ಉಕ್ರೇನ್ ರಾಜಧಾನಿಯಲ್ಲಿ ಮತ್ತೊಬ್ಬ ಭಾರತೀಯ ವಿದ್ಯಾರ್ಥಿಗೆ ಗುಂಡೇಟು !

ರಷ್ಯಾ ಮತ್ತು ಉಕ್ರೇನ್ ನಡುವಿನ ಕದನದ  ಭಾರತೀಯ ವಿದ್ಯಾರ್ಥಿ ನವೀನ್​ ಸಾವಿನ ಪ್ರಕರಣ ಇನ್ನೂ ಮಾಸಿಲ್ಲ. ಅಷ್ಟರಲ್ಲಿ ಉಕ್ರೇನ್ ರಾಜಧಾನಿ ಕೀವ್​​ದಲ್ಲಿ ಮತ್ತೊಬ್ಬ ಭಾರತೀಯ ವಿದ್ಯಾರ್ಥಿಗೆ ಗುಂಡೇಟು ಬಿದ್ದಿದ್ದು, ವಿದ್ಯಾರ್ಥಿ ಆಸ್ಪತ್ರೆಗೆ ದಾಖಲಾಗಿದ್ದಾರೆಂದು ತಿಳಿದುಬಂದಿದೆ. ಕೀವ್‌ನಿಂದ ಬರುತ್ತಿದ್ದ ವಿದ್ಯಾರ್ಥಿಯೊಬ್ಬನಿಗೆ ಗುಂಡು ತಗುಲಿದ್ದು, ಆತ ಮಾರ್ಗ ಮಧ್ಯದಲ್ಲಿ ವಾಪಸ್ಸಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಯುದ್ಧ ಪೀಡಿತ ದೇಶ ಉಕ್ರೇನ್‌ನಿಂದ ವಿದ್ಯಾರ್ಥಿಗಳು ಪಲಾಯನ ಮಾಡುತ್ತಿದ್ದು, ಭಾರತಕ್ಕೆ ಸುರಕ್ಷಿತವಾಗಿ ಮರಳಲು ಪೋಲೆಂಡ್‌ನ ಗಡಿಯನ್ನು ತಲುಪಲು ಪ್ರಯತ್ನಿಸುತ್ತಿದ್ದಾರೆ.  

ಕಾರ್ಕಳ: ಪೂರ್ಣಿಮಾ ಸಿಲ್ಕ್ಸ್ ಮಳಿಗೆಗೆ ಸಂಸದ ಬಿ.ವೈ.ರಾಘವೇಂದ್ರ ಭೇಟಿ

ಕಾರ್ಕಳ: ಕಾರ್ಕಳ ಜೋಡುರಸ್ತೆ ಪೂರ್ಣಿಮಾ ಪೂರ್ಣಿಮಾ ಸಿಲ್ಕ್ಸ್ ವಸ್ತ್ರ ಮಳಿಗೆಗೆ ಶಿವಮೊಗ್ಗ ಸಂಸದ ರಾಘವೇಂದ್ರ ಯಡಿಯೂರಪ್ಪ ಭೇಟಿ ನೀಡಿದರು. ಅವರು, ಯಾವುದೇ ನಗರ, ಪಟ್ಟಣ ಇರಲಿ ಅದರ ಅಭಿವೃದ್ಧಿ ಕಾರ್ಯದಲ್ಲಿ ಬೃಹತ್ ಮಾಲ್‌ಗಳ ಪಾತ್ರ ಮಹತ್ವದಾಗಿದ್ದು, ಪೂರ್ಣಿಮಾ ಲೈಫ್ ಸ್ಟೈಲ್ ನಾಗರಿಕರಿಗೆ ಹೊಸತನ ನೀಡಲಿ ಎಂದು ಇದೇ ಸಂದರ್ಭದಲ್ಲಿ ರಾಘವೇಂದ್ರ ಯಡಿಯೂರಪ್ಪ ಹೇಳಿದರು. ಈ ಸಂದರ್ಭದಲ್ಲಿ ರಾಘವೇಂದ್ರ ಯಡಿಯೂರಪ್ಪ ರವರನ್ನು ರವಿ ಪ್ರಕಾಶ್ ಪ್ರಭು ರವರು ಶಾಲು ಹೊದಿಸಿ ಫಲಪುಷ್ಪ ನೀಡಿ ಗೌರವಿಸಿದರು. ಮಾ.10ಕ್ಕೆ ಪ್ರೈಮ್ ಮಾಲ್‌ನಲ್ಲಿ […]

ಉಕ್ರೇನ್ ನಲ್ಲಿ ಭಾರತೀಯರನ್ನು ಕೆಟ್ಟದಾಗಿ ನಡೆಸಿಕೊಳ್ಳಲಾಗುತ್ತಿದೆ; ಬೇಸರ ಹೊರಹಾಕಿದ ಪರ್ಕಳದ ವಿದ್ಯಾರ್ಥಿ ನಿಯಮ್ ರಾಘವೇಂದ್ರ.!

ಉಡುಪಿ: ಉಕ್ರೇನ್‌ ನಲ್ಲಿ ಭಾರತೀಯರನ್ನು ವಿಪರೀತ ಕೆಟ್ಟದಾಗಿ ನಡೆಸಿಕೊಳ್ಳಲಾಗುತ್ತಿದೆ. ಭಾರತೀಯರಿಗೆ ರೈಲುಗಳಿಗೆ ಹತ್ತಲೂ ಕೂಡ ಬಿಡುತ್ತಿಲ್ಲ. ತುಂಬಾ ಚಿತ್ರಹಿಂಸೆ ನೀಡುತ್ತಿದ್ದಾರೆ ಎಂದು ಉಕ್ರೇನ್ ನ ವಿನ್ನಯ್ಟ್ಸಿಯಾ ನ್ಯಾಷನಲ್ ಮೆಡಿಕಲ್ ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿ ಸದ್ಯ ದೆಹಲಿಗೆ ವಾಪಾಸಾಗಿರುವ ಪರ್ಕಳದ ನಿವಾಸಿ ನಿಯಮ್ ರಾಘವೇಂದ್ರ ಬೇಸರ ಹೊರಹಾಕಿದ್ದಾರೆ. ಗುರುವಾರ ಮುಂಜಾನೆ 6.30ಕ್ಕೆ ಮುಂಬೈ ತಲುಪಿದ ನಿಯಮ್, ನಂತರ ದೆಹಲಿಯಲ್ಲಿರುವ ಹೆತ್ತವರ ಮಡಿಲಿಗೆ ಸೇರಿದ್ದಾರೆ. ಉಕ್ರೇನ್‌ ನಲ್ಲಿ ಎಲ್ಲಿಗೆ ಹೋದರೂ ಮೊದಲು ಅಲ್ಲಿಯ ಜನರಿಗೆ ಆದ್ಯತೆ ನೀಡುವುದಲ್ಲದೆ ಭಾರತೀಯರೊಂದಿಗೆ […]

ಕುಂದಾಪುರ: ಕಾರು ಡಿಕ್ಕಿ ಹೊಡೆದು ರಸ್ತೆ ದಾಟುತ್ತಿದ್ದ ಕೂಲಿ ಕಾರ್ಮಿಕ ಮೃತ್ಯು

ಕುಂದಾಪುರ: ಹೆದ್ದಾರಿ ದಾಟುತ್ತಿದ್ದ ವೇಳೆ ಕಾರು ಡಿಕ್ಕಿಯಾಗಿ ಕಾರ್ಮಿಕನೋರ್ವ ಸ್ಥಳದಲ್ಲೇ ಸಾವನ್ನಪ್ಪಿದ ದಾರುಣ ಘಟನೆ ಕುಂದಾಪುರ ನೆಹರೂ ಮೈದಾನದ ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಗುರುವಾರ ಸಂಜೆ ಸಂಭವಿಸಿದೆ. ಮೃತಪಟ್ಟ ವ್ಯಕ್ತಿಯನ್ನು ವಲಸೆ ಕೂಲಿ ಕಾರ್ಮಿಕ ಮೂಲತಃ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲ್ಲೂಕಿನ ಸುರೇಬಾನ ಗ್ರಾಮದ 32 ವರ್ಷದ ಶಿವಪ್ಪ ಎಂದು ಗುರುತಿಸಲಾಗಿದೆ. ಇವರು ಸಂಜೆ 7.45 ರ ಸುಮಾರಿಗೆ ಬಲ ಬದಿಯ ಸರ್ವೀಸ್ ರಸ್ತೆಯಿಂದ ಎಡ ಬದಿಯ ಸರ್ವಿಸ್ ರಸ್ತೆಗೆ ಬರಲು ಹೆದ್ದಾರಿ ದಾಟುತ್ತಿದ್ದರು. ಈ […]

ಮಣಿಪಾಲ: ವಿಪರೀತ ಸಾಲ ಮಾಡಿಕೊಂಡಿದ್ದ ವ್ಯಕ್ತಿ ಆತ್ಮಹತ್ಯೆ

ಮಣಿಪಾಲ: ಸಾಲ ತೀರಿಸಲಾಗದ ಚಿಂತೆಯಲ್ಲಿದ್ದ ವ್ಯಕ್ತಿಯೊಬ್ಬರು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಉಡುಪಿ ತಾಲೂಕಿನ ಹೆರ್ಗಾ ಗ್ರಾಮದ ಕೊಡಂಗೆ ಎಂಬಲ್ಲಿ ಗುರುವಾರ ನಡೆದಿದೆ. ಮೃತರನ್ನು ಹೆರ್ಗಾ ಗ್ರಾಮದ ಕೊಡಂಗೆ ನಿವಾಸಿ ಯಶೋಧರ ಶೆಟ್ಟಿ ಎಂದು ಗುರುತಿಸಲಾಗಿದೆ. ಇವರು ಬ್ಯಾಂಕ್, ಪೈನಾನ್ಸ್ ಮತ್ತು ಇತರೆ ಕೈ ಸಾಲ ಮಾಡಿಕೊಂಡಿದ್ದರು. ಆದರೆ ಸಾಲ ತೀರಿಸಲು ಅಸಾಧ್ಯವಾಗಿದ್ದು, ಇದೇ ಚಿಂತೆಯಲ್ಲಿದ್ದ ಯಶೋಧರ್ ಅವರು ಗುರುವಾರ ಬೆಳಿಗ್ಗೆ 7:30ರ ಸುಮಾರಿಗೆ ಮನೆಯ ಅಡುಗೆ ಕೋಣೆಯ ಮರದ ಜಂತಿಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. […]