ಸಿಎಂ ಬೊಮ್ಮಾಯಿ ಅವರಿಂದ ಜನಪರ ಬಜೆಟ್ ಮಂಡನೆ; ನಯನಾ ಗಣೇಶ್ ಹರ್ಷ

ಉಡುಪಿ: ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಮಂಡಿಸಿರುವ 2022-23 ಸಾಲಿನ ರಾಜ್ಯ ಬಜೆಟ್ ಸರ್ವಸ್ಪರ್ಶಿ ಮತ್ತು ಜನಪರ ಬಜೆಟ್ ಯೆಂದು ಬಿಜೆಪಿ ರಾಜ್ಯ ಉಪಾಧ್ಯಕ್ಷೆ ನಯನಾ ಗಣೇಶ್ ಹರ್ಷ ವ್ಯಕ್ತಪಡಿಸಿದ್ದಾರೆ. ಸರ್ವರಿಗೆ ಸೂರು ಯೋಜನೆಯಡಿ 5 ಲಕ್ಷ ಹೊಸ ಮನೆಗಳ ನಿರ್ಮಾಣ, ವೈದ್ಯಕೀಯ ಸೌಲಭ್ಯಗಳಿಗಾಗಿ ಯಶಸ್ವಿನಿ ವಿಮಾ ಯೋಜನೆ ಮತ್ತೆ ಜಾರಿಗೆ ತರಲಾಗಿದ್ದು, ವಿಧವಾ ವೇತನ, ಆಶಾ ಕಾರ್ಯಕರ್ತೆಯರ ಮತ್ತು ಬಿಸಿಯೂಟ ಸಹಾಯಕರ ಗೌರವ ಧನವನ್ನು ಹೆಚ್ಚಿಸಲಾಗಿದೆ, ಕಾಶಿ ಯಾತ್ರೆಗೆ ತೆರಳುವ ಭಕ್ತರಿಗೆ 5 ಸಾವಿರ ಸಹಾಯ ಧನ, […]

ಕಾಪು: ಬೈಕ್ ಗೆ ಟಿಪ್ಪರ್ ಡಿಕ್ಕಿ: ಸವಾರ ಸ್ಥಳದಲ್ಲೇ ಮೃತ್ಯು

ಕಾಪು: ಬೈಕ್ ಗೆ ಟಿಪ್ಪರ್ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ‌ ಮೃತಪಟ್ಟ ಘಟನೆ ಕಾಪು ತಾಲೂಕಿನ ಇನ್ನಂಜೆ‌ – ಕಲ್ಲುಗುಡ್ಡೆ ರಸ್ತೆಯಲ್ಲಿ ಶುಕ್ರವಾರ ಬೆಳಗ್ಗೆ ನಡೆದಿದೆ. ಮೃತ ಬೈಕ್ ಸವಾರನನ್ನು ಕಾಪು ಕೋತಲಕಟ್ಟೆ ದಂಡತೀರ್ಥ ನಿವಾಸಿ 31 ವರ್ಷದ ಸುನೀಲ್ ಕುಮಾರ್ ಎಂದು ಗುರುತಿಸಲಾಗಿದೆ. ಇನ್ನಂಜೆ‌ – ಕಲ್ಲುಗುಡ್ಡೆ – ಬಂಟಕಲ್‌ ರಸ್ತೆಯಲ್ಲಿ ಸಂಚರಿಸುತ್ತಿದ್ದ ಬೈಕ್‌ಗೆ ಟಿಪ್ಪರ್ ಢಿಕ್ಕಿ ಹೊಡೆದ ಪರಿಣಾಮ ಈ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಟಿಪ್ಪರ್ ನ ಹಿಂಬದಿಯ ಚಕ್ರದಡಿಗೆ ಸಿಲುಕಿದ […]

ಕುಂದಾಪುರ: ಮೂರು ವರ್ಷದ ಪ್ರೀತಿ ತಿರಸ್ಕರಿಸಿದ ಯುವತಿ; ಮನನೊಂದ ಪ್ರಿಯಕರ ನೇಣಿಗೆ ಶರಣು.!

ಕುಂದಾಪುರ: ಯುವತಿ ಪ್ರೀತಿ ತಿರಸ್ಕೃರಿಸಿದ ಹಿನ್ನೆಲೆಯಲ್ಲಿ ಮಾನಸಿಕವಾಗಿ ಮನನೊಂದ ಯುವಕನೋರ್ವ ನೇಣಿಗೆ ಶರಣಾದ ಘಟನೆ ಕುಂದಾಪುರ ತಾಲೂಕಿನ ವಂಡ್ಸೆ ಗ್ರಾಮದಲ್ಲಿ ಗುರುವಾರ ನಡೆದಿದೆ. ವಂಡ್ಸೆ ಗ್ರಾಮದ ರಿಜ್ವಾನ್ ಆತ್ಮಹತ್ಯೆ ಮಾಡಿಕೊಂಡ ಯುವಕ. ಈತ ಸುಮಾರು 3 ವರ್ಷಗಳಿಂದ ಗಂಗೊಳ್ಳಿಯ ಉಷಾ ಎಂಬ ಯುವತಿಯನ್ನು ಪ್ರೀತಿಸುತ್ತಿದ್ದನು ಎನ್ನಲಾಗಿದೆ. ಆದರೆ, ಇತ್ತೀಚಿಗೆ ಯುವತಿ ಪ್ರೀತಿ ತಿರಸ್ಕರಿಸಿದ್ದು, ಇದರಿಂದ  ರಿಜ್ವಾನ್ ಮಾನಸಿಕವಾಗಿ ಕುಗ್ಗಿಹೋಗಿದ್ದನು. ಎಂದು ತಿಳಿದುಬಂದಿದೆ. ಇದೇ ವಿಚಾರದಲ್ಲಿ ಮನನೊಂದು ಮನೆಯಲ್ಲಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದನು. ಆ ಬಳಿಕ ಮನೆಯವರು , ಆತ […]

ಬಂತು ಬಂತು ಟೇಸ್ಟ್ ಟಿ.ವಿ: ಇನ್ನು ಮುಂದೆ ಟಿ.ವಿ ಪರದೆಯಲ್ಲೇ ಸವೀರಿ  ಸಖತ್ ರುಚಿ

ಟೋಕಿಯೊ: ತಂತ್ರಜ್ಞಾನ ಬಹಳ ವೇಗವಾಗಿ ಮುಂದುವರಿಯುತ್ತಲೇ ಇದೆ. ಸ್ಮಾರ್ಟ್ ಟಿವಿ, ಟಚ್ ಟಿವಿ ಅಬ್ಬರದ ನಡುವೆ ಇದೀಗ ಎಲೆಕ್ಟ್ರಾನಿಕ್ಸ್ ನ ದಿಗ್ಗಜ ದೇಶ  ಜಪಾನ್, ಒಂದು ಹೆಜ್ಜೆ ಮುಂದೆ ಹೋಗಿ ಪರದಯ ಮೇಲಿಂದ ರುಚಿಯನ್ನೂ ನೋಡಬಹುದಾದ ಟಿವಿಯನ್ನು ಅಭಿವೃದ್ಧಿಪಡಿಸಿದ್ದು ಟೇಸ್ಟ್ ಟಿವಿ ಈಗ ಸಖತ್ ಸುದ್ದಿಯಲ್ಲಿದೆ. ಅಚ್ಚರಿಯಾದರೂ ಇದು ಸತ್ಯ. ನೆಕ್ಕಬಹುದಾದ ಟಿವಿ ಪರದೆಯನ್ನು ಜಪಾನ್ ಅಭಿವೃದ್ಧಿಪಡಿಸಿದ್ದು ಹಲವು ವಿಧವಾದ ಆಹಾರದ ರುಚಿಗಳನ್ನು ಈ ಟಿವಿಯಲ್ಲಿ ಪ್ರೇಕ್ಷಕರು  ಆಸ್ವಾದಿಸಬಹುದು. ಇದನ್ನು ಟೇಸ್ಟ್ ಟಿವಿ (ಟಿಟಿಟಿವಿ) ಎಂದು ಕರೆಯಲಾಗುತ್ತಿದ್ದು, ಟಿ […]

ಮಲ್ಪೆ: ಚೂರಿಯಿಂದ ಇರಿದು ಮೀನುಗಾರನ ಕೊಲೆಗೆ ಯತ್ನ; ದೂರು ದಾಖಲು

ಮಲ್ಪೆ: ಕ್ಷುಲಕ ಕಾರಣಕ್ಕಾಗಿ ಮೀನುಗಾರಿಕಾ ಬಂದರಿನಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕನೋರ್ವ ಸಹ ಕಾರ್ಮಿಕನಿಗೆ ಚೂರಿಯಿಂದ ಇರಿದು ಕೊಲೆ ಮಾಡಲು ಯತ್ನಿಸಿರುವ ಘಟನೆ ಮಲ್ಪೆಯಲ್ಲಿ ನಡೆದಿದೆ. ಒರಿಸ್ಸಾ ಮೂಲದ ಅಧಿಕಾಂತ ಮಲ್ಲಿಕ್ ಹಾಗೂ ಅರುಣ್ ಮಲ್ಲಿಕ್ ಎಂಬವರು ಮಲ್ಪೆ ಬಂದರಿನಲ್ಲಿ ಕೆಲಸ ಮಾಡಿಕೊಂಡಿದ್ದು, ಇವರ ಮಧ್ಯೆ ಕೆಲದಿನಗಳಿಂದ ಮೊಬೈಲ್ ವಿಚಾರಕ್ಕೆ ಸಂಬಂಧಿಸಿ ವೈಮನಸ್ಸು ಉಂಟಾಗಿತ್ತು. ಬುಧವಾರ ರಾತ್ರಿ ಈ ವಿಚಾರ ವಿಕೋಪಕ್ಕೆ ತಿರುಗಿದ್ದು, ಅರುಣ್ ತನ್ನ ಸಹ ಕಾರ್ಮಿಕನಾದ ಅಧಿಕಾಂತ ಕುತ್ತಿಗೆಗೆ ಚೂರಿಯಿಂದ ಇರಿದಿದ್ದಾನೆ. ಈ ವೇಳೆ ಅಧಿಕಾಂತ […]