ನಾನ್ ಸಿಆರ್ ಝಡ್ ವ್ಯಾಪ್ತಿಯಲ್ಲಿ ಸಾಂಪ್ರದಾಯಿಕವಾಗಿ ಮುಳುಗಿ ಮರಳು ತೆಗೆಯಲು ಅವಕಾಶ ಕಲ್ಪಿಸಿ; ಉಡುಪಿ ಶಾಸಕ ರಘುಪತಿ ಭಟ್ ಅವರಿಂದ ಸಚಿವರಿಗೆ ಮನವಿ

ಉಡುಪಿ: ಕರ್ನಾಟಕದ ಕರಾವಳಿ ಭಾಗದ ನಾನ್ ಸಿಆರ್ ಝಡ್ ವ್ಯಾಪ್ತಿಯಲ್ಲಿ ಸಾಂಪ್ರದಾಯಿಕವಾಗಿ ಮಾನವ ಶ್ರಮದಿಂದ ಮುಳುಗಿ ಮರಳು ತೆಗೆಯಲು ಅವಕಾಶ ಕಲ್ಪಿಸುವಂತೆ ಶಾಸಕ ಕೆ ರಘುಪತಿ ಭಟ್ ಒತ್ತಾಯಿಸಿದ್ದಾರೆ. ಗಣಿ ಮತ್ತು ಭೂ ವಿಜ್ಞಾನ ಸಚಿವ ಹಾಲಪ್ಪ ಬಸಪ್ಪ ಆಚಾರ್ ಅಧ್ಯಕ್ಷತೆಯಲ್ಲಿ ಇಂದು ನಡೆದ ಸಭೆಯಲ್ಲಿ ಶಾಸಕರು ಆಗ್ರಹಪಡಿಸಿದ್ದಾರೆ. ಸಭೆಯಲ್ಲಿ ಕರ್ನಾಟಕದ ಕರಾವಳಿ ಭಾಗಕ್ಕೆ ಪ್ರತ್ಯೇಕ ಮರಳು ನೀತಿ ಜಾರಿಗೊಳಿಸುವ ಬಗ್ಗೆ ಚರ್ಚಿಸಿ CRZ ವ್ಯಾಪ್ತಿಯಲ್ಲಿ ಮರಳು ತೆಗೆಯಲು ಇರುವ ಕೆಲವೊಂದು ತಾಂತ್ರಿಕ ಸಮಸ್ಯೆಗಳನ್ನು ಸರಿಪಡಿಸಿ ಸುಗಮಗೊಳಿಸುವ […]

ಪಡುಬಿದ್ರಿ: ಚಿಕನ್ ಸ್ಟಾಲ್ ನಲ್ಲಿ ವಿದ್ಯುತ್ ಅವಘಡ; ಓರ್ವ ಸಾವು

ಉಡುಪಿ: ಚಿಕನ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಓರ್ವ ಸಾವನ್ನಪ್ಪಿ ಇನ್ನೋರ್ವ ಗಾಯಗೊಂಡ ಘಟನೆ ಬುಧವಾರ  ಪಡುಬಿದ್ರಿಯ ಗಿರಿ ಚಿಕನ್ ಸ್ಟಾಲ್ ನಲ್ಲಿ ನಡೆದಿದೆ. ಮೃತರನ್ನು ಕಂಚಿನಡ್ಕ ನಿವಾಸಿ 45 ವರ್ಷದ ಬಶೀರ್ ಎಂದು ಗುರುತಿಸಲಾಗಿದೆ. ಇಂದು ಮಧ್ಯಾಹ್ನ 2.30 ರ ವೇಳೆಗೆ ಬಶೀರ್ ಅಂಗಡಿಯಲ್ಲಿ ಕೋಳಿ ಸ್ವಚ್ಛಗೊಳಿಸಲು ಕೋಳಿಯನ್ನು ಮೆಷಿನ್ ಒಳಗೆ ಹಾಕುವ ಸಂದರ್ಭದಲ್ಲಿ ವಿದ್ಯುತ್ ಅವಘಡ ಉಂಟಾಗಿದೆ. ಈ ವೇಳೆ ಕಾರ್ಮಿಕ ಬಶೀರ್ ಸಾವನ್ನಪ್ಪಿದ್ದಾನೆ. ಈ ವೇಳೆ ಗಾಯಗೊಂಡ […]

ರಾಜ್ಯದ ಸಾಂಸ್ಕೃತಿಕ ಬ್ರ್ಯಾಂಡ್ ಆದ ಕಾರ್ಕಳ‌ ಉತ್ಸವ: ವಿ ಸುನಿಲ್ ಕುಮಾರ್

ಕಾರ್ಕಳ: ಹತ್ತು ದಿನಗಳ ಕಾಲ ವೈಭವವಾಗಿ ಸಂಪನ್ನಗೊಂಡ ಹಲವು ಹೆಗ್ಗಳಿಕೆಯ “ಕಾರ್ಕಳ ಉತ್ಸವ” ಈಗ ರಾಜ್ಯದ ಸಾಂಸ್ಕೃತಿಕ  “ಬ್ರ್ಯಾಂಡ್” ಆಗಿ ಪರಿವರ್ತನೆಗೊಂಡಿದೆ ಎಂದು ಇಂಧನ, ಕನ್ನಡ, ಸಂಸ್ಕೃತಿ ಸಚಿವ ವಿ. ಸುನೀಲ್ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ. ಮಾ.೧೦ ರಿಂದ ೨೦ರ ವರೆಗೆ ನಡೆದ ಕಾರ್ಕಳ ಉತ್ಸವ ಈಗ ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ಮಾತ್ರವಲ್ಲ‌ ಕಾರ್ಕಳವನ್ನು ರಾಜ್ಯ, ರಾಷ್ಟ್ರ ಹಾಗೂ ವಿದೇಶಗಳಲ್ಲಿಯೂ ಜನಪ್ರಿಯಗೊಳಿಸುವಲ್ಲಿ ಯಶಸ್ವಿಯಾಗಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈ ಉತ್ಸವವನ್ನು ಆಯೋಜಿಸಬೇಕೆಂಬ ಕಲ್ಪನೆ ಹುಟ್ಟಿದ್ದೆ ಒಂದು ವಿಶೇಷ ಸಂದರ್ಭದಲ್ಲಿ. […]

ಮೂಡುಪೆರಂಪಳ್ಳಿ ಕಂಬಿಗಾರ ಬಬ್ಬುಸ್ವಾಮಿ ಗುಡಿಯ ಶಿಲಾನ್ಯಾಸ ಕಾರ್ಯಕ್ರಮ

ಮಣಿಪಾಲ: ಮೂಡುಪೆರಂಪಳ್ಳಿ ಶ್ರೀ ಕಂಬಿಗಾರ ಶ್ರೀ ಬಬ್ಬುಸ್ವಾಮಿ ಮತ್ತು ಪರಿವಾರ ದೈವಗಳ ದೈವಸ್ಥಾನದ ಗುಡಿಯ ಶೀಲಾನ್ಯಾಸ ಕಾರ್ಯಕ್ರಮವು ಸನ್ನಿಧಾನದಲ್ಲಿ ನಡೆಯಿತು. ಸಮಾಜಸೇವಕ ಕೆ. ಕೃಷ್ಣಮೂರ್ತಿ ಆಚಾರ್ಯ ಮತ್ತು ಆಡಳಿತ ಸಮಿತಿ ಪದಾಧಿಕಾರಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು.

ಉಡುಪಿ ಜಿಲ್ಲೆಯ ಎಲ್ಲಾ ಜಾತ್ರಾ ಮಹೋತ್ಸವಗಳಲ್ಲಿ ಅನ್ಯಧರ್ಮೀಯರಿಗೆ ವ್ಯಾಪಾರಕ್ಕೆ ಅವಕಾಶ ನೀಡಬಾರದು: ವಿ.ಹಿಂ.ಪ. ಆಗ್ರಹ

ಉಡುಪಿ: ಜಿಲ್ಲೆಯ ಎಲ್ಲಾ ದೇವಸ್ಥಾನ ಹಾಗೂ ದೈವಸ್ಥಾನಗಳಲ್ಲಿ ನಡೆಯುವ ಜಾತ್ರಾ ಮಹೋತ್ಸವಗಳಲ್ಲಿ ವ್ಯಾಪಾರಕ್ಕೆ ಅನ್ಯಧರ್ಮೀಯರಿಗೆ ಅವಕಾಶ ನೀಡಬಾರದು ಎಂದು ವಿಶ್ವ ಹಿಂದು ಪರಿಷದ್ ಆಗ್ರಹಿಸಿದೆ. ಈ ದೇಶದ ಸಂವಿಧಾನಕ್ಕೆ ಬೆಲೆ ಕೊಡದ, ಈ ನೆಲದ ಕಾನೂನನ್ನು ಗೌರವಿಸದ ಮತ್ತು ಹಿಂದೂ ಸಮಾಜದ ಧಾರ್ಮಿಕ ನಂಬಿಕೆಗಳಿಗೆ ಪದೇ ಪದೇ ಅವಹೇಳನ ಮಾಡುವ ಮತಾಂಧರಿಗೆ ಉಡುಪಿ ಜಿಲ್ಲೆಯ ಯಾವುದೇ ದೇವಸ್ಥಾನ ಮತ್ತು ದೈವಸ್ಥಾನಗಳ ಜಾತ್ರೆಗಳಲ್ಲಿ ವ್ಯಾಪಾರಕ್ಕೆ ಅವಕಾಶ ನೀಡಬಾರದು ಎಂದು ವಿಎಚ್ ಪಿ ಒತ್ತಾಯಿಸಿದೆ. ಕಾಪು, ಪಡುಬಿದ್ರೆ, ಪೆರ್ಡೂರು, ಪೆರ್ಣಂಕಿಲ ದೇವಸ್ಥಾನಗಳಲ್ಲಿ […]