ಪರ್ಕಳ: ನಾಳೆ (ಮೇ 3) “ಕ್ಷೇಮ ಪಾಲಿ ಕ್ಲಿನಿಕ್” ಶುಭಾರಂಭ
ಉಡುಪಿ: ಪರ್ಕಳದ ಗೋಪಾಲ್ ಟವರ್ಸ್ ನಲ್ಲಿ ಇದೇ ಬರುವ ಮೇ 3ರಂದು “ಕ್ಷೇಮ ಪಾಲಿ ಕ್ಲಿನಿಕ್” ಶುಭಾರಂಭಗೊಳ್ಳಲಿದೆ. ಈ ಪ್ರಯುಕ್ತ ಅಂದು ಬೆಳಿಗ್ಗೆ 9.00 ರಿಂದ ಸಾರ್ವಜನಿಕರಿಗೆ ಉಚಿತ ಮಧುಮೇಹ ಹಾಗೂ ರಕ್ತ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದೆ. ಮಧ್ಯಾಹ್ನ ಸಾಂಸ್ಕೃತಿಕ ಕಾರ್ಯಕ್ರಮ ಆರಂಭಗೊಳ್ಳಲಿದ್ದು, 3.30ರಿಂದ 5.30ರ ವರೆಗೆ ದಿನೇಶ್ ಸಂತೆಕಟ್ಟೆ ಮತ್ತು ಬಳಗ ಇವರಿಂದ “ಸಂಗೀತ ರಸಮಂಜರಿ” ಸಂಜೆ 5.30 ರಿಂದ 8.00ರ ವರೆಗೆ ಯಕ್ಷಗಾನ ತಾಳಮದ್ದಲೆ “ಕೃಷ್ಣಾರ್ಜುನ ಕಾಳಗ” ನಡೆಯಲಿದೆ. ಹಿಮ್ಮೇಳದಲ್ಲಿ ಶ್ರೀ ರಾಘವೇಂದ್ರ ಮಯ್ಯ […]
ಆಹಾರದ ಬದಲಾವಣೆಯು ಅಸ್ತಮಾ ರೋಗವನ್ನು ನಿರ್ವಹಿಸುವಲ್ಲಿ ಸಹಾಯ ಮಾಡಬಹುದು: ಡಾ. ಸುದರ್ಶನ್ ಕೆ.ಎಸ್.
ವ್ಯಕ್ತಿಯಲ್ಲಿ ಉಸಿರಾಟದ ವಾಯು ಮಾರ್ಗಗಳು ಉರಿಯೂತಕ್ಕೊಳಗಾವುದು, ಕಿರಿದಾಗುವುದು ಮತ್ತು ಊದಿಕೊಳ್ಳುವುದು ಮತ್ತು ಹೆಚ್ಚುವರಿ ಲೋಳೆಯ ಉತ್ಪತ್ತಿಯಾಗುವ ಸ್ಥಿತಿಯನ್ನು ಆಸ್ತಮಾ ಎನ್ನುತ್ತಾರೆ. ಇದರಿಂದ ಉಸಿರಾಡಲು ಕಷ್ಟವಾಗುತ್ತದೆ. ಆಸ್ತಮಾ ಅಲ್ಪ ಪ್ರಮಾಣದ್ದಾಗಿರಬಹುದು ಅಥವಾ ದೈನಂದಿನ ಚಟುವಟಿಕೆಗಳಿಗೆ ಅಡ್ಡಿಯುಂಟು ಮಾಡುವಂತಹುದ್ದಾಗಿರಬಹುದು. ಕೆಲವೊಮ್ಮೆ ಇದು ಮಾರಣಾಂತಿಕ ಆಸ್ತಮಾ ದಾಳಿಗೆ ಕಾರಣವಾಗಬಹುದು. ಆಸ್ತಮಾ ಸಮಸ್ಯೆಯು ಉಸಿರಾಟದ ತೊಂದರೆ, ಎದೆ ನೋವು, ಕೆಮ್ಮು ಮತ್ತು ಉಬ್ಬಸವನ್ನು ಉಂಟುಮಾಡಬಹುದು. ರೋಗಲಕ್ಷಣಗಳು ಕೆಲವೊಮ್ಮೆ ಉಲ್ಬಣಗೊಳ್ಳಬಹುದು. ಆಹಾರ ಪದ್ಧತಿಯು ರೋಗಿಗಳಲ್ಲಿ ಆಸ್ತಮಾ ಪರಿಸ್ಥಿತಿಯನ್ನು ಹೆಚ್ಚಿಸಬಹುದು ಅಥವಾ ಸ್ವಲ್ಪ ಪರಿಹಾರ ಉಂಟುಮಾಡಬಹುದು […]
ಭಾರತದಲ್ಲಿ ಇವಿ ಕಾರುಗಳನ್ನು ತಯಾರಿಸಲು ಟೆಸ್ಲಾ ಕಂಪನಿಗೆ ಆಹ್ವಾನ: ನಿತಿನ್ ಗಡ್ಕರಿ
ನವದೆಹಲಿ: ಅಮೇರಿಕಾ ಮೂಲದ ವಿದ್ಯುತ್ ವಾಹನ ತಯಾರಕ ಟೆಸ್ಲಾ ಭಾರತದಲ್ಲಿ ತನ್ನ ಎಲೆಕ್ಟ್ರಿಕ್ ವಾಹನಗಳನ್ನು ತಯಾರಿಸಿದರೆ ಕಂಪನಿಯೂ ಪ್ರಯೋಜನಗಳನ್ನು ಪಡೆಯುತ್ತದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಸೋಮವಾರ ಹೇಳಿದ್ದಾರೆ. ಒಂದು ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಗಡ್ಕರಿ, ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳ ಬೆಲೆಗಳು ಪೆಟ್ರೋಲ್ ವಾಹನಗಳ ಬೆಲೆಗಿಂತ ಕಡಿಮೆಯಾಗುವ ದಿನಗಳು ಬಹಳ ದೂರವಿಲ್ಲ ಎಂದರು. ಇದಕ್ಕೂ ಮುಂಚೆ ಏಪ್ರಿಲ್ 26 ರಂದು, ಟೆಸ್ಲಾ ತನ್ನ ಇವಿಗಳನ್ನು ಭಾರತದಲ್ಲಿ ತಯಾರಿಸಲು ಸಿದ್ಧವಾಗಿದ್ದರೆ ‘ಯಾವುದೇ ತೊಂದರೆ […]
ಬರ್ಲಿನ್ನ ಬ್ರಾಂಡೆನ್ಬರ್ಗ್ ಗೇಟ್ನಲ್ಲಿ ಭಾರತದ ರಂಗು: ಭಾರತದ ಪ್ರಧಾನಿಗೆ ಭರ್ಜರಿ ಸ್ವಾಗತ
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ತಮ್ಮ 3 ದಿನಗಳ ಯುರೋಪ್ ಪ್ರವಾಸಕ್ಕಾಗಿ ಸೋಮವಾರ (ಮೇ 2) ಜರ್ಮನಿಗೆ ತಲುಪುತ್ತಿದ್ದಂತೆ, ಭಾರತೀಯ ನಾಯಕನನ್ನು ಸ್ವಾಗತಿಸಲು ಬರ್ಲಿನ್ನ ಸಾಂಪ್ರದಾಯಿಕ ನಗರ ಬ್ರಾಂಡೆನ್ಬರ್ಗ್ ಗೇಟ್ನಲ್ಲಿ ಭಾರತದ ರಂಗು ಮತ್ತು ವೈವಿಧ್ಯತೆಯನ್ನು ಪ್ರದರ್ಶಿಸಲಾಯಿತು. The colours and diversity of India are on display at Berlin’s iconic Brandenburg Gate. pic.twitter.com/nhBECQVLEp — PMO India (@PMOIndia) May 2, 2022 ಹೃದಯಸ್ಪರ್ಶಿ ಸ್ವಾಗತದ ಚಿತ್ರಗಳು ಮತ್ತು ವೀಡಿಯೊವನ್ನು ಪ್ರಧಾನ […]
ಮೇ 1-15 ಜನನಿ ಎಂಟರ್ಪ್ರೈಸಸ್ ನಲ್ಲಿ ಜನನಿ ಸಂಭ್ರಮೋತ್ಸವ ವರುಷದ ಆಚರಣೆ
ಬ್ರಹ್ಮಾವರ: ತಮ್ಮ ಬಾಂಧವ್ಯದ ನೆನಪಿಗಾಗಿ ಜನನಿ ಸಂಭ್ರಮೋತ್ಸವ ವರುಷದ ಆಚರಣೆ ಮೇ 1 ರಿಂದ 15 ರವರೆಗೆ ನಡೆಯಲಿದ್ದು ಪ್ರತಿ ಖರೀದಿಯೊಂದಿಗೆ ಉಚಿತ ಸಾಗಾಟ, ಖಚಿತ ಉಡುಗೊರೆ, ವಿಶೇಷ ವಿನಿಮಯ ಕೊಡುಗೆ, ಆಕರ್ಷಕ ರಿಯಾಯಿತಿ, ಸುಲಭ ಕಂತುಗಳ ಯೋಜನೆ, ಕ್ಯಾಶ್ ಬ್ಯಾಕ್, ಖಚಿತ ಲಕ್ಕಿ ಡ್ರಾ ಸೌಲಭ್ಯಗಳು ನಿಮ್ಮ ಮನೆಯ ಸೌಂದರ್ಯವನ್ನು ಹೆಚ್ಚಿಸಲಿದ್ದು ಪ್ರಸಿದ್ಧ ಕಂಪನಿಗಳ ಇಲೆಕ್ಟ್ರಾನಿಕ್ ವಸ್ತುಗಳು, ವಿವಿಧ ವಿನ್ಯಾಸದ ಫರ್ನಿಚರ್ ಉಪಕರಣಗಳು, ವಿಶಾಲ ಶ್ರೇಣಿಯ ಹೋಂ ಅಪ್ಲೈಯನ್ಸಸ್, ಕಿಚನ್ ಅಪ್ಲೈಯನ್ಸಸ್ ವಸ್ತುಗಳು, ಉತ್ಕೃಷ್ಠ ಗುಣಮಟ್ಟದ […]