ಬಾಕ್ಸಾಫೀಸ್ ನಲ್ಲಿ ಕೆಜಿಎಫ್ 2 ಆರ್ಭಟ; ಎರಡು ದಿನದ ಕಲೆಕ್ಷನ್ ರಿಪೋರ್ಟ್ ಹೀಗಿದೆ.!

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ 2 ಸಿನಿಮಾಗೆ ಜಗತ್ತಿನಾದ್ಯಂತ ಪ್ರೇಕ್ಷಕರಿಂದ ಉತ್ತಮ ರೆಸ್ಪಾನ್ಸ್ ದೊರಕಿದ್ದು, ಮೊದಲ ದಿನ ಕನ್ನಡದ ಪ್ಯಾನ್ ಇಂಡಿಯಾ ಚಿತ್ರ ದಾಖಲೆ ಮಟ್ಟದ ಗಳಿಕೆ ಮಾಡಿ ಇತಿಹಾಸ ಸೃಷ್ಟಿಸಿದೆ.

‘ಕೆಜಿಎಫ್ 2’ ಮೊದಲ ದಿನ: 134.5 ಕೋಟಿ: 

ಚಿತ್ರದ ಗಳಿಕೆ ಮೇಲೆ ಹೆಚ್ಚಿನ ನಿರೀಕ್ಷೆ ಮೂಡಿದ್ದು, ಮೊದಲ ದಿನ  ‘ಕೆಜಿಎಫ್ 2’ ಸಿನಿಮಾದ ಗಳಿಕೆ ಸುಮಾರು 130 ರಿಂದ 145 ಕೋಟಿ ಅಗಬಹುದು ಎಂದು ಅಂದಾಜಿಸಲಾಗಿದೆ ಎಂದು ಹೊಂಬಾಳೆ ಫಿಲ್ಮ್ಸ್ ಫಸ್ಟ್ ಡೇ ಕಲೆಕ್ಷನ್ ರಿಪೋರ್ಟ್ ನೀಡಿದೆ.

‘ಕೆಜಿಎಫ್ 2’ ಎರಡನೇ: 240 ಕೋಟಿ: 

‘ಕೆಜಿಎಫ್ 2’ ಚಿತ್ರದ ಎರಡನೇ ದಿನದ ಕಲೆಕ್ಷನ್ ಅಧಿಕೃತಕವಾಗಿ ಘೋಷಣೆ ಮಾಡಿದೆ.

ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ ನೀಡಿರುವ ಲೆಕ್ಕಾಚಾರದ ಪ್ರಕಾರ ಎರಡನೇ ದಿನಕ್ಕೆ  ‘ಕೆಜಿಎಫ್ 2’ ಚಿತ್ರ ಸುಮಾರು 240 ಕೋಟಿ ರೂ. ಗಳಿಕೆಯಾಗಿದೆ ಎಂದು ಹೇಳಿದೆ.

ಇದು ಭಾರತದಾದ್ಯಂತ ಕಲೆ ಹಾಕಿರುವ ಮೊತ್ತ. ಆದರೆ ವಿಶ್ವಾದ್ಯಂತ ಈ ಲೆಕ್ಕಾ ತೆಗೆದುಕೊಂಡರೆ ಇದು ಇನ್ನಷ್ಟು ಹೆಚ್ಚಾಗಲಿದೆ ಎಂದಿದ್ದಾರೆ.