ಉಡುಪಿ: ಸಾರ್ವಜನಿಕರ ಬಾಯಾರಿಕೆ ತಣಿಸುವ ‘ಜಲ ಕುಟೀರ’ ಉದ್ಘಾಟನೆ

ಸಾರ್ವಜನಿಕರ ಬಾಯಾರಿಕೆ ತಣಿಸುವ ಉದ್ದೇಶದಿಂದ ಉಡುಪಿ ಜಿಲ್ಲಾ ನಾಗರಿಕ ಸಮಿತಿಯು ನಗರದ ಮಾರುಥಿ ವೀಥಿಕಾದ ಕಚೇರಿಯ ಬಳಿ ಸ್ಥಾಪಿಸಿರುವ ಜಲ ಕುಟೀರವನ್ನು ಉಡುಪಿ ತಹಶೀಲ್ದಾರ್ ಅರ್ಚನಾ ಭಟ್ ಅವರು ಸೋಮವಾರ ಉದ್ಘಾಟಿಸಿದರು. ನಾಗರಿಕ ಸಮಿತಿಯ ಸೇವಾ ಕಾರ್ಯವನ್ನು ಶ್ಲಾಘಿಸಿದರು. ಸಮಿತಿಯ ಸಂಚಾಲಕ ನಿತ್ಯಾನಂದ ಒಳಕಾಡು ಮಾತನಾಡಿ, ನಗರದಲ್ಲಿ ಬಿಸಿಲ ತಾಪ ಏರಿಕೆ ಕಂಡಿದ್ದು, ಸಾರ್ವಜನಿಕರು ತಲೆ ಸುತ್ತು ಬಂದು ಅಸ್ವಸ್ಥರಾದ ಘಟನೆಗಳು ಕಂಡು ಬಂದಿದೆ. ಹೀಗಾಗಿ ನಾವು ಜೋಸ್ ಆಲುಕ್ಕಾಸ್ ಮಳಿಗೆಯವರ ಸಹಕಾರದಿಂದ ಕುಡಿಯುವ ನೀರಿನ ವ್ಯವಸ್ಥೆಯನ್ನು […]
ಮಣಿಪಾಲದಲ್ಲಿ ಶ್ರೀ ಶಾಂತಿ ಸಾಗರ್ ಎಸಿ, ನಾನ್ ಎಸಿ ಫ್ಯಾಮಿಲಿ ರೆಸ್ಟೋರೆಂಟ್ ಶುಭಾರಂಭ

ಉಡುಪಿ: ಮಣಿಪಾಲ ಟೈಗರ್ ಸರ್ಕಲ್‌ನ ಕೆಎಂಸಿ ಎದುರುಗಡೆ ನೂತನವಾಗಿ ಆರಂಭಗೊಂಡ ಶ್ರೀ ಶಾಂತಿ ಸಾಗರ್ ಎಸಿ, ನಾನ್ ಎಸಿ ಫ್ಯಾಮಿಲಿ ರೆಸ್ಟೋರೆಂಟ್ ಭಾನುವಾರ ಉದ್ಘಾಟನೆಗೊಂಡಿತು. ಕೈವಲ್ಯ ಮಠಾಧೀಶರಾದ ಶ್ರೀ ಶ್ರೀ ಶಿವಾನಂದ ಸರಸ್ಪತೀ ಸ್ವಾಮಿ ಮಹಾರಾಜ್ ಅವರು ರೆಸ್ಟೋರೆಂಟ್ ಉದ್ಘಾಟಿಸಿ ಶುಭ ಹಾರೈಸಿದರು. ಜಿಲ್ಲಾ ಹೊಟೇಲ್ ಮಾಲೀಕರ ಸಂಘದ ಅಧ್ಯಕ್ಷ ಡಾ ತಲ್ಲೂರು ಶಿವರಾಮ ಶೆಟ್ಟಿ ಮಾತನಾಡಿದರು. ಶಾಸಕ ಕೆ. ರಘುಪತಿ ಭಟ್, ನಗರಸಭೆ ಅಧ್ಯಕ್ಷೆ ಸುಮಿತ್ರಾ ಆರ್. ನಾಯಕ್, ಸದಸ್ಯ ಮಂಜುನಾಥ್ ಮಣಿಪಾಲ, ಮಾಜಿ ಸಚಿವ […]
ಎ.8 ರಿಂದ ಸಗ್ರಿ ದೇವಳದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲೋತ್ಸವ

ಉಡುಪಿ: ಸಗ್ರಿ ಶ್ರೀವಾಸುಕಿ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಎ.8 ರಿಂದ 11ರವರೆಗೆ ನವನಿರ್ಮಿತ ಶ್ರೀನಾಗದೇವರ ಗುಡಿ ಸಮರ್ಪಣೆ, ಪುನಃ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವ ಹಾಗೂ ನಾಗಮಂಡಲೋತ್ಸವವು ಪಾಡಿಗಾರು ಶ್ರೀನಿವಾಸ ತಂತ್ರಿಗಳ ನೇತೃತ್ವದಲ್ಲಿ ನಡೆಯಲಿದೆ. ಸಗ್ರಿ ದೇವಸ್ಥಾನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬ್ರಹ್ಮ ಕಲಶೋತ್ಸವ, ನಾಗಮಂಡಲೋತ್ಸವ ಸಮಿತಿ ಅಧ್ಯಕ್ಷರು ಆಗಿರುವ ಶಾಸಕ ಕೆ.ರಘುಪತಿ ಭಟ್, ಪ್ರತಿದಿನ ನಡೆಯುವ ಧರ್ಮಸಭೆಗಳಲ್ಲಿ ಅನೇಕ ಮಠಾಧೀಶರು, ಮಂತ್ರಿಗಳು, ಜನಪ್ರತಿನಿಧಿಗಳು, ಉದ್ಯಮಿಗಳು ಹಾಗೂ ವಿವಿಧ ಕ್ಷೇತ್ರಗಳ ಗಣ್ಯರು ಭಾಗವಹಿಸುವರು. ಆ ಬಳಿಕ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ […]