ಮಣಿಪಾಲದಲ್ಲಿ ಶ್ರೀ ಶಾಂತಿ ಸಾಗರ್ ಎಸಿ, ನಾನ್ ಎಸಿ ಫ್ಯಾಮಿಲಿ ರೆಸ್ಟೋರೆಂಟ್‌ ಶುಭಾರಂಭ

ಉಡುಪಿ: ಮಣಿಪಾಲ ಟೈಗರ್ ಸರ್ಕಲ್‌ನ ಕೆಎಂಸಿ ಎದುರುಗಡೆ ನೂತನವಾಗಿ ಆರಂಭಗೊಂಡ ಶ್ರೀ ಶಾಂತಿ ಸಾಗರ್ ಎಸಿ, ನಾನ್ ಎಸಿ ಫ್ಯಾಮಿಲಿ ರೆಸ್ಟೋರೆಂಟ್‌ ಭಾನುವಾರ ಉದ್ಘಾಟನೆಗೊಂಡಿತು.

ಕೈವಲ್ಯ ಮಠಾಧೀಶರಾದ ಶ್ರೀ ಶ್ರೀ ಶಿವಾನಂದ ಸರಸ್ಪತೀ ಸ್ವಾಮಿ ಮಹಾರಾಜ್ ಅವರು ರೆಸ್ಟೋರೆಂಟ್ ಉದ್ಘಾಟಿಸಿ ಶುಭ ಹಾರೈಸಿದರು.

ಜಿಲ್ಲಾ ಹೊಟೇಲ್ ಮಾಲೀಕರ ಸಂಘದ ಅಧ್ಯಕ್ಷ ಡಾ ತಲ್ಲೂರು ಶಿವರಾಮ ಶೆಟ್ಟಿ ಮಾತನಾಡಿದರು.

ಶಾಸಕ ಕೆ. ರಘುಪತಿ ಭಟ್, ನಗರಸಭೆ ಅಧ್ಯಕ್ಷೆ ಸುಮಿತ್ರಾ ಆರ್. ನಾಯಕ್,  ಸದಸ್ಯ ಮಂಜುನಾಥ್ ಮಣಿಪಾಲ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಕೆಎಎಸ್ ಅಧಿಕಾರಿ ಸದಾಶಿವ ಪ್ರಭು ಬೆಳ್ಳಾರೆ, ಉದ್ಯಮಿಗಳಾದ ಪುರುಷೊತ್ತಮ್ ಶೆಟ್ಟಿ, ಗುರ್ಮೆ ಸುರೇಶ್ ಶೆಟ್ಟಿ ಶುಭ, ಜೆರ್ರಿ ವಿನ್ಸೆಂಟ್ ಡಯಾಸ್, ಮಲಬಾರ್ ಗೋಲ್ಡ್ ನ ಶಾಖಾ ವ್ಯವಸ್ಥಾಪಕ ಹಫೀಝ್ ರೆಹಮಾನ್ ಭಾಗವಹಿಸಿ ಶುಭ‌ ಹಾರೈಸಿದರು.

ನಿತ್ಯಾನಂದ ನರಸಿಂಗೆ ಕಾರ್ಯಕ್ರಮ ನಿರೂಪಿಸಿದರು, ಆರ್‌ಕೆ ಬ್ರದರ್ಸ್‌ನ ರಾಮಕೃಷ್ಣ ನಾಯಕ್ ಸ್ವಾಗತಿಸಿದರು. ಲಕ್ಷ್ಮೀಶ್ ವಾಗ್ಲೆ ವಂದಿಸಿದರು. ಆರ್‌ಕೆ ಬ್ರದರ್ಸ್ ಸಂತೋಷ್ ವಾಗ್ಲೆ, ಲಕ್ಷ್ಮಣ್ ವಾಗ್ಲೆ, ರಮೇಶ್ ವಾಗ್ಲೆ, ಹರೀಶ್ ವಾಗ್ಲೆ ಮತ್ತು ಹಿರಿಯರಾದ ಗೋವಿಂದ ವಾಗ್ಲೆ, ಕುಟುಂಬ ಸದಸ್ಯರು ಉಪಸ್ಥಿತರಿದ್ದರು.