ಪೆರಂಪಳ್ಳಿ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಮಹೋತ್ಸವ ಸಂಭ್ರಮ
ಮಹಾಶಿವರಾತ್ರಿ ಮಹೋತ್ಸವ ಪ್ರಯುಕ್ತ ಪೆರಂಪಳ್ಳಿ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ಮಂಗಳವಾರ ವಿಶೇಷ ಪೂಜೆ ನೆರವೇರಿತು. ಇಂದು ಸಂಜೆ ವಿದ್ವಾನ್ ಹೆರ್ಗ ಜಯರಾಮ ತಂತ್ರಿಗಳು ಹಾಗೂ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಿ.ಎನ್. ಪ್ರಸನ್ನ ಕುಮಾರ್ ನೇತೃತ್ವದಲ್ಲಿ ಶತರುದ್ರಾಭಿಷೇಕ, ಅಷ್ಟೋತ್ತರ ಶತಕುಂಭ ಕ್ಷೀರಾಭಿಷೇಕ ಸಹಿತ ಮಹಾಪೂಜೆ, ಸಾಮೂಹಿಕ ಪ್ರಾರ್ಥನೆ ಹಾಗೂ ಪ್ರಸಾದ ವಿತರಣೆ ಕಾರ್ಯಕ್ರಮ ವೈಭವದಿಂದ ಜರಗಿತು. ನೂರಾರು ಭಕ್ತರು ವಿಶೇಷ ಪೂಜೆಯಲ್ಲಿ ಪಾಲ್ಗೊಂಡು ದೇವರ ಪ್ರಸಾದ ಸ್ವೀಕರಿಸಿದರು.
ಮಲ್ಪೆ ಕಡಲ ಕಿನಾರೆಯಲ್ಲಿ ಮೂಡಿ ಬಂತು ಶಿವನ ಸುಂದರ ಮರಳು ಶಿಲ್ಪ
ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ಮಲ್ಪೆ ಕಡಲ ಕಿನಾರೆಯ ಮರಳಲ್ಲಿ ಶಿವ ಪ್ರತ್ಯಕ್ಷಗೊಂಡಿದ್ದಾನೆ. ಮಣಿಪಾಲ ತ್ರಿವರ್ಣ ಕಲಾ ಕೇಂದ್ರದ ಹವ್ಯಾಸಿ ಕಲಾವಿದ ವಿದ್ಯಾರ್ಥಿಗಳು ಶಿವರಾತ್ರಿ ಹಿನ್ನೆಲೆಯಲ್ಲಿ “ಹರ ಹರ ಮಹಾದೇವ” ಎಂಬ ಶೀರ್ಷಿಕೆಯಡಿ ಈ ಸುಂದರ ಮರಳು ಶಿಲ್ಪ ರಚಿಸಿದ್ದಾರೆ. ಡಾ.ಜಿ.ಎಸ್.ಕೆ.ಭಟ್, ಅನೂಷ ಆಚಾರ್ಯ, ವಿದ್ಯಾರಾಣಿ, ಸಂತೋಷ್ ಭಟ್, ಜಿ.ಯಶಾ, ಸಂದೇಶ್ ನಾಯಕ್ ಮೊದಲಾದವರು ರಚಿಸಿರುವ ಅಪೂರ್ವ ಮರಳು ಕಲಾಕೃತಿ ಇದು. ಈ ಕಲಾಕೃತಿ 4.5 ಅಡಿ ಎತ್ತರ ಮತ್ತು 12 ಅಡಿ ಅಗಲವಿದೆ. ಶಿವನ ಸುಂದರ ಮರಳು […]
ಬಿಎಸ್ಸೆನ್ನೆಲ್ ನಲ್ಲಿದೆ ಉದ್ಯೋಗ: ಈ ಕೂಡಲೇ ಅರ್ಜಿ ಸಲ್ಲಿಸಿ
ಬಿಎಸ್ಸೆನ್ನೆಲ್ ನಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಒಟ್ಟು 27 ಡಿಪ್ಲೋಮಾ ಅಪ್ರೆಂಟಿಸ್(Diploma Apprentice) ಹುದ್ದೆಗಳು ಇಲ್ಲಿ ಖಾಲಿ ಇವೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಮಾರ್ಚ್ 20 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ. ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಬಿಎಸ್ಎನ್ಎಲ್(BSNL)ನ ಅಧಿಕೃತ ವೆಬ್ಸೈಟ್ bsnl.co.in ಗೆ ಭೇಟಿ ನೀಡಿ. ಹುದ್ದೆಯ ಹೆಸರು ಡಿಪ್ಲೊಮಾ ಅಪ್ರೆಂಟಿಸ್ ವಿದ್ಯಾರ್ಹತೆ ಎಂಜಿನಿಯರಿಂಗ್ ಒಟ್ಟು ಹುದ್ದೆಗಳು 27 ಉದ್ಯೋಗದ ಸ್ಥಳ ಭಾರತದಲ್ಲಿ […]
ಮಣಿಪಾಲ: ಯುವಕ ನೇಣಿಗೆ ಶರಣು
ಮಣಿಪಾಲ: ಜೀವನದಲ್ಲಿ ಜಿಗುಪ್ಸೆಗೊಂಡು ಯುವಕನೋರ್ವ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಣಿಪಾಲ ಅನಂತ ನಗರದಲ್ಲಿ ನಡೆದಿದೆ. ಮೊಹಮ್ಮದ್ ನಿಹಾಲ್ ನೇಣಿಗೆ ಶರಣಾದ ಯುವಕ. ಇವರು ಕೆಲವು ವರ್ಷಗಳಿಂದ ಅಸ್ತಮಾ ಖಾಯಿಲೆಯಿಂದ ಬಳಲುತ್ತಿದ್ದರು. ಇದೇ ಖಿನ್ನತೆಯಲ್ಲಿದ್ದ ನಿಹಾಲ್ ಫೆ.28 ರಂದು ಮುಂಜಾನೆ ತಾನು ವಾಸವಿದ್ದ ರೂಮಿನಲ್ಲಿ ಸೀಲಿಂಗ್ ಫ್ಯಾನಿಗೆ ನೇಣುಬಿಗಿದುಕೊಂಡು ಆತ್ಮ ಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜೂನ್ ನಿಂದ ಶುರುವಾಗಲಿದ್ಯಾ ಕೊರೊನಾ ನಾಲ್ಕನೇ ಅಲೆ? ತಜ್ಞರು ಏನಂತಾರೆ?
ಕೊರೋನಾ ಕಾಟ ಮತ್ತೆ ಶುರುವಾಗುವ ಲಕ್ಷಣ ಕಾಣ್ತಿದೆ.ಭಾರತದಲ್ಲಿ ಜೂನ್ ನಿಂದ ಕೊರೋನಾ ನಾಲ್ಕನೆಯ ಅಲೆ ಶುರುವಾಗಲಿದೆಯಂತೆ ಎನ್ನುವುದು ಈ ಕ್ಷಣದ ಲೆಟೆಸ್ಟ್ ಅಪ್ ಡೇಟ್. ಹೌದು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾನ್ಪುರ (ಐಐಟಿ-ಕೆ) ಸಂಶೋಧಕರು ಇಲ್ಲೊಂದು ಆಘಾತಕಾರಿ ಸುದ್ದಿಯೊಂದನ್ನು ಬಿಚ್ಚಿಟ್ಟಿದ್ದಾರೆ ನೋಡಿ. ಅದೇನಪ್ಪಾ ಎಂದರೆ ಭಾರತದಲ್ಲಿ ಜೂನ್ನಲ್ಲಿ ನಾಲ್ಕನೇ ಅಲೆ ಶುರುವಾಗಲಿದೆಯಂತೆ ಎಂದು ಸಂಶೋದಕರು ಭವಿಷ್ಯ ನುಡಿದಿದ್ದಾರೆ. ಐಐಟಿ-ಕೆ ಸಂಶೋಧಕರು ನಡೆಸಿದ ಸಂಶೋಧನೆಯ ಪ್ರಕಾರ, ಭಾರತವು ಜೂನ್ ತಿಂಗಳ ಮಧ್ಯ ಅಥವಾ ಅಂತ್ಯದಲ್ಲಿ ಕೋವಿಡ್-19 ನಾಲ್ಕನೆಯ […]