ಬೀದಿ ನಾಟಕದ ಮೂಲಕ ‘ಮೆಟಡೋರ್’ ಸಿನಿಮಾ ಟ್ರೇಲರ್ ಬಿಡುಗಡೆ

ಚಿಕ್ಕಮಗಳೂರು: ನಗರದ ಆಜಾದ್‌ಪಾರ್ಕ್ ನಲ್ಲಿ ವಿಭಿನ್ನವಾಗಿ ಬೀದಿ ನಾಟಕದ ಮೂಲಕ ಜಿಲ್ಲೆಯ ಸ್ಥಳೀಯ ನಿವಾಸಿಯೊಬ್ಬರು ನಿರ್ಮಾಣ ಮಾಡಿರುವ ‘ಮೆಟ ಡೋರ್’ ಸಿನಿಮಾದ ಟ್ರೇಲರ್ ಅನ್ನು ಮಾಜಿ ವಿಧಾನ ಪರಿಷತ್ ಸದಸ್ಯೆ ಎ.ವಿ.ಗಾಯತ್ರಿ ಶಾಂತೇಗೌಡ ಬುಧವಾರ ಬಿಡುಗಡೆಗೊಳಿಸಿದರು. ನಂತರ ಮಾತನಾಡಿದ ಅವರು ಸಖರಾಯಪಟ್ಟಣದ ನಿವಾಸಿಯಾದ ಕಿರಣ್ ಅವರು ನಾಯಕ ನಟನಾಗಿ ಹಾಗೂ ಚಿತ್ರದ ನಿರ್ಮಾಣದ ಜವಾಬ್ದಾರಿ ಹೊತ್ತು ಮೆಟಡೋರ್ ಎಂಬ ಸಿನಿಮಾವನ್ನು ನಿರ್ಮಿಸಿದ್ದಾರೆ. ಸಿನಿಮಾದಲ್ಲಿ ಸಾಮಾಜಿಕ ಕಳಕಳಿಯುಳ್ಳ ಸಂದೇಶಗಳನ್ನು ಅಳವಡಿಸಲಾಗಿದ್ದು ಚಿತ್ರ ಉತ್ತಮ ರೀತಿಯಲ್ಲಿ ಮೂಡಿ ಬರಲಿದೆ ಎಂದರು. […]
ಶ್ರೀ ದೊಡ್ಡಮ್ಮದೇವಿ ಪ್ರಾಣ ಪ್ರತಿಷ್ಟಾಪನಾ ಮಹೋತ್ಸವ

ಚಿಕ್ಕಮಗಳೂರು: ಬುಧವಾರದಂದು ನಗರದ ದಂಟರಮಕ್ಕಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀ ದೊಡ್ಡಮ್ಮದೇವಿ ದೇವಾಲಯದ ಪ್ರವೇಶೋತ್ಸವ ಹಾಗೂ ಶಿಲಾಮೂರ್ತಿ ಪುನಃ ಪ್ರಾಣ ಪ್ರತಿಷ್ಠಾಪನಾ ಮಹೋತ್ಸವವು ನೂರಾರು ಗ್ರಾಮಸ್ಥರೊಂದಿಗೆ ಶ್ರದ್ದಾಭಕ್ತಿಯಿಂದ ನಡೆಯಿತು. ಮಹೋತ್ಸವವು ಎರಡು ದಿನಗಳಿಂದ ಆಚರಿಸಲಾಗುತ್ತಿದ್ದು ಕೊನೆಯ ದಿನವಾದ ಇಂದು ಬೆಳಿಗ್ಗೆ 4 ರಿಂದ ಶ್ರೀ ದೊಡ್ಡಮ್ಮದೇವಿ ಶಿಲಾವಿಗ್ರಹ ಮತ್ತು ಪರಿವಾರ ದೇವತೆಗಳ ಪುನಃ ಪ್ರಾಣ ಪ್ರತಿಷ್ಟಾಪನಾ ಅಭಿಷೇಕ, ಹೋಮಾದಿಗಳು ನಡೆಯಿತು. ಬೆಳಿಗ್ಗೆ 10 ರಿಂದ ಶ್ರೀ ಚಂದ್ರಶೇಖರ ಶಿವಾಚಾರ್ಯಸ್ವಾಮಿಗಳು ಶಿಖರ ಕಳಸಾರೋಹಣ ನೆರವೇರಿಸಿದರು. ಅದಾದ ಬಳಿಕ ಪೂರ್ಣಾಹುತಿ, […]
ಉಡುಪಿ ಜಲಸಾರಿಗೆ ಇಲಾಖೆಯ ಟಿ ಟಿ ಎಸ್ ಫಾಯದೆರವರ ಬೀಳ್ಕೊಡುಗೆ ಸಮಾರಂಭ

ಉಡುಪಿ: ಜಲಸಾರಿಗೆ ಇಲಾಖೆ ಉಡುಪಿ ವಿಭಾಗ ವತಿಯಿಂದ ಸುಮಾರು 35 ವರ್ಷಗಳ ಕಾಲ ಸೇವೆ ಸಲ್ಲಿಸಿ ಸೇವಾ ನಿವೃತ್ತಿಯಾದ ಟಿ ಟಿ ಎಸ್ ಫಾಯದೆರವರ ಬೀಳ್ಕೊಡುಗೆ ಸಮಾರಂಭ ಮಣಿಪಾಲದ ಕಂಟ್ರಿ ಇನ್ನ್ ಹೋಟೆಲ್ ಸಭಾಂಗಣದಲ್ಲಿ ಇತ್ತೀಚಿಗೆ ನೆಡೆಯಿತು. ಉಡುಪಿ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯಲ್ಲಿ ಸುಮಾರು 35 ವರ್ಷ ವಿವಿಧ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿದ ಕಾರ್ಯ ನಿರ್ವಾಹಕ ಇಂಜಿನಿಯರ್ ಟಿ ಟಿ ಎಸ್ ಫಾಯದೆರವರನ್ನು ಸಭೆಯ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಜಲಸಾರಿಗೆ ಮಂಡಳಿ ಕಾರವಾರದ ಮುಖ್ಯ […]