ಎ.15 ರಿಂದ 22: ನೀಲಾವರ ಶ್ರೀಮಹಿಷಮರ್ದಿನಿ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವ

ಬ್ರಹ್ಮಾವರ: ನೀಲಾವರ ಮಹತೋಭಾರ ಶ್ರೀಮಹಿಷಮರ್ದಿನಿ ದೇವಸ್ಥಾನದಲ್ಲಿ ಎ.20 ರಂದು ಶ್ರೀಮನ್ಮಹಾರಥೋತ್ಸವ ನಡೆಯಲಿದೆ.

ಎ.15 ರಂದು ಅಂಕುರಾರೋಪಣಾ, ಎಂ.16 ರಂದು ಧ್ವಜಾರೋಹಣ, ಸಿಂಹವಾಹನೋತ್ಸವ, ಭೇರಿತಾಡನ ಇತ್ಯಾದಿ, 17ರಂದು ಮಯೂರ ವಾಹನೋತ್ಸವ, 15ರಂದು ಹಂಸ ವಾಹನೋತ್ಸವ ಜರಗಲಿದೆ.ಎ.19ರಂದು ಗಜವಾಹನೋತ್ಸವ, 20ರಂದು ಬೆಳಿಗ್ಗೆ ರಥಾರೋಹಣ, ಮಧ್ಯಾಹ್ನ ಅನ್ನಸಂತರ್ಪಣೆ ಹಾಗೂ ಸಂಜೆ ರಥೋತ್ಸವ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.