕೊಂಡ ಚಿಂತೆಯಲ್ಲಿದ್ದ ವ್ಯಕ್ತಿ ನೇಣಿಗೆ ಶರಣು
ಸುಮಾರು 10 ತಿಂಗಳ ಹಿಂದೆ ಕೆಲಸ ಕಳೆದುಕೊಂಡು ಊರಿಗೆ ಬಂದಿದ್ದ ವ್ಯಕ್ತಿಯೋರ್ವ ಅದೇ ಚಿಂತೆಯಲ್ಲಿ ಮನನೊಂದು ಮನೆಯ ಟಾರಸಿನ ಮೇಲಿನ ಕಬ್ಬಿಣದ ಪಕ್ಕಾಸಿಗೆ ಸೀರೆ ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಾಪು ತಾಲೂಕಿನ ಬಡಾ ಎರ್ಮಾಳು ಗ್ರಾಮದ ಸಾಲ್ಯಾನ್ ಮೂಲಸ್ಥಾನದ ಬಳಿ ಇಂದು ಮುಂಜಾನೆ ಬೆಳಕಿಗೆ ಬಂದಿದೆ. ಬಡಾ ಎರ್ಮಾಳು ಗ್ರಾಮದ ಸಾಲ್ಯಾನ್ ಮೂಲಸ್ಥಾನದ ಬಳಿಯ ನಿವಾಸಿ 27 ವರ್ಷದ ಸಾಗರ್ ಕರ್ಕೇರ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಈತ ಸುಮಾರು ಎರಡು ವರ್ಷಗಳ ಹಿಂದೆ ಮುಂಬೈ ಎಲ್ […]
16 ವರ್ಷದೊಳಗಿನ ಮಕ್ಕಳಿಗೆ ಮೇ 8 ರಂದು ಮುನಿಯಾಲು ಸ್ವರ್ಣಪ್ರಾಶನ
ಕಾರ್ಕಳ: ಮಕ್ಕಳ ಸ್ವಾಸ್ಥ್ಯ ರಕ್ಷಣೆ ಹಾಗೂ ವ್ಯಾಧಿ ಕ್ಷಮತೆಯ ಅಭಿವೃದ್ಧಿಗಾಗಿ ಮುನಿಯಾಲು ಆಯುರ್ವೇದ ಸಂಶೋಧನಾ ಸಂಸ್ಥೆಯಿಂದ ವಿಶೇಷವಾಗಿ ಸಂಶೋಧಿಸಲ್ಪಟ್ಟ ಹಿರಣ್ಯಪ್ರಾಶನದ ಬಿಂದುಗಳನ್ನು 16 ವರ್ಷದೊಳಗಿನ ಮಕ್ಕಳಿಗೆ ಈ ತಿಂಗಳ ಪುಷ್ಯ ನಕ್ಷತ್ರವಾದ ಮೇ 8 ರಂದು ನೀಡಲಾಗುತ್ತಿದೆ. ಈ ಕಾರ್ಯಕ್ರಮ ಸಾಕಷ್ಟು ಜನಪ್ರಿಯವಾಗುತ್ತಿದ್ದು ಹೆಚ್ಚು ಹೆಚ್ಚು ಮಕ್ಕಳು ಇದರ ಪ್ರಯೋಜನವನ್ನು ಪಡೆದುಕೊಂಡು ಆರೋಗ್ಯವಂತರಾಗಬೇಕೆಂಬ ಸದುದ್ದೇಶದಿಂದ ಮಣಿಪಾಲದ ಮುನಿಯಾಲು ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆ, ಮುನಿಯಾಲು ಆಯುರ್ವೇದ ಕುಟುಂಬ ಚಿಕಿತ್ಸಾಲಯದ ಶಾಖೆಗಳಾದ ಉಡುಪಿಯ ಅಜ್ಜರಕಾಡು, ಮಂಗಳೂರಿನ ಕದ್ರಿ ಮಲ್ಲಿಕಟ್ಟೆಯ […]
ಶ್ರೀಕೃಷ್ಣಮಠಕ್ಕೆ ಭೇಟಿ ನೀಡಿದ ಅರಣ್ಯ ಸಚಿವ ಉಮೇಶ್ ಕತ್ತಿ
ಉಡುಪಿ: ಶ್ರೀಕೃಷ್ಣಮಠಕ್ಕೆ ಕರ್ನಾಟಕ ರಾಜ್ಯ ಅರಣ್ಯ ಇಲಾಖೆ ಸಚಿವ ಉಮೇಶ್ ಕತ್ತಿ ಆಗಮಿಸಿ ದೇವರ ದರ್ಶನ ಪಡೆದು, ಪರ್ಯಾಯ ಕೃಷ್ಣಾಪುರ ಮಠಾಧೀಶರಾದ ಶ್ರೀವಿದ್ಯಾಸಾಗರತೀರ್ಥ ಶ್ರೀಪಾದರಿಂದ ಅನುಗ್ರಹ ಮಂತ್ರಾಕ್ಷತೆ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಉಡುಪಿ ಶಾಸಕರಾದ ರಘುಪತಿ ಭಟ್ ಹಾಗೂ ಪರ್ಯಾಯ ಮಠದ ದಿವಾನರಾದ ವರದರಾಜ ಭಟ್ ಮೊದಲಾದವರು ಉಪಸ್ಥಿತರಿದ್ದರು.
ಕೈ ಗೆ ಬೈ ಬೈ ಎಂದ ಪ್ರಮೋದ್ ಮಧ್ವರಾಜ್: ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ ಮಾಜಿ ಸಚಿವ
ಉಡುಪಿ: ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಮೇ 7 ಶನಿವಾರದಂದು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಅಧಿಕೃತವಾಗಿ ರಾಜೀನಾಮೆ ನೀಡುವ ಮೂಲಕ ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ. ”ಕಾಂಗ್ರೆಸ್ ಪಕ್ಷದಲ್ಲಿ ಮುಂದುವರಿಯಲು ಮತ್ತು ಇತ್ತೀಚೆಗೆ ನನಗೆ ನೀಡಲಾದ ಹೊಸ ಹುದ್ದೆಗೆ ನ್ಯಾಯ ಒದಗಿಸಲು ಅಸಾಧ್ಯವಾಗುವ ಹಂತಕ್ಕೆ ತಲುಪಿದ್ದೇನೆ. ಹೀಗಾಗಿ ಕೆಪಿಸಿಸಿ ಉಪಾಧ್ಯಕ್ಷ ಸ್ಥಾನವನ್ನು ಸ್ವೀಕರಿಸದಿರಲು ಹಾಗೂ ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ್ದೇನೆ. ಕಳೆದ ಮೂರು ವರ್ಷಗಳಿಂದ ಉಡುಪಿ ಜಿಲ್ಲಾ ಕಾಂಗ್ರೆಸ್ ಪಕ್ಷದಲ್ಲಿ ರಾಜಕೀಯ […]
ಮಾಜಿ ಸೈನಿಕರಿಗೆ ವೃತ್ತಿಪರ ಕೌಶಲ್ಯ ತರಬೇತಿ
ಉಡುಪಿ: ಐ.ಸಿ.ಐ.ಸಿ.ಐ ಅಕಾಡೆಮಿ ಫಾರ್ ಸ್ಕಿಲ್ಸ್, ಬೆಂಗಳೂರು ಇವರ ವತಿಯಿಂದ ಮಾಜಿ ಸೈನಿಕರು ಮತ್ತು ಅವರನ್ನು ಅವಲಂಬಿಸಿದವರಿಗೆ ಉಚಿತವಾಗಿ ವೃತ್ತಿಪರ ಕೌಶಲ್ಯ ತರಬೇತಿ ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಸಂಸ್ಥೆಯು ಅಡ್ಜ್ಯೂಟಂಟ್ ಜನರಲ್ಸ್ ಬ್ರಾಂಚ್, ಐ.ಹೆಚ್.ಕ್ಯೂ (ಆರ್ಮಿ), ನವದೆಹಲಿ ಇದರೊಂದಿಗೆ ತಿಳುವಳಿಯ ಸ್ಮರಣಿಕೆಯನ್ನು ಹೊಂದಿದ್ದು, ಈ ಮೂಲಕ ಯುವಜನರನ್ನು ಉದ್ಯೋಗಿಗಳನ್ನಾಗಿ ಮಾಡಲು ಉದ್ಯಮಕ್ಕೆ ಸಂಬಂಧಿತ ಸಿದ್ಧಾಂತ ಹಾಗೂ ಪ್ರಾಯೋಗಿಕ ತರಬೇತಿಯನ್ನು ಒದಗಿಸುತ್ತದೆ. ತರಬೇತಿ ಪಡೆಯಲು ಇಚ್ಛಿಸುವ ಮಾಜಿ ಸೈನಿಕರು ಮತ್ತು ಅವರ ಅವಲಂಬಿತರು ಹೆಚ್ಚಿನ ಮಾಹಿತಿಗಾಗಿ ಜಂಟಿ ನಿರ್ದೇಶಕರ […]