ಹಿಜಾಬ್ ತೀರ್ಪು; ನಾಳೆ (ಮಾ.15) ಉಡುಪಿ ಜಿಲ್ಲೆಯಾದ್ಯಂತ ಶಾಲಾ- ಕಾಲೇಜುಗಳಿಗೆ ರಜೆ ಘೋಷಣೆ
ಉಡುಪಿ: ಹಿಜಾಬ್ ಕುರಿತ ರಾಜ್ಯ ಹೈಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಉಡುಪಿ ಜಿಲ್ಲೆಯಾದ್ಯಂತ ಎಲ್ಲ ಶಾಲೆ, ಕಾಲೇಜುಗಳಿಗೆ ಮಾ.15 ರಂದು ರಜೆ ಘೋಷಿಸಲಾಗಿದೆ. ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಜಿಲ್ಲೆಯ ಶಾಲೆ, ಕಾಲೇಜುಗಳಿಗೆ ಮಂಗಳವಾರ ಒಂದು ದಿನದ ರಜೆ ನೀಡಲಾಗುವುದು. ಶಾಲಾ ಕಾಲೇಜುಗಳ ಸುತ್ತಮುತ್ತಲಿನ 200ಮೀಟರ್ ವ್ಯಾಪ್ತಿಯಲ್ಲಿ ಸೆಕ್ಷನ್ 144ರಂತೆ ನಿಷೇಧಾಜ್ಞೆ ಈಗಾಗಲೇ ಜಾರಿಯಲ್ಲಿದ್ದು, ಹೆಚ್ಚುವರಿ ಪೊಲೀಸ್ ಭದ್ರತೆಯನ್ನು ಒದಗಿಸಲಾಗುತ್ತದೆ ಎಂದು ಉಡುಪಿ ಜಿಲ್ಲಾಧಿಕಾರಿ ಕೂರ್ಮಾರಾವ್ ತಿಳಿಸಿದ್ದಾರೆ. ಅಲ್ಲದೆ ಜಿಲ್ಲೆಯಲ್ಲಿ ತೀರ್ಪಿಗೆ ಸಂಬಂಧಿಸಿ ಯಾವುದೇ ಪ್ರತಿಭಟನೆಯಾಗಲಿ, […]
ಭಾಷಾ, ಸಂಸ್ಕೃತಿ, ಕಲಾ ಸಂಭ್ರಮದ ಕಾರ್ಕಳ ಉತ್ಸವಕ್ಕೆ ರಾಜ್ಯಪಾಲರಿಂದ ಚಾಲನೆ
ಕಾರ್ಕಳ, ಮಾ.14,2022: ಕನ್ನಡ ನಾಡಿನ ಧರ್ಮ ಮತ್ತು ಸಂಸ್ಕೃತಿಯಲ್ಲಿ ಸಹೋದರತ್ವ ಮತ್ತು ಸಾಮರಸ್ಯದ ಮನೋಭಾವನೆ ತುಂಬಿದೆ ಎಂದು ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲೋಟ್ ಹೇಳಿದರು. ಸೋಮವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಜಿಲ್ಲಾಡಳಿತದಿಂದ ಆಯೋಜಿಸಲಾಗಿದ್ದ ಕಾರ್ಕಳ ಉತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕರ್ನಾಟಕದ ಸಂಸ್ಕೃತಿಯು ಪ್ರಪಂಚದ ಅತ್ಯಂತ ಪ್ರಾಚೀನ ಭಾರತೀಯ ಸಂಸ್ಕೃತಿಗಿಂತ ಭಿನ್ನವಾಗಿಲ್ಲ. ಕರ್ನಾಟಕದ ಪರಂಪರೆಯನ್ನು ಅದರ ವಾಸ್ತುಶಿಲ್ಪ, ಸಂಗೀತ, ಸಾಹಿತ್ಯ, ನೃತ್ಯ ಮತ್ತು ಕರಕುಶಲಗಳಿಂದ ತಿಳಿಯಬಹುದು ಮತ್ತು ಗುರುತಿಸಬಹುದು. ಕನ್ನಡನಾಡಿನ […]
ಉಡುಪಿ: ಕುಡುಬಿ ಸಮುದಾಯದಿಂದ ಹೋಳಿ ಆಚರಣೆ
ಉಡುಪಿ: ಮೂಡುಗುಡ್ಡೆ ಕುಡುಬಿ ಸಮುದಾಯದಿಂದ ನಗರದಲ್ಲಿ ಇಂದು ಹೋಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು. ಮುಂಜಾನೆಯೇ ಕೂಡುಕಟ್ಟಿನ ಎಲ್ಲಾ ಸದ್ಯಸರು ವೇಷ ಭೂಷಣ, ಗೆಜ್ಜೆ, ಗುಮ್ಮಟೆಯೊಂದಿಗೆ ಸುಮಾರು 75 ಜನ ಗುರಿಕಾರರ ಮನೆಗೆ ಬಂದು ಸೇರಿದ್ದರು. ಗುರಿಕಾರರ ಮನೆಯಲ್ಲಿ ಪ್ರತಿಷ್ಠೆ, ಹಾಡುಗಳನ್ನು ಹಾಡಿ, ಹೋಳಿ ಹಬ್ಬದ ಸಂಪ್ರದಾಯದಂತೆ ಕೋಲಾಟ, ಗುಮ್ಮಾಟೆ ನರ್ತನವನ್ನು ಮಾಡಿ, ಹೊರ ಗ್ರಾಮಕ್ಕೆ ಹೋಗಲು ಚಾಲನೆಯನ್ನು ನೀಡಲಾಯಿತು. ಅದರಂತೆ 5 ದಿನಗಳ ನಡೆಯುವ ಈ ಹೋಳಿ ಹಬ್ಬ ಆಚರಣೆಯ ಸದ್ಯಸರು ಗ್ರಾಮದಲ್ಲಿ ತಿರುಗಾಟ ಮಾಡಿ ಮಾ.18ರಂದು […]
ಕಾರ್ಕಳ ಉತ್ಸವ: ವಿದ್ಯುತ್ ದೀಪಗಳ ಅಲಂಕಾರದಿಂದ ಕಂಗೊಳಿಸುತ್ತಿದೆ ಕಾರ್ಕಳ
ಕಾರ್ಕಳ: ಕಾರ್ಕಳ ಉತ್ಸವದ ಹಿನ್ನೆಲೆಯಲ್ಲಿ ಗೊಮ್ಮಟ್ಟಬೆಟ್ಟ, ಚತುರ್ಮುಖ ಬಸದಿ, ಆನೆಕೆರೆ, ಅತ್ತೂರು ಸಂತಲಾರೆನ್ಸ್ ಬಸಿಲಿಕಾ, ರಾಮಸಮುದ್ರ, ಅನಂತಶಯನ ಶ್ರೀ ಕ್ಷೇತ್ರ ಸೇರಿದಂತೆ ಐತಿಹಾಸಿಕ ಯಾತ್ರಾಸ್ಥಳಗಳು ವಿದ್ಯುತ್ ದೀಪಗಳಿಂದ ಕಂಗೋಳಿಸುತ್ತಿವೆ. ವಿವಿಧ ವಿನ್ಯಾಸ ಹಾಗೂ ಬಣ್ಣ ಬಣ್ಣದ ದೀಪಲಂಕಾರದಿಂದ ಪ್ರೇಕ್ಷಕರ ಮನಸೂರೆಗೊಳಿಸಿದೆ. ಬಹುತೇಕ ಮಂದಿ ತಮ್ಮಲ್ಲಿರುವ ಮೊಬೈಲ್ ಕ್ಯಾಮರ ಮೂಲಕ ದೃಶ್ಯಾವಳಿಗಳನ್ನು ಸೆರೆಹಿಡಿಯಲು ಮುಗಿಬೀಳುತ್ತಿದ್ದರು. ಇನ್ನೂ ಕೆಲವರು ಸೆಲ್ಫಿ ಸ್ಟಾಂಡ್, ಡ್ರೋಣ್ ಅಳವಡಿಸಿ ಚಿತ್ರೀಕರಣ ನಡೆಸುತ್ತಿದ್ದರು. ಟ್ರಾಫಿಕ್ ಜಾಮ್ ಕಾರ್ಕಳ ಉತ್ಸವದ ದೀಪಾಲಂಕಾರ ಉದ್ಘಾಟನೆಯಾದ ಬಳಿಕ 7:30 ರಿಂದ […]
ಗಿರಿಜಾ ಗ್ರೂಪ್ ಆಫ್ ಕನ್ಸರ್ನ್ಸ್; ಉಚಿತ ವೈದ್ಯಕೀಯ ತಪಾಸಣೆ ಶಿಬಿರ ಉದ್ಘಾಟನೆ
ಉಡುಪಿ ತಲ್ಲೂರು ಫ್ಯಾಮಿಲಿ ಟ್ರಸ್ಟ್, ನವೋದಯ ಸ್ವಸಹಾಯ ಸಂಘ ಹಾಗೂ ಉಡುಪಿ ಗಿರಿಜಾ ಗ್ರೂಫ್ ಆಫ್ ಕಾನ್ಸರ್ನ್ಸ್ ಸಂಯುಕ್ತ ಆಶ್ರಯದಲ್ಲಿ ಮಹಿಳೆಯರಿಗೆ ಉಚಿತ ವೈದ್ಯಕೀಯ ತಪಾಸಣೆ ಶಿಬಿರವನ್ನು ನಗರದ ಪೈ ಸೇಲ್ಸ್ ಹಿಂಬದಿಯ ಮೆಡಿಕಲ್ ಸೆಂಟರ್ ನಲ್ಲಿ ನಡೆಯಿತು. ಉಡುಪಿ ಪೂರ್ಣಪ್ರಜ್ಞ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ.ಬಿ. ಜಗದೀಶ್ ಶೆಟ್ಟಿ ಶಿಬಿರವನ್ನು ಉದ್ಘಾಟಿಸಿ ಶುಭಹಾರೈಸಿದರು. ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞೆ ಡಾ. ರಂಜಿತಾ ಎಸ್. ನಾಯಕ್ ಅವರು, ಸ್ತ್ರಿ ರೋಗಗಳ ಬಗ್ಗೆ ಮಾಹಿತಿ ನೀಡಿದರು. ತಾಲ್ಲೂರು ಫ್ಯಾಮಿಲಿ […]