ಬಿಎಸ್ಸೆನ್ನೆಲ್ ನಲ್ಲಿದೆ ಉದ್ಯೋಗ: ಈ ಕೂಡಲೇ ಅರ್ಜಿ ಸಲ್ಲಿಸಿ

ಬಿಎಸ್ಸೆನ್ನೆಲ್ ನಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಒಟ್ಟು 27 ಡಿಪ್ಲೋಮಾ ಅಪ್ರೆಂಟಿಸ್(Diploma Apprentice) ಹುದ್ದೆಗಳು ಇಲ್ಲಿ ಖಾಲಿ ಇವೆ.

ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆನ್​ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಮಾರ್ಚ್​​ 20 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ. ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಬಿಎಸ್​ಎನ್​ಎಲ್(BSNL)​ನ ಅಧಿಕೃತ ವೆಬ್​ಸೈಟ್​​ bsnl.co.in ಗೆ ಭೇಟಿ ನೀಡಿ.

ಹುದ್ದೆಯ ಹೆಸರು ಡಿಪ್ಲೊಮಾ ಅಪ್ರೆಂಟಿಸ್​
ವಿದ್ಯಾರ್ಹತೆ ಎಂಜಿನಿಯರಿಂಗ್
ಒಟ್ಟು ಹುದ್ದೆಗಳು 27
ಉದ್ಯೋಗದ ಸ್ಥಳ ಭಾರತದಲ್ಲಿ ಎಲ್ಲಿ ಬೇಕಾದರೂ
ವೇತನ ಮಾಸಿಕ ₹ 8,000
ಅರ್ಜಿ ಸಲ್ಲಿಕೆ ಬಗೆ ಆನ್​ಲೈನ್​
ಅರ್ಜಿ ಸಲ್ಲಿಕೆ ಆರಂಭ ದಿನಾಂಕ 22/02/2022
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 20/03/2022