ಭಾರೀ ಹೈಡ್ರಾಮದ ಬಳಿಕ ಮರಣೋತ್ತರ ಪರೀಕ್ಷೆಗೆ ಕುಟುಂಬಸ್ಥರ ಒಪ್ಪಿಗೆ; ಬಿಗಿಪೊಲೀಸ್ ಬಂದೋಬಸ್ತ್ ನಲ್ಲಿ ಮಣಿಪಾಲ ಆಸ್ಪತ್ರೆಗೆ ಮೃತದೇಹ ರವಾನೆ
ಉಡುಪಿ: ಸುಮಾರು ನಾಲ್ಕು ತಾಸಿನ ಗೊಂದಲದ ಬಳಿಕ ಮೃತ ಗುತ್ತಿಗೆದಾರ ಸಂತೋಷ್ ಪಾಟೀಲ್ ಮೃತದೇಹವನ್ನು ಕುಟುಂಬಸ್ಥರ ಒಪ್ಪಿಗೆಯಂತೆ ಮರಣೋತ್ತರ ಪರೀಕ್ಷೆಗಾಗಿ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ರವಾನಿಸಲಾಯಿತು. ವಿಧಿವಿಜ್ಞಾನ ಪ್ರಯೋಗಾಲಯದ ತಜ್ಞರ ತಂಡ ಪಂಚೆನಾಮೆ ಪ್ರಕ್ರಿಯೆ ಮಧ್ಯಾಹ್ನದ ವೇಳೆಗೆ ಪೂರ್ಣಗೊಂಡಿದೆ. ಆದರೆ, ಮೃತದೇಹದ ಮರಣೋತ್ತರ ಪರೀಕ್ಷೆಗೆ ಮೃತನ ಸಹೋದರ ಸಹಿತ ಕುಟುಂಬಸ್ಥರು ಒಪ್ಪದ ಕಾರಣ ಸುಮಾರು ನಾಲ್ಕು ತಾಸು ಮೃತದೇಹದ ಪರೀಕ್ಷೆಗೆ ಕಳುಹಿಸಲು ವಿಳಂಬವಾಯಿತು. ಪಂಚನಾಮೆಯ ವರದಿಯಲ್ಲಿ ಕೆಲವೊಂದು ಲೋಪವಿದ್ದ ಕಾರಣ ಕುಟುಂಬಸ್ಥರು ವರದಿಗೆ ಸಹಿ ಹಾಕಲು ಒಪ್ಪಿರಲಿಲ್ಲ. […]
ನಗರದ ಲಾಡ್ಜ್ ನಲ್ಲಿ ಮಲಗಿರುವ ಸ್ಥಿತಿಯಲ್ಲಿ ಸಂತೋಷ್ ಪಾಟೀಲ್ ಮೃತದೇಹ ಪತ್ತೆ; ಕೇಸರಿ ಶಾಲು ಹಾಕಿಕೊಂಡೇ ಪ್ರಾಣತ್ಯಾಗ
ಉಡುಪಿ: ಸಚಿವ ಈಶ್ವರಪ್ಪ ಅವರ ಮೇಲೆ ಕಮಿಷನ್ ಆರೋಪ ಹೊರಿಸಿದ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಮಾಡಿಕೊಂಡಿದ್ದು, ಕೇಸರಿ ಶಾಲು ಹಾಕಿಕೊಂಡೇ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಆತನ ಮೃತದೇಹ ಪತ್ತೆಯಾಗಿದೆ. ಮೃತನ ಸಂಬಂಧಿಕರು ಉಡುಪಿಗೆ ಆಗಮಿಸಿದ ಬಳಿಕ ಕಾನೂನು ಪ್ರಕ್ರಿಯೆ ಆರಂಭಗೊಂಡಿದೆ. ಸಂತೋಷ್ ಪಾಟೀಲ್ ಆತ್ಮಹತ್ಯೆ ಮಾಡಿಕೊಂಡಿರುವ ನಗರದ ಲಾಡ್ಜ್ ನ ಕೊಠಡಿ ಸಂಖ್ಯೆ 207 ರ ಬಾಗಿಲು ತೆರೆಯಲಾಯಿತು. ಈ ವೇಳೆ ಹಾಸಿಗೆ ಮೇಲೆ ಮಲಗಿರುವಂತೆ ಸಂತೋಷ್ ಪಾಟೀಲ್ ಮೃತದೇಹ ಕಂಡುಬಂದಿದೆ. ಹಸಿರು ಶರ್ಟ್ ಮತ್ತು […]
ಸದೃಢ ಪಕ್ಷ ಸಂಘಟನೆಯಲ್ಲಿ ಮಹಿಳಾ ಮೋರ್ಚಾದ ಪಾತ್ರ ಮಹತ್ವಪೂರ್ಣ: ಕುಯಿಲಾಡಿ
ಉಡುಪಿ: ಇಂದು ಎಲ್ಲಾ ಸ್ತರಗಳಲ್ಲಿ ಮಹಿಳೆಯರಿಗೆ ವಿಶೇಷ ಜವಾಬ್ದಾರಿ ಇದೆ. ಸಮೃದ್ಧ, ಸದೃಢ ಭಾರತ ನಿರ್ಮಾಣದತ್ತ ಪಕ್ಷದ ಸಂಸ್ಥಾಪಕರು ಕಂಡ ಕನಸನ್ನು ನನಸಾಗಿಸುವಲ್ಲಿ ಸಂಘಟಿತ ಶ್ರಮ ಅತ್ಯವಶ್ಯಕ. ಸದೃಢ ಪಕ್ಷ ಸಂಘಟನೆಯಲ್ಲಿ ಮಹಿಳಾ ಮೋರ್ಚಾದ ಪಾತ್ರ ಮಹತ್ವಪೂರ್ಣವಾಗಿದೆ ಎಂದು ಉಡುಪಿ ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಹೇಳಿದರು. ಅವರು ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ವೀಣಾ ಎಸ್. ಶೆಟ್ಟಿ ಅಧ್ಯಕ್ಷತೆಯಲ್ಲಿ ಎ.13 ರಂದು ಬಿಜೆಪಿ ಜಿಲ್ಲಾ ಕಛೇರಿಯಲ್ಲಿ ನಡೆದ ಜಿಲ್ಲಾ ಮಹಿಳಾ ಮೋರ್ಚಾದ ವಿಶೇಷ […]
ಕಾರ್ಕಳದ ಸಚ್ಚಿದಾನಂದ ಪ್ರಭುಗೆ ಪದೋನ್ನತಿ
ಕಾರ್ಕಳ: ಕಾರ್ಕಳ ಮರ್ಣೆ ಗ್ರಾಮದ ಕಾಡುಹೊಳೆ ಸಚ್ಚಿದಾನಂದ ಪ್ರಭು ಅವರು ಭಾರತದ ರಕ್ಷಣಾ ಇಲಾಖೆಯ ಬ್ರಿಗೇಡಿಯರ್ ಹುದ್ದೆ ಅಲಂಕರಿಸಿದ್ದಾರೆ. ಸಚ್ಚಿದಾನಂದ ಪ್ರಭು ಅವರು ಕಾಡುಹೊಳೆ ಕೊಪ್ಪಲದ ದಿ. ಬಾಬುರಾಯ ಪ್ರಭು, ರತ್ನಮ್ಮ ದಂಪತಿಯವರ ಪುತ್ರ, ಬೈಲೂರು ಜ್ಯೋತಿ ಪ್ರಭು ಇವರ ಪತ್ನಿಯಾಗಿದ್ದ ಇವರು ಪ್ರಾಥಮಿಕ ಶಿಕ್ಷಣವನ್ನು ಮರ್ಣೆ ಗ್ರಾಮದ ಕಾಡುಹೊಳೆಯಲ್ಲಿ, ಅಜೆಕಾರು ಜ್ಯೋತಿ ಶಾಲೆಯಲ್ಲಿ ಪ್ರೌಢಶಿಕ್ಷಣವನ್ನು, ಎಸ್ಡಿಎಂ ಉಜಿರೆಯಲ್ಲಿ ಪಿಯು ಶಿಕ್ಷಣವನಗನ್ನು ಪೂರೈಸಿದ ಪ್ರಭು ಅವರು ಉಡುಪಿ ವೈಕುಂಠ ಬಾಳಿಗಾ ಕಾಲೇಜಿನಲ್ಲಿ ಎಲ್ಎಲ್ಬಿ ಪದವಿ ಪಡೆದಿದ್ದರು. 1997ರಲ್ಲಿ […]
ಮಂಗಳೂರಿನಲ್ಲಿ ಬಡಗುತಿಟ್ಟು ಯಕ್ಷಗಾನ ತರಬೇತಿ ಶಿಬಿರದ ಉದ್ಘಾಟನೆ
ಮಂಗಳೂರು: “ಯಕ್ಷಗಾನ ಕಲಾ ಶಿಕ್ಷಣವು ಮಕ್ಕಳ ಬಾಳಿನಲ್ಲಿ ಶಿಸ್ತು, ದೈಹಿಕ ಕ್ಷಮತೆ, ಮಾನಸಿಕ ದೃಢತೆ, ಸಾಂಸ್ಕೃತಿಕ ಸಂಸ್ಕಾರ, ಭಾಷೆ, ಭಾಷಾಶುದ್ಧಿ ಇತ್ಯಾದಿಗಳನ್ನು ತರುತ್ತದೆ. ಅವರ ಶೈಕ್ಷಣಿಕ ಪ್ರಗತಿಗೂ ಅದು ಪೂರಕ. ಕಲಿಯುವುದು, ಕಲಿಸುವುದು ಸುಲಭ. ಆದರೆ ತಿದ್ದುವುದು ಕಷ್ಟ. ಆದುದರಿಂದ ನಿಧಾನವಾದರೂ ಪರವಾಗಿಲ್ಲ, ತಪ್ಪಿಲ್ಲದೆ ಶುದ್ಧವಾಗಿ ಕಲಿಯುವುದು ಮುಖ್ಯ” ಎಂದು ಯಕ್ಷಗಾನ ಕಲಾವಿದ, ಸಂಘಟಕ, ಯಕ್ಷಗಾನ ಕಲಾರಂಗ (ರಿ ).ಉಡುಪಿ ಇದರ ಕಾರ್ಯದರ್ಶಿ ಶ್ರೀ ಮುರಲಿ ಕಡೇಕಾರ್ ಅಭಿಪ್ರಾಯ ವ್ಯಕ್ತಪಡಿಸಿದರು. ಶ್ರೀ ಕಡೇಕಾರ್ ಅವರು ಯಕ್ಷಾಭಿನಯ ಬಳಗ, […]