ಈ ಇರುವೆ ತಿಂದ್ರೆ ಆಯುಷ್ಯ ಹೆಚ್ಚಾಗುತ್ತಾ? ಏನಂತಾರೆ ಸಂಶೋಧಕರು?

ಇರುವೆಗಳನ್ನು ಆಹಾರವಾಗಿ ಸ್ವೀಕರಿಸುವ ಆಹಾರ ಸಂಸ್ಕೃತಿ ಆದಿವಾಸಿಗಳಲ್ಲಿದೆ. ಪ್ರಪಂಚದ ಅನೇಕ ಸ್ಥಳಗಳಲ್ಲಿ ಇರುವೆಗಳನ್ನು ಆಹಾರವಾಗಿ ತಿನ್ನಲಾಗುತ್ತದೆ. ಇತ್ತೀಚೆಗೆ ಛತ್ತೀಸ್‌ಗಢದಲ್ಲಿ ಯುವಕನೊಬ್ಬ  ಗಮನ ಸೆಳೆದಿದ್ದು, ಆ ಹುಡುಗನ ಧಾಬಾದಲ್ಲಿ ಇರುವೆ ಚಟ್ನಿ ಭಾರೀ ಫೇಮಸ್ಸಂತೆ.
ಪ್ರಪಂಚದ ಅನೇಕ ಸ್ಥಳಗಳಲ್ಲಿ ಇರುವೆಗಳನ್ನು ವಿವಿಧ ರೀತಿಯಲ್ಲಿ ತಿನ್ನಲಾಗುತ್ತದೆ. ಅನೇಕ ಸ್ಥಳಗಳಲ್ಲಿ, ಇದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ, ದೃಷ್ಟಿಗೆ ಶಕ್ತಿ ನೀಡುತ್ತದೆ ಎಂದು ಹೇಳಲಾಗುತ್ತದೆ.ಕೋವಿಡ್ -19 ರ ಎರಡನೇ ಅಲೆಯ ಸಮಯದಲ್ಲಿ, ಕೆಂಪು ಇರುವೆ ಚಟ್ನಿ ಬಗ್ಗೆ ಬಹಳ ಚರ್ಚೆಯಾಗಿತ್ತು ಕೂಡ. ಕರ್ನಾಟಕದ ಬಹಳಷ್ಟು ಆದಿವಾಸಿಗಳಿಗೆ ಕೆಂಜಿರುವೆ ತಿನ್ನುವ ಅಭ್ಯಾಸವಿದೆ.
ಛತ್ತೀಸ್‌ಗಢದ ಬುಡಕಟ್ಟು ಪ್ರದೇಶಗಳಲ್ಲಿ ಈ ಚಟ್ನಿಯನ್ನು ಹೆಚ್ಚು ಬಳಸಲಾಗುತ್ತದೆ. 23ರ ಹರೆಯದ ಯುವಕನೊಬ್ಬ ಬಸ್ತಾರ್ ಜಿಲ್ಲೆಯ ತನ್ನ ಧಾಬಾದಲ್ಲಿ ಇಂತಹ ಚಟ್ನಿ ನೀಡಲು
ಆರಂಭಿಸಿದ್ದಾನೆ ಎಂಬ ಸುದ್ದಿಯೂ ಇದೆ. ಅಲ್ಲದೇ ಇದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೂ ಗ್ರಾಸವಾಗಿದೆ.

ಪ್ರಪಂಚದ ಅನೇಕ ಸ್ಥಳಗಳಲ್ಲಿ ಇರುವೆಗಳನ್ನು ಮಾನವ ಆಹಾರವಾಗಿ ಬಳಸಲಾಗುತ್ತದೆ. ಅನೇಕ ಸ್ಥಳಗಳಲ್ಲಿ ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಮತ್ತು ವಯಸ್ಸನ್ನು ಹೆಚ್ಚಿಸುವ ಆಹಾರ ಎಂದೂ ಕೂಡ ಭಾವಿಸಲಾಗಿದೆ.

ಕೊಲಂಬಿಯಾ ಮಾತ್ರವಲ್ಲದೇ ಮೆಕ್ಸಿಕೋದಲ್ಲೂ ಈ ರೀತಿಯ ಇರುವೆ ತಿನ್ನುವ ಟ್ರೆಂಡ್ ಜಾಸ್ತಿ ಇದೆ. ಮೆಕ್ಸಿಕೋದಲ್ಲಿ, ವಿಶೇಷವಾಗಿ ಮಳೆಗಾಲದಲ್ಲಿ ಹಾರುವ ಇರುವೆಗಳನ್ನು ಹಿಡಿಯಲಾಗುತ್ತದೆ. ಅವುಗಳನ್ನು ಕರಿದ ಮತ್ತು ವಿವಿಧ ಪಾಕಪದ್ಧತಿಗಳಲ್ಲಿ
ಬಳಸಲಾಗುತ್ತದೆ. ಅನೇಕ ಜನರು ಈ ಇರುವೆಗಳನ್ನು ಆಹಾರದಲ್ಲಿ ಬಳಸುತ್ತಿದ್ದಾರೆ.

ಆದಿವಾಸಿಗಳ ಅನುಭವದ ಪ್ರಕಾರ ಇರುವೆ ಸಾಕಷ್ಟು ಕಾಯಿಲೆಗಳಿಗೆ ಮದ್ದಾಗಿ ಬಳಕೆಯಾಗುತ್ತದಂತೆ. ಸಂಶೋದಕರ ಪ್ರಕಾರ ದೇಹಕ್ಕೆ ಚೈತನ್ಯ ನೀಡಿ ಆಯುಷ್ಯ ಹೆಚ್ಚಿಸುವ
ಶಕ್ತಿಯೂ ಇರುವೆಯ