ಪಾರ್ಶ್ವವಾಯು ಜಾಗೃತಿ ಕಾರ್ಯಕ್ರಮ ಮತ್ತು ಗಿನ್ನೆಸ್ ವಿಶ್ವ ದಾಖಲೆಗೆ ಬಹುಪಾಲು ಪ್ರತಿಜ್ಞೆ ನಡೆಸಿದ ಫಲಕವನ್ನು ಕಸ್ತೂರ್ಬಾ ಆಸ್ಪತ್ರೆ ಮಣಿಪಾಲಕ್ಕೆ ಹಸ್ತಾಂತರ
ಮಣಿಪಾಲ: ಪಾರ್ಶ್ವವಾಯು (ಸ್ಟ್ರೋಕ್) ಒಂದು ಪ್ರಮುಖ ಸಾಂಕ್ರಾಮಿಕವಲ್ಲದ ಕಾಯಿಲೆಯಾಗಿದೆ. ನಾಲ್ಕು ವಯಸ್ಕರಲ್ಲಿ ಒಬ್ಬರು ತಮ್ಮ ಜೀವಿತಾವಧಿಯಲ್ಲಿ ಪಾರ್ಶ್ವವಾಯು ಕಾಯಿಲೆಗೆ ತುತ್ತಾಗುತ್ತಾರೆ. ಇದರ ಕುರಿತು ಜಾಗೃತಿ ಮೂಡಿಸಲು, ಅಕ್ಟೋಬರ್ ತಿಂಗಳಲ್ಲಿ ವಿಶ್ವ ಪಾರ್ಶ್ವವಾಯು ದಿನದಂದು ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯ ನರವಿಜ್ಞಾನ ವಿಭಾಗವು ಪಾರ್ಶ್ವವಾಯು ಜಾಗೃತಿ ಅಭಿಯಾನವನ್ನು ನಡೆಸಿತ್ತು. ಬೋರಿಂಗ್ ಇಂಗ್ಇಲಹಿಂ ಇಂಡಿಯಾ ಕಂಪನಿಯು ಸ್ಟ್ರೋಕ್ ಮೌಲ್ಯಮಾಪನ ಅಪ್ಲಿಕೇಶನ್ ಮೂಲಕ ಸ್ಟ್ರೋಕ್ ಜಾಗೃತಿ ಅಭಿಯಾನ ಮತ್ತು ಪ್ರತಿಜ್ಞೆಗಾಗಿ ಗಿನ್ನೆಸ್ ವಿಶ್ವ ದಾಖಲೆಗಾಗಿ ಈ ಕಾರ್ಯಕ್ರಮ ಆಯೋಜಿಸಿತ್ತು. ಸ್ಟ್ರೋಕ್ ಪ್ರತಿಜ್ಞೆಗಳನ್ನು ರಚಿಸುವಲ್ಲಿ […]
ಎಣ್ಣೆಹೊಳೆ: ಗದ್ದೆಗೆ ಉರುಳಿ ಬಿದ್ದ ಕಾರು; ಚಾಲಕ ಪಾರು
ಎಣ್ಣೆಹೊಳೆ: ನಿಯಂತ್ರಣ ತಪ್ಪಿದ ಕಾರೊಂದು ರಸ್ತೆ ಬದಿಯ ಗದ್ದೆಗೆ ಉರುಳಿಬಿದ್ದ ಘಟನೆ ಕಾರ್ಕಳ ತಾಲೂಕಿನ ಎಣ್ಣೆಹೊಳೆ ಎಂಬಲ್ಲಿ ಇಂದು ಮುಂಜಾನೆ ನಡೆದಿದೆ. ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ತಿಳಿದು ಬಂದಿದೆ. ಕಾರು ಹೊಸಪೇಟೆಯಿಂದ ಕಾರ್ಕಳಕ್ಕೆ ಬರುತ್ತಿದ್ದು, ಎಣ್ಣೆಹೊಳೆಗೆ ಸಮೀಪಿಸುತ್ತಿದ್ದಂತೆ ಈ ದುರ್ಘಟನೆ ಸಂಭವಿಸಿದೆ. ಕಾರು ಪಲ್ಟಿಯಾದ ರಭಸಕ್ಕೆ ಕಾರಿನ ಮುಂಭಾಗ ಜಖಂಗೊಂಡಿದೆ. ಅವೈಜ್ಞಾನಿಕ ಕಾಮಗಾರಿಯಿಂದ ಅಪಘಾತ: ಎಣ್ಣೆಹೊಳೆ ಸೇತುವೆಯಿಂದ ಪೇಟೆಯವರೆಗೆ ರಸ್ತೆ ಕಾಮಗಾರಿ ನಡೆಯುತ್ತಿದೆ. ಈ ಬಗ್ಗೆ ಒಂದು ಕಿ.ಮೀ ಹಿಂದೆಯೇ ಸೂಚನೆ ನೀಡಬೇಕಿತ್ತು. ಆದರೆ ಕಾಮಗಾರಿ […]
ಉಡುಪಿ ಶ್ರೀಕೃಷ್ಣಮಠದಲ್ಲಿ ಸೌರಯುಗಾದಿ ಆಚರಣೆ
ಉಡುಪಿ: ಶ್ರೀಕೃಷ್ಣಮಠದಲ್ಲಿ ಸೌರಯುಗಾದಿಯ ಪ್ರಯುಕ್ತ ಶ್ರೀಕೃಷ್ಣ ಮುಖ್ಯಪ್ರಾಣದೇವರ ಉತ್ಸವ ನಡೆಯಿತು. ಪರ್ಯಾಯ ಶ್ರೀಕೃಷ್ಣಾಪುರ ಮಠಾಧೀಶರಾದ ಶ್ರೀವಿದ್ಯಾಸಾಗರತೀರ್ಥ ಶ್ರೀಪಾದರು, ಪೇಜಾವರ ಮಠಾಧೀಶರಾದ ಶ್ರೀವಿಶ್ವಪ್ರಸನ್ನತೀರ್ಥ ಶ್ರೀಪಾದರು, ಕಾಣಿಯೂರು ಮಠಾಧೀಶರಾದ ಶ್ರೀವಿದ್ಯಾವಲ್ಲಭತೀರ್ಥ ಶ್ರೀಪಾದರು, ಸೋದೆ ಮಠಾಧೀಶರಾದ ಶ್ರೀವಿಶ್ವವಲ್ಲಭ ತೀರ್ಥ ಶ್ರೀಪಾದರು, ಅದಮಾರು ಕಿರಿಯ ಮಠಾಧೀಶರಾದ ಶ್ರೀಈಶಪ್ರಿಯತೀರ್ಥ ಶ್ರೀಪಾದರು ಹಾಗೂ ಶೀರೂರು ಮಠಾಧೀಶರಾದ ಶ್ರೀವೇದವರ್ಧನತೀರ್ಥ ಶ್ರೀಪಾದರು ಉಪಸ್ಥಿತರಿದ್ದರು. ಪರ್ಯಾಯ ಮಠದ ವತಿಯಿಂದ ಚಂದ್ರಶಾಲೆಯಲ್ಲಿ ಶ್ರೀಪಾದರಿಗೆ ಗಂಧಾದಿ ಉಪಚಾರಗಳೊಂದಿಗೆ ಗೌರವ ಕಾಣಿಕೆ ಸಲ್ಲಿಸಲಾಯಿತು. ಪರ್ಯಾಯ ಮಠದ ಪುರೋಹಿತರಾದ ಶ್ರೀನಿವಾಸ ಉಪಾಧ್ಯಾಯ ಇವರು ಶುಭಕೃತ್ ನಾಮ […]
ಎ.15 ರಿಂದ 22: ನೀಲಾವರ ಶ್ರೀಮಹಿಷಮರ್ದಿನಿ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವ
ಬ್ರಹ್ಮಾವರ: ನೀಲಾವರ ಮಹತೋಭಾರ ಶ್ರೀಮಹಿಷಮರ್ದಿನಿ ದೇವಸ್ಥಾನದಲ್ಲಿ ಎ.20 ರಂದು ಶ್ರೀಮನ್ಮಹಾರಥೋತ್ಸವ ನಡೆಯಲಿದೆ. ಎ.15 ರಂದು ಅಂಕುರಾರೋಪಣಾ, ಎಂ.16 ರಂದು ಧ್ವಜಾರೋಹಣ, ಸಿಂಹವಾಹನೋತ್ಸವ, ಭೇರಿತಾಡನ ಇತ್ಯಾದಿ, 17ರಂದು ಮಯೂರ ವಾಹನೋತ್ಸವ, 15ರಂದು ಹಂಸ ವಾಹನೋತ್ಸವ ಜರಗಲಿದೆ.ಎ.19ರಂದು ಗಜವಾಹನೋತ್ಸವ, 20ರಂದು ಬೆಳಿಗ್ಗೆ ರಥಾರೋಹಣ, ಮಧ್ಯಾಹ್ನ ಅನ್ನಸಂತರ್ಪಣೆ ಹಾಗೂ ಸಂಜೆ ರಥೋತ್ಸವ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.