ಅಸೆಂಬ್ಲಿ ಚುನಾವಣೆಯಲ್ಲಿ ಬಿಜೆಪಿ 150 ಪ್ಲಸ್ ಸೀಟು ಪಡೆಯುವ ಚಿಂತನೆ ಯಶಸ್ಸು: ನಳಿನ್ಕುಮಾರ್ ಕಟೀಲ್ ವಿಶ್ವಾಸ
ಬೆಂಗಳೂರು: ಕರ್ನಾಟಕದ ಮುಂದಿನ ಗೆಲುವು ದಕ್ಷಿಣ ಭಾರತಕ್ಕೇ ಒಂದು ಸಂದೇಶ ನೀಡಲಿದೆ. ಕರ್ನಾಟಕ ಅಸೆಂಬ್ಲಿ ಚುನಾವಣೆಯಲ್ಲಿ ಬಿಜೆಪಿ 150 ಪ್ಲಸ್ ಸೀಟು ಪಡೆಯುವ ಚಿಂತನೆ ಯಶಸ್ಸು ಪಡೆಯಲಿದೆ. ಯಡಿಯೂರಪ್ಪ ಅವರು ರೈತ ಬಂಧುವಾಗಿ ಕೆಲಸ ಮಾಡಿದ್ದಾರೆ. ಕರ್ನಾಟಕದಲ್ಲಿ ಬಿಜೆಪಿ ಬೆಳೆದಿದೆ, ಬೆಳಗುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷರು ಮತ್ತು ಸಂಸದರೂ ಆದ ನಳಿನ್ಕುಮಾರ್ ಕಟೀಲ್ ಅವರು ತಿಳಿಸಿದರು. ಹೊಸಪೇಟೆಯಲ್ಲಿ ನಡೆಯುತ್ತಿರುವ ಬಿಜೆಪಿ ರಾಜ್ಯ ವಿಶೇಷ ಕಾರ್ಯಕಾರಿಣಿ ಸಭೆಯ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಹೊಸಪೇಟೆಯ ಸಂಕಲ್ಪ ಸಭೆಯು […]
ಉಡುಪಿ: ಮಗುವಿನೊಂದಿಗೆ ಬಟ್ಟೆ ಖರೀದಿಸಲು ಹೋದ ಮಹಿಳೆ ನಾಪತ್ತೆ
ಉಡುಪಿ: ಬಟ್ಟೆ ಖರೀದಿಸಲು ಹೋಗಿ ಬರುವುದಾಗಿ ಹೇಳಿ ಮನೆಯಿಂದ ಎರಡು ವರ್ಷದ ಹೆಣ್ಣು ಮಗುವಿನೊಂದಿಗೆ ಪೇಟೆಗೆ ಹೋದ ಮಹಿಳೆಯೊಬ್ಬರು ವಾಪಸು ಮನೆಗೆ ಬಾರದೆ ನಾಪತ್ತೆಯಾಗಿದ್ದಾರೆ. ಉಡುಪಿ ತಾಲೂಕಿನ ಶಿವಳ್ಳಿ ಗ್ರಾಮ ಎಂಜಿಎಂ ಬಳಿ ವಾಸವಾಗಿರುವ ಮುತ್ತಪ್ಪ ಹನುಮಂತ ವಡ್ಡರ್ ಎಂಬವರ ಪತ್ನಿ 22 ವರ್ಷದ ಪದ್ಮ ಹಾಗೂ ಎರಡು ವರ್ಷದ ಪ್ರಣತಿ ಎಂಬ ಮಗಳು ನಾಪತ್ತೆಯಾಗಿದ್ದಾರೆ. ಪದ್ಮ ತನ್ನ ಮಗುವಿನೊಂದಿಗೆ ಎ.15ರಂದು ಮಧ್ಯಾಹ್ನ 2.40ಕ್ಕೆ ಬಟ್ಟೆ ಖರೀದಿಸಲು ಮನೆಯಿಂದ ಹೋಗಿದ್ದರು. ಆದರೆ ಬಳಿಕ ಮನೆಗೂ ವಾಪಾಸು ಬಾರದೇ […]
ಬಾಕ್ಸಾಫೀಸ್ ನಲ್ಲಿ ಕೆಜಿಎಫ್ 2 ಆರ್ಭಟ; ಎರಡು ದಿನದ ಕಲೆಕ್ಷನ್ ರಿಪೋರ್ಟ್ ಹೀಗಿದೆ.!
ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ 2 ಸಿನಿಮಾಗೆ ಜಗತ್ತಿನಾದ್ಯಂತ ಪ್ರೇಕ್ಷಕರಿಂದ ಉತ್ತಮ ರೆಸ್ಪಾನ್ಸ್ ದೊರಕಿದ್ದು, ಮೊದಲ ದಿನ ಕನ್ನಡದ ಪ್ಯಾನ್ ಇಂಡಿಯಾ ಚಿತ್ರ ದಾಖಲೆ ಮಟ್ಟದ ಗಳಿಕೆ ಮಾಡಿ ಇತಿಹಾಸ ಸೃಷ್ಟಿಸಿದೆ. ‘ಕೆಜಿಎಫ್ 2’ ಮೊದಲ ದಿನ: 134.5 ಕೋಟಿ: ಚಿತ್ರದ ಗಳಿಕೆ ಮೇಲೆ ಹೆಚ್ಚಿನ ನಿರೀಕ್ಷೆ ಮೂಡಿದ್ದು, ಮೊದಲ ದಿನ ‘ಕೆಜಿಎಫ್ 2’ ಸಿನಿಮಾದ ಗಳಿಕೆ ಸುಮಾರು 130 ರಿಂದ 145 ಕೋಟಿ ಅಗಬಹುದು ಎಂದು ಅಂದಾಜಿಸಲಾಗಿದೆ ಎಂದು ಹೊಂಬಾಳೆ ಫಿಲ್ಮ್ಸ್ ಫಸ್ಟ್ ಡೇ […]