ಪ್ರಧಾನಿ ನರೇಂದ್ರ ಮೋದಿ ಮತ್ತು ಹಿಂದೂ ಕಾರ್ಯಕರ್ತರ ಶ್ರೇಯೋಭಿವೃದ್ಧಿಗಾಗಿ ಮಹಾರುದ್ರ ಯಾಗ ಸಂಪನ್ನ

ಟೀಮ್ ಮೋದಿ ಕಾಪು ವಲಯದ ವತಿಯಿಂದ ಬಿಜೆಪಿ ಮುಖಂಡ ಯಶ್ ಪಾಲ್ ಸುವರ್ಣ ರವರ ನೇತೃತ್ವದಲ್ಲಿ ಪ್ರಧಾನಿ ಶ್ರೀ ನರೇಂದ್ರ ಮೋದಿ ಹಾಗೂ ಹಿಂದೂ ಕಾರ್ಯಕರ್ತರ ಶ್ರೇಯೋಭಿವೃದ್ಧಿಯೊಂದಿಗೆ ಲೋಕ ಕಲ್ಯಾಣಾರ್ಥದ ಸಂಕಲ್ಪದೊಂದಿಗೆ ಆಯೋಜಿಸಿದ್ದ ಮಹಾರುದ್ರ ಯಾಗ ಮಡುಂಬು‌ ಮಹಾಗಣಪತಿ ದೇವಸ್ಥಾನದಲ್ಲಿ ಸಂಪನ್ನಗೊಂಡಿತು. ಜ್ಯೋತಿರ್ವಿದ್ವಾನ್ ಪ್ರಕಾಶ್ ಅಮ್ಮಣ್ಣಾಯ ರವರ ಮಾರ್ಗದರ್ಶನದಲ್ಲಿ, ಪುರೋಹಿತರಾದ ಶ್ರೀವತ್ಸ ಭಟ್ ಹಾಗೂ ಶ್ರೀ ಜನಾರ್ಧನ ತಂತ್ರಿ ನೇತೃತ್ವದಲ್ಲಿ ನಡೆದ ಮಹಾರುದ್ರ ಯಾಗದಲ್ಲಿ ಯಶ್ ಪಾಲ್ ಸುವರ್ಣ ಭಾಗಿಯಾದರು. ಈ ಸಂದರ್ಭದಲ್ಲಿ ಮಾತನಾಡಿದ ಯಶ್ ಪಾಲ್ […]

ಕೆಳಾರ್ಕಳಬೆಟ್ಟು: 25 ಭೂ ಮಾಲೀಕರಿಗೆ ಶಾಸಕರಿಂದ ಉಡುಪಿ ಕೇದಾರ ಕಜೆ ಅಕ್ಕಿ ವಿತರಣೆ

ಉಡುಪಿ: ಹಡಿಲು ಭೂಮಿ ಕೃಷಿಗೆ ಸಹಕರಿಸಿದ ಕೆಳಾರ್ಕಳಬೆಟ್ಟು ವ್ಯಾಪ್ತಿಯ 25 ಭೂ ಮಾಲೀಕರಿಗೆ ಗುರುವಾರ ಉಡುಪಿ ಕೇದಾರ ಕಜೆ ಅಕ್ಕಿ ವಿತರಣೆ ಮಾಡಲಾಯಿತು. ಕೇದಾರೋತ್ಥಾನ ಟ್ರಸ್ಟ್ ನ ಅಧ್ಯಕ್ಷರೂ ಆಗಿರುವ ಶಾಸಕ ಕೆ. ರಘುಪತಿ ಭಟ್ ಅವರು ಭೂ ಮಾಲೀಕರಿಗೆ ಅಕ್ಕಿ ವಿತರಿಸಿ ಅಭಿನಂದನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ತೆಂಕನಿಡಿಯೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಗಾಯತ್ರಿ, ಕೇದಾರೋತ್ಥಾನ ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ಮುರಳಿ ಕಡೆಕಾರ್, ಕೋಶಾಧಿಕಾರಿ ರಾಘವೇಂದ್ರ ಕಿಣಿ ಮತ್ತು ತೆಂಕನಿಡಿಯೂರು ಗ್ರಾಮ ಪಂಚಾಯತ್ ಸದಸ್ಯರು, […]

ಶಿರೂರು: ಮೀನುಗಾರಿಕೆ ವೇಳೆ ಕಾಲಿಗೆ ಬಲೆ ಸಿಲುಕಿ ನೀರಿಗೆ ಬಿದ್ದು ಯುವ ಮೀನುಗಾರ ಸಾವು

ಬೈಂದೂರು: ಆಳ ಸಮುದ್ರದಲ್ಲಿ ಮೀನುಗಾರಿಕೆ ಮಾಡುತ್ತಿದ್ದ ವೇಳೆ ಕಾಲಿಗೆ ಬಲೆ ಸಿಲುಕಿದ ಪರಿಣಾಮ ಮೀನುಗಾರನೋರ್ವ ಸಮುದ್ರದ ನೀರಿಗೆ ಬಿದ್ದು ಮೃತಪಟ್ಟ ಘಟನೆ ಬುಧವಾರ ನಡೆದಿದೆ. ಶಿರೂರು ಅಳ್ವೆಗದ್ದೆ ನಿವಾಸಿ 25 ವರ್ಷದ ನಾಗರಾಜ ಮೊಗೇರ್ ಮೃತ ಮೀನುಗಾರ. ಕ್ರಿಯಾಶೀಲ ಯುವಕನಾಗಿದ್ದ ಈತ ಎರಡು ದಿನದ ಹಿಂದಷ್ಟೆ ಬೋಟಿಗೆ ತೆರಳಿದ್ದ ಎನ್ನಲಾಗಿದೆ. ಮೃತದೇಹವನ್ನು ಬೋಟ್ ಮೂಲಕ ಭಟ್ಕಳ ಬಂದರಿಗೆ ತಂದು ಬಳಿಕ ಸರಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ವಾರಿಸುದಾರರಿಗೆ ನೀಡಲಾಗಿದೆ.

ಈ ಇರುವೆ ತಿಂದ್ರೆ ಆಯುಷ್ಯ ಹೆಚ್ಚಾಗುತ್ತಾ? ಏನಂತಾರೆ ಸಂಶೋಧಕರು?

ಇರುವೆಗಳನ್ನು ಆಹಾರವಾಗಿ ಸ್ವೀಕರಿಸುವ ಆಹಾರ ಸಂಸ್ಕೃತಿ ಆದಿವಾಸಿಗಳಲ್ಲಿದೆ. ಪ್ರಪಂಚದ ಅನೇಕ ಸ್ಥಳಗಳಲ್ಲಿ ಇರುವೆಗಳನ್ನು ಆಹಾರವಾಗಿ ತಿನ್ನಲಾಗುತ್ತದೆ. ಇತ್ತೀಚೆಗೆ ಛತ್ತೀಸ್‌ಗಢದಲ್ಲಿ ಯುವಕನೊಬ್ಬ  ಗಮನ ಸೆಳೆದಿದ್ದು, ಆ ಹುಡುಗನ ಧಾಬಾದಲ್ಲಿ ಇರುವೆ ಚಟ್ನಿ ಭಾರೀ ಫೇಮಸ್ಸಂತೆ. ಪ್ರಪಂಚದ ಅನೇಕ ಸ್ಥಳಗಳಲ್ಲಿ ಇರುವೆಗಳನ್ನು ವಿವಿಧ ರೀತಿಯಲ್ಲಿ ತಿನ್ನಲಾಗುತ್ತದೆ. ಅನೇಕ ಸ್ಥಳಗಳಲ್ಲಿ, ಇದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ, ದೃಷ್ಟಿಗೆ ಶಕ್ತಿ ನೀಡುತ್ತದೆ ಎಂದು ಹೇಳಲಾಗುತ್ತದೆ.ಕೋವಿಡ್ -19 ರ ಎರಡನೇ ಅಲೆಯ ಸಮಯದಲ್ಲಿ, ಕೆಂಪು ಇರುವೆ ಚಟ್ನಿ ಬಗ್ಗೆ ಬಹಳ ಚರ್ಚೆಯಾಗಿತ್ತು ಕೂಡ. ಕರ್ನಾಟಕದ […]

ಬನ್ನಂಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ: ರಥೋತ್ಸವ ಸಂಭ್ರಮ

ಉಡುಪಿ: ಬನ್ನಂಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮಹಾ ಶಿವರಾತ್ರಿ ಪ್ರಯುಕ್ತ ಮಂಗಳವಾರ ರಾತ್ರಿ  ದೇವರ ಸನ್ನಿದಿಯಲ್ಲಿ ಸಾಮೂಹಿಕ ಪ್ರಾರ್ಥನೆ, ಪಲ್ಲಕಿ ಉತ್ಸವ, ಉತ್ಸವ ಬಲಿ, ರಥೋತ್ಸವದಲ್ಲಿ  ಚಂಡೆ ವಾದನ, ಮಂಗಳವಾದ್ಯ, ಬಿರುದು ವಾಲಿಗಳಿಂದ  ಸಂಭ್ರಮದಿಂದ ರಥೋತ್ಸವ ಜರಗಿತು. ಸುಡುಮದ್ದು ಪ್ರದರ್ಶನ, ಓಲಗ ಮಂಟಪ ಪೂಜೆ ಇತ್ಯಾದಿ  ಧಾರ್ಮಿಕ ಪೂಜಾ ವಿಧಾನಗಳನ್ನು  ಶ್ರೀನಿವಾಸ ತಂತ್ರಿಗಳ  ಮಾರ್ಗ ದರ್ಶನದಲ್ಲಿ, ಚಂದ್ರಶೇಖರ ಐತಾಳ, ಯೋಗೀಶ್ ಉಪಾಧ್ಯ  ಪೂಜಾ ವಿಧಿಗಳನ್ನು ನೆರವೇರಿಸಿದರು. ಪ್ರಧಾನ ಅರ್ಚಕರಾದ ವಾಸುದೇವ ಉಪಾಧ್ಯ, ಅರ್ಚಕ ಮಧುಸೂದನ ಉಪಾಧ್ಯ, ದೇವಳದ […]