ಯುವ ಸಮುದಾಯದಿಂದ ದೇಶದ ಅಭಿವೃದ್ಧಿ: ಜಿಲ್ಲಾಧಿಕಾರಿ ಕೂರ್ಮರಾವ್ ಎಂ

ಉಡುಪಿ, ಮಾ.7: ರಾಷ್ಟ್ರದ ಅಭಿವೃದ್ಧಿಯಲ್ಲಿ ಯುವ ಸಮುದಾಯ ಹಾಗೂ ಯುವಕ ಹಾಗೂ ಯುವತಿ ಮಂಡಲಗಳ ಪಾತ್ರ ಬಹು ಮುಖ್ಯವಾಗಿದ್ದು, ವಿವೇಕಾನಂದರ ನುಡಿಯಂತೆ ಯುವ ಜನತೆಯಿಂದ ಸದೃಢ ಭಾರತ ನಿರ್ಮಾಣ ಮಾಡಲು ಸಾಧ್ಯ ಎಂದು ಜಿಲ್ಲಾಧಿಕಾರಿ ಕೂರ್ಮರಾವ್ ಎಂ ಹೇಳಿದರು. ಅವರು ಇಂದು ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನ ಆಡಿಟೋರಿಯಂನಲ್ಲಿ, ನೆಹರು ಯುವ ಕೇಂದ್ರ ಉಡುಪಿ ಜಿಲ್ಲೆ ನೇತೃತ್ವದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಪೂರ್ಣಪ್ರಜ್ಞ ಕಾಲೇಜು ಉಡುಪಿ, ಪೂರ್ಣಪ್ರಜ್ಞ ಇನಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಹಾಗೂ ಉಡುಪಿ ಜಿಲ್ಲೆಯ ಯುವಕ, ಯುವತಿ […]

ಮಣಿಪಾಲದ ಪ್ರಧಾನಮಂತ್ರಿ ಕೌಶಲ್ಯ ಕೇಂದ್ರದಲ್ಲಿ ತರಬೇತಿ ಕಾರ್ಯಾಗಾರ; ಅರ್ಜಿ ಆಹ್ವಾನ

ಉಡುಪಿ: ಸ್ವ ಉದ್ಯೋಗ, ಉಚಿತ ತರಬೇತಿ ಮತ್ತು ಉದ್ಯೋಗ ಅವಕಾಶವನ್ನು ಸೃಷ್ಟಿಸುವ ಪ್ರಧಾನ ಮಂತ್ರಿ ಕೌಶಲ್ಯ ಯೋಜನೆಯ 3ನೇ ಆವೃತ್ತಿಯ ತರಬೇತಿ ಕಾರ್ಯಾಗಾರವು ಮಣಿಪಾಲದಲ್ಲಿರುವ ಪ್ರಧಾನ ಮಂತ್ರಿ ಕೌಶಲ್ಯ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ರೋಮನ್ ಸೆಂಟರ್ ಹೆಡ್ ರಾಘವೇಂದ್ರ ರಾವ್ ತಿಳಿಸಿದ್ದಾರೆ. ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ತರಬೇತಿಯಲ್ಲಿ‌ 15 ವರ್ಷದಿಂದ 45 ವರ್ಷದ ವರೆಗಿನ ಯುವಕ, ಯುವತಿಯರು, ಮಹಿಳೆ ಹಾಗೂ ಪುರುಷರು ಭಾಗವಹಿಸಬಹುದು. ಮಾ.15ರ ವರೆಗೆ ಅರ್ಜಿ ಸಲ್ಲಿಸಲು ಅವಕಾಶವಿದ್ದು, ಒಂದು ಬ್ಯಾಚ್‌ನಲ್ಲಿ 30 […]

ಉಡುಪಿ: ಮಾ.9ಕ್ಕೆ ಪವರ್ ಸಂಸ್ಥೆಯಿಂದ ‘ಚಾರ್ಟರ್ ಡೇ’, ಮಹಿಳಾ ದಿನಾಚರಣೆ ಕಾರ್ಯಕ್ರಮ

ಉಡುಪಿ: ಪವರ್ ಸಂಸ್ಥೆಯ ಆಶ್ರಯದಲ್ಲಿ ಚಾರ್ಟರ್ ಡೇ ಹಾಗೂ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವು ಮಣಿಪಾಲದ ಕಂಟ್ರಿ ಇನ್ ಸಭಾಂಗಣದಲ್ಲಿ ಇದೇ ಮಾ.9 ರಂದು ಸಂಜೆ 5.30 ಕ್ಕೆ ನಡೆಯಲಿದೆ ಎಂದು ಪವರ್ ಸಂಸ್ಥೆಯ ಅಧ್ಯಕ್ಷೆ ತಾರಾ ತಿಮ್ಮಯ್ಯ ಹೇಳಿದರು. ನಗರದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿದರು. ಇದೇ ಸಂದರ್ಭದಲ್ಲಿ ಪವರ್ ಸಂಸ್ಥೆಯ 2022-23ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಜರುಗಲಿದೆ. ಮಹಿಳಾ ಸಾಧಕಿ ಕುಂಭಾಶಿಯ ರಾಧಾ ದಾಸ್ ಅವರನ್ನು ಸನ್ಮಾನಿಸಲಾಗುವುದು. ಕನ್ನಡ […]

ನೀವು ಧೂಮಪಾನ ಮಾಡ್ತೀರಾ?ಹಾಗಾದ್ರೆ ಭವಿಷ್ಯದಲ್ಲಿ ನಿಮ್ಮ ಮೊಮ್ಮಗಳು ದಢೂತಿಯಾಗ್ತಾರಂತೆ!

ನವದೆಹಲಿ: ನೀವು ಧೂಮಪಾನ ಮಾಡ್ತೀರಾ? ಹಾಗಾದ್ರೆ ಭವಿಷ್ಯದಲ್ಲಿ ನಿಮ್ಮ ಮೊಮ್ಮಗಳು ದಢೂತಿಯಾಗ್ತಾರಂತೆ! ಹೌದು. ಪ್ರೌಢಾವಸ್ಥೆಗೆ ಮುನ್ನ ಅಜ್ಜ ಅಥವಾ ಮುತ್ತಜ್ಜರು ಧೂಮಪಾನ ಮಾಡುತ್ತಿದ್ದರೆ ಅದು ಮಹಿಳೆಯರು ಮತ್ತು ಹುಡುಗಿಯರ ಮೇಲೆ ಪರಿಣಾಮ ಬೀರುತ್ತದಂತೆ. ಇದು  ಸ್ಥೂಲಕಾಯವಾಗುವಂತೆ ಮಾಡುತ್ತದೆ  ಎಂದು ಯುನೈಟೆಡ್ ಕಿಂಗ್‌ಡಂನಲ್ಲಿ ನಡೆದ ಅಧ್ಯಯನದಿಂದ ತಿಳಿದು ಬಂದಿದೆ. ಯುನೈಟೆಡ್ ಕಿಂಗ್‌ಡಂನಲ್ಲಿ 90ರ ದಶಕದ 30 ವರ್ಷದ ಮಕ್ಕಳ ಮೇಲೆ ನಡೆಸಿದ ಸಂಶೋಧನೆಯಲ್ಲಿ ಈ ಸಂಗತಿ  ಬಹಿರಂಗವಾಗಿದೆ. ಯೌವನಾವಸ್ಥೆಗೆ ಮೊದಲು ಕೆಲವು ರಾಸಾಯನಿಕ ಹಾಗೂ ಕೆಟ್ಟ ಅಭ್ಯಾಸಗಳಿಗೆ ಪುರುಷರು […]

ಕೊರಂಗ್ರಪಾಡಿಯಲ್ಲಿ ವಿಷ ಸೇವಿಸಿ ವೃದ್ಧೆ ಆತ್ಮಹತ್ಯೆ

ವಿಷ ಪದಾರ್ಥ ಸೇವಿಸಿ ವೃದ್ದೆಯೋರ್ವಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಉಡುಪಿ ತಾಲೂಕಿನ ಕೊರಂಗ್ರಪಾಡಿ ಗ್ರಾಮದಲ್ಲಿ ನಡೆದಿದೆ. ಕೊರಂಗ್ರಪಾಡಿ ಗ್ರಾಮದ ನಿವಾಸಿ 76 ವರ್ಷದ ಕಮಲಾ ಡಿ. ಶೆಣೈ ಆತ್ಮಹತ್ಯೆ ಮಾಡಿಕೊಂಡ ವೃದ್ಧೆ. ಇವರು ಕಳೆದ ಒಂದು ವರ್ಷದಿಂದ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರು. ಮಾ.3 ರಂದು ಬೆಳಿಗ್ಗೆ 9:30ರ ಸುಮಾರಿಗೆ  ಕಮಲಾ ಅವರ ಆರೋಗ್ಯದಲ್ಲಿ ಏರುಪೇರು ಉಂಟಾಗಿತ್ತು. ಕೂಡಲೇ ಅವರನ್ನು ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಯಿತು‌. ಅಲ್ಲಿ ಪರೀಕ್ಷಿಸಿದ ವೈದ್ಯರು ಯಾವುದೋ ವಿಷ ಪದಾರ್ಥ ಸೇವಿಸಿರುವುದಾಗಿ ತಿಳಿಸಿದ್ದಾರೆ. ಆಸ್ಪತ್ರೆಯಲ್ಲಿ […]